ಶಿವಮೊಗ್ಗ: ನಗರದ ತುಂಗಾ ಕಾಲುವೆಯಲ್ಲಿ ಅಪರಿಚಿತ ಮಹಿಳೆಯ ಶವ ಪತ್ತೆಯಾಗಿದೆ.
ತುಂಗಾ ಕಾಲುವೆಯಲ್ಲಿ ಅಪರಿಚಿತ ಮಹಿಳೆಯ ಶವ ಪತ್ತೆ - ಮಹಿಳೆಯ ಶವ ಪತ್ತೆ
ಶಿವಮೊಗ್ಗದ ತುಂಗಾ ಕಾಲುವೆಯಲ್ಲಿ ಅಪರಿಚಿತ ಮಹಿಳೆಯ ಶವ ಪತ್ತೆಯಾಗಿದ್ದು, ಅಗ್ನಿಶಾಮಕ ದಳ ಸಿಬ್ಬಂದಿಗಳು ಶವವನ್ನು ಮೇಲೆತ್ತಿದ್ದಾರೆ.
ತುಂಗಾ ಕಾಲುವೆನಲ್ಲಿ ಅಪರಿಚಿತ ಮಹಿಳೆಯ ಶವ ಪತ್ತೆ
50 ವರ್ಷ ಆಸುಪಾಸಿನ ಮಹಿಳೆಯ ಶವ ನೋಡಿದ ಸ್ಥಳೀಯರು, ಅಗ್ನಿಶಾಮಕ ಠಾಣೆಗೆ ಮಾಹಿತಿ ತಿಳಿಸಿದ್ದಾರೆ. ಸ್ಥಳಕ್ಕೆ ಧಾವಿಸಿದ ಅಗ್ನಿಶಾಮಕ ದಳ ಸಿಬ್ಬಂದಿಗಳು, ಚಾನಲ್ನಲ್ಲಿ ತೇಲಿ ಹೋಗುತ್ತಿದ್ದ ಮಹಿಳೆಯ ಶವವನ್ನು ಹಗ್ಗ ಕಟ್ಟಿ ಮೇಲೆತ್ತಿದ್ದಾರೆ.
ಈ ಸಂಬಂಧ ವಿನೋಬಾ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
Last Updated : Aug 30, 2019, 10:57 AM IST