ಕರ್ನಾಟಕ

karnataka

ETV Bharat / city

ಪೊಲೀಸರಿಗೆ ಎಲ್ಲಾ ರೀತಿಯ ಸೌಲಭ್ಯ ಹೆಚ್ಚಿಸಲಾಗಿದೆ - ಸಚಿವ ಆರಗ ಜ್ಞಾನೇಂದ್ರ - ಶಿವಮೊಗ್ಗ

ರಾಜ್ಯದಲ್ಲಿ ಇನ್ನೂರು ಕೋಟಿ ರೂ. ವೆಚ್ಚದಲ್ಲಿ ಪೊಲೀಸ್‌ ಠಾಣೆಗಳ ನಿರ್ಮಾಣ ಮಾಡುತ್ತಿದ್ದೇವೆ. ಪೊಲೀಸ್‌ ಇಲಾಖೆಯನ್ನು ಸುಭದ್ರವಾಗಿ ಕಟ್ಟಿ ಅಪರಾಧ ಮುಕ್ತ ಕರ್ನಾಟಕ ಮಾಡುತ್ತಿದ್ದು, ಪೊಲೀಸರಿಗೆ ಎಲ್ಲಾ ರೀತಿಯ ಸೌಲಭ್ಯಗಳನ್ನು ಹೆಚ್ಚಿಸಲಾಗಿದೆ ಎಂದು ಗೃಹ ಸಚಿವ ಆರಗ ಜ್ಞಾನೇಂದ್ರ ಶಿವಮೊಗ್ಗದಲ್ಲಿ ಹೇಳಿದ್ದಾರೆ.

All kinds of facilities Increased for state police - Home Minister Araga Gnanendra
ರಾಜ್ಯದ ಪೊಲೀಸರಿಗೆ ಎಲ್ಲಾ ರೀತಿಯ ಸೌಲಭ್ಯ ಹೆಚ್ಚಿಸಲಾಗಿದೆ - ಗೃಹ ಸಚಿವ ಆರಗ ಜ್ಞಾನೇಂದ್ರ

By

Published : Oct 3, 2021, 1:54 AM IST

Updated : Oct 3, 2021, 12:36 PM IST

ಶಿವಮೊಗ್ಗ:ರಾಜ್ಯದ ಪೊಲೀಸರಿಗೆ ಎಲ್ಲಾ ರೀತಿಯ ಸೌಲಭ್ಯಗಳನ್ನು ಹೆಚ್ಚಿಸಲಾಗಿದೆ ಎಂದು ಗೃಹ ಸಚಿವ ಆರಗ ಜ್ಞಾನೇಂದ್ರ ಹೇಳಿದ್ದಾರೆ.

ನಗರದಲ್ಲಿ ಸುದ್ದಿಗಾರೊಂದಿಗೆ ಮಾತನಾಡಿದ ಅವರು, ರಾಜ್ಯದಲ್ಲಿ 200 ಕೋಟಿ ರೂ. ವೆಚ್ಚದಲ್ಲಿ ಪೊಲೀಸ್‌ ಠಾಣೆಗಳ ನಿರ್ಮಾಣ ಮಾಡುತ್ತಿದ್ದೇವೆ. ಪೊಲೀಸ್‌ ಇಲಾಖೆಯನ್ನು ಸುಭದ್ರವಾಗಿ ಕಟ್ಟಿ ಅಪರಾಧ ಮುಕ್ತ ಕರ್ನಾಟಕ ಮಾಡುತ್ತೇವೆ. ಯಡಿಯೂರಪ್ಪ ನೇತೃತ್ವದ ಸರ್ಕಾರ ಹಾಗೂ ಬೊಮ್ಮಯಿ ನೇತೃತ್ವದ ಸರ್ಕಾರ ಪೊಲೀಸ್‌ ಇಲಾಖೆಗೆ ಕೊಟ್ಟಷ್ಟು ಅನುದಾನವನ್ನು ಯಾವ ಸರ್ಕಾರವು ನೀಡಿಲ್ಲ, ಪೊಲೀಸ್‌ ಇಲಾಖೆಯ ಖಾಲಿ ಇರುವ ಹುದ್ದೆಗಳಿಗೆ ನೇಮಕಾತಿ ಮಾಡಿಕೊಳ್ಳಲಾಗುತ್ತಿದೆ ಎಂದು ಸಚಿವರು ಹೇಳಿದರು.

ಪೊಲೀಸರಿಗೆ ಎಲ್ಲಾ ರೀತಿಯ ಸೌಲಭ್ಯ ಹೆಚ್ಚಿಸಲಾಗಿದೆ - ಸಚಿವ ಆರಗ ಜ್ಞಾನೇಂದ್ರ

ಇದೇ ವೇಳೆ ಸಚಿವರು, ಮತಾಂತರ ತಡೆಗಟ್ಟಲು ಸರ್ಕಾರ ಬದ್ಧವಾಗಿದೆ. ಮತಾಂತರ ಮಾಡುವವರ ವಿರುದ್ಧ ಕ್ರಮ ಕೈಗೊಳ್ಳುತ್ತೇವೆ ಎಂದು ಭರವಸೆ ನೀಡಿದರು.
ಶಿವಮೊಗ್ಗ ಜಿಲ್ಲಾ ಗೌಡ ಸಾರಸ್ವತ ಸಮಾಜ ಒಕ್ಕೂಟ ಹಮ್ಮಿಕೊಂಡಿದ್ದ ಅಭಿನಂದನಾ ಸಮಾರಂಭದಲ್ಲಿ ಸಚಿವ ಆರಗ ಜ್ಞಾನೇಂದ್ರ ಅವರನ್ನು ಸನ್ಮಾನಿಸಲಾಯಿತು.

Last Updated : Oct 3, 2021, 12:36 PM IST

ABOUT THE AUTHOR

...view details