ಶಿವಮೊಗ್ಗ:ನಗರದ ಮೂವರಿಗೆ ಕೊರೊನಾ ಸೋಂಕು ದೃಢಪಟ್ಟ ಹಿನ್ನೆಲೆ, ಸೋಂಕಿತರು ವಾಸಿಸುತ್ತಿದ್ದ ಪ್ರದೇಶಗಳನ್ನು ಸೀಲ್ಡೌನ್ ಮಾಡಲಾಗಿದೆ.
ಶಿವಮೊಗ್ಗದಲ್ಲಿ ಮತ್ತೆ ಮೂರು ಏರಿಯಾ ಸೀಲ್ಡೌನ್ - shimoga latest news
ಶಿವಮೊಗ್ಗ ನಗರದ ಮೂವರಿಗೆ ಕೊರೊನಾ ಸೋಂಕು ದೃಢಪಟ್ಟ ಹಿನ್ನೆಲೆ, ಸೋಂಕಿತರ ವಾಸಿಸುತ್ತಿದ್ದ ಏರಿಯಾಗಳನ್ನು ಸೀಲ್ಡೌನ್ ಮಾಡಲಾಗಿದೆ.
ಶಿವಮೊಗ್ಗದಲ್ಲಿ ಮತ್ತೆ ಮೂರು ಏರಿಯಾಗಳು ಸೀಲ್ಡೌನ್
ನಗರದ ಚನ್ನಪ್ಪ ಲೇಔಟ್ನ ಮೊದಲನೇ ಕ್ರಾಸ್, ಹೊಸಮನೆ ಬಡಾವಣೆಯ ಒಂದನೇ ಕ್ರಾಸ್, ಶರಾವತಿ ನಗರ ಎ ಬ್ಲಾಕ್ ಆರನೇ ಕ್ರಾಸ್ ಪ್ರದೇಶಗಳನ್ನು ಸ್ಯಾನಿಟೈಸ್ ಮಾಡಿ, ಸೀಲ್ಡೌನ್ ಮಾಡಲಾಗಿದೆ. ಜಿಲ್ಲೆಯಲ್ಲಿ ಕೊರೊನಾ ಸೋಂಕಿತರ ಸಂಖ್ಯೆ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದ್ದು, ಕಂಟೇನ್ಮೆಂಟ್ ಝೋನ್ಗಳ ಸಂಖ್ಯೆಯೂ ಹೆಚ್ಚುತ್ತಿವೆ.
ಶಿವಮೊಗ್ಗ ನಗರದಲ್ಲಿ 50 ಹಾಗೂ ಜಿಲ್ಲೆಯಲ್ಲಿ ಒಟ್ಟು 77 ಕಂಟೇನ್ಮೆಂಟ್ ಝೋನ್ಗಳಿವೆ.