ಶಿವಮೊಗ್ಗ:ಕಳೆದ ಏಳು ದಿನಗಳಿಂದ ಶಿವಮೊಗ್ಗದ ನೆಹರು ಕ್ರೀಡಾಂಗಣ, ಕುವೆಂಪು ರಂಗ ಮಂದಿರ ಹಾಗೂ ಅಂಬೇಡ್ಕರ್ ಭವನದಲ್ಲಿ ಸಮಾನಂತರ ವೇದಿಕೆಗಳಲ್ಲಿ ದಸರಾ ಕಾರ್ಯಕ್ರಮಗಳು ನಡೆಯುತ್ತಿವೆ. ಏಳನೇ ದಿನವಾದ ಭಾನುವಾರ ನೆಹರು ಕ್ರೀಡಾಂಗಣದಲ್ಲಿ ನಡೆದ ಸಾಂಸ್ಕೃತಿಕ ದಸರಾ ಕಾರ್ಯಕ್ರಮವನ್ನ ನಟಿ ಸುಧಾರಾಣಿ ದೀಪ ಬೆಳಗಿಸುವ ಮೂಲಕ ಉದ್ಘಾಟಿಸಿದರು.
ಶಿವಮೊಗ್ಗ ಸಾಂಸ್ಕೃತಿಕ ದಸರಾ ಕಾರ್ಯಕ್ರಮ ಉದ್ಘಾಟಿಸಿದ ನಟಿ ಸುಧಾರಾಣಿ - ಶಿವಮೊಗ್ಗ ಸುದ್ದಿ
ಕಳೆದ ಏಳು ದಿನಗಳಿಂದ ಶಿವಮೊಗ್ಗದ ನೆಹರು ಕ್ರೀಡಾಂಗಣ, ಕುವೆಂಪು ರಂಗ ಮಂದಿರ ಹಾಗೂ ಅಂಬೇಡ್ಕರ್ ಭವನದಲ್ಲಿ ಸಮಾನಂತರ ವೇದಿಕೆಗಳಲ್ಲಿ ದಸರಾ ಕಾರ್ಯಕ್ರಮಗಳು ನಡೆಯುತ್ತಿವೆ. ಏಳನೇ ದಿನವಾದ ಭಾನುವಾರ ನೆಹರು ಕ್ರೀಡಾಂಗಣದಲ್ಲಿ ನಡೆದ ಸಾಂಸ್ಕೃತಿಕ ದಸರಾ ಕಾರ್ಯಕ್ರಮವನ್ನ ನಟಿ ಸುಧಾರಾಣಿ ದೀಪ ಬೆಳಗಿಸುವ ಮೂಲಕ ಉದ್ಘಾಟಿಸಿದರು.
ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು, ಶಿವಮೊಗ್ಗ ದಸರಾ ರಾಜ್ಯದ ಪ್ರಮುಖ ದಸರಾಗಳಲ್ಲಿ ಒಂದಾಗಿದೆ. ಶಿವಮೊಗ್ಗ ದಸರಾ ತನ್ನ ಕಾರ್ಯಕ್ರಮಗಳ ಮೂಲಕ ನಂ.1 ಸ್ಥಾನದಲ್ಲಿದೆ ಅಂದ್ರೆ ತಪ್ಪಾಗಲಾರದು. ಮಹಾನಗರ ಪಾಲಿಕೆಯು ಹಲವು ಕಲಾವಿದರಿಗೆ ತಮ್ಮ ಕಲೆಯನ್ನು ಪ್ರಸ್ತುತ ಪಡಿಸಲು ವೇದಿಕೆ ಒದಗಿಸಿಕೊಟ್ಟಿದೆ. ಇದು ನಿಜಕ್ಕೂ ಒಳ್ಳೆಯ ಕಾರ್ಯಕ್ರಮವಾಗಿದೆ. ಶಿವಮೊಗ್ಗದಲ್ಲಿ ದಸರಾ ಅದ್ಧೂರಿಯಾಗಿ ನಡೆಯುತ್ತಿರುವುದು ನನಗೆ ತುಂಬಾ ಸಂತೋಷವಾಗಿದೆ ಎಂದರು.
ಕಾರ್ಯಕ್ರಮದಲ್ಲಿ ವಿವಿಧ ಸ್ಪರ್ಧೆಯಲ್ಲಿ ವಿಜೇತರಾದವರಿಗೆ ನಟಿ ಸುಧಾರಾಣಿ ಪ್ರಶಸ್ತಿಯನ್ನು ವಿತರಣೆ ಮಾಡಿದರು. ವೇದಿಕೆ ಕಾರ್ಯಕ್ರಮದ ನಂತರ ಸಮನ್ವಯ ತಂಡ ಶಿವಮೊಗ್ಗದ ಇತಿಹಾಸ ಸಾರುವ ಸುಂದರ ರೂಪಕವನ್ನು ಸುಮಾರು ನೂರು ಕಲಾವಿದರ ಮೂಲಕ ಪ್ರಸ್ತುತ ಪಡಿಸಿತು.