ಕರ್ನಾಟಕ

karnataka

ETV Bharat / city

ಶಿವಮೊಗ್ಗ : ಪೊಲೀಸ್ ಕಾನ್ಸ್​​ಟೇಬಲ್ ಮೇಲೆ ಹಲ್ಲೆ ಮಾಡಿ,ಗಾಜು ನುಂಗಿದ ಆರೋಪಿ - Shivamogga

ಹಲ್ಲೆಗೊಳಗಾದ ಮಂಜುನಾಥ್ ಬೈಕ್​​ನಿಂದ ನೆಲಕ್ಕೆ ಬಿದ್ದಿದ್ದಾರೆ. ಇದರಿಂದ ಅವರ ತಲೆಗೆ ಗಾಯಗಳಾಗಿವೆ. ಇದನ್ನು ನೋಡಿ ಹೆದರಿದ ಆರೋಪಿ ರೂಪೇಶ್, ಬೈಕ್​​ನ ಗಾಜು ಒಡೆದು ನುಂಗಿದ್ದಾನೆ. ತಕ್ಷಣ ಸ್ಥಳೀಯರು ಪೊಲೀಸ್ ಠಾಣೆಗೆ ಮಾಹಿತಿ ನೀಡಿದ್ದಾರೆ. ಬಳಿಕ ಇಬ್ಬರನ್ನು ಮೆಗ್ಗಾನ್ ಆಸ್ಪತ್ರೆಗೆ ದಾಖಲು ಮಾಡಿದ್ದಾರೆ..

Shivamogga
ಆರೋಪಿ ರೂಪೇಶ್ ಹಾಗು ಪೊಲೀಸ್ ಕಾನ್ಸ್​​ಟೇಬಲ್ ಮಂಜುನಾಥ್​​

By

Published : Sep 15, 2021, 5:45 PM IST

ಶಿವಮೊಗ್ಗ :ಪ್ರಕರಣವೊಂದರ ಸಂಬಂಧ ಆರೋಪಿಯನ್ನು ಬಂಧಿಸಲು ತೆರಳಿದ ಪೊಲೀಸ್ ಕಾನ್ಸ್​​ಟೇಬಲ್ ಮೇಲೆ ಹಲ್ಲೆ ನಡೆಸಿದ ಆರೋಪಿ ಬಳಿಕ ಗಾಜು ನುಂಗಿದ ಘಟನೆ ಶಿವಮೊಗ್ಗದಲ್ಲಿ ನಡೆದಿದೆ.

ಪೊಲೀಸ್ ಕಾನ್ಸ್​​ಟೇಬಲ್ ಮೇಲೆ ಹಲ್ಲೆ ಮಾಡಿ, ಗಾಜು ನುಂಗಿದ ಆರೋಪಿ..

ರೂಪೇಶ್​ ಗಾಜು ನುಂಗಿದ ಆರೋಪಿ. ವಿನೋಬನಗರ ಠಾಣೆಯ ಕಾನ್ಸ್​​ಟೇಬಲ್ ಮಂಜುನಾಥ್ ಹಲ್ಲೆಗೊಳಗಾದವರು. ದರೋಡೆ ಪ್ರಕರಣ ಸಂಬಂಧ ರೂಪೇಶ್​​ನನ್ನು ಬಂಧಿಸಲು ತೆರಳಿದ ಸಂದರ್ಭದಲ್ಲಿ ಈ ಘಟನೆ ನಡೆದಿದೆ.

ಹಲ್ಲೆಗೊಳಗಾದ ಮಂಜುನಾಥ್ ಬೈಕ್​​ನಿಂದ ನೆಲಕ್ಕೆ ಬಿದ್ದಿದ್ದಾರೆ. ಇದರಿಂದ ಅವರ ತಲೆಗೆ ಗಾಯಗಳಾಗಿವೆ. ಇದನ್ನು ನೋಡಿ ಹೆದರಿದ ಆರೋಪಿ ರೂಪೇಶ್, ಬೈಕ್​​ನ ಗಾಜು ಒಡೆದು ನುಂಗಿದ್ದಾನೆ. ತಕ್ಷಣ ಸ್ಥಳೀಯರು ಪೊಲೀಸ್ ಠಾಣೆಗೆ ಮಾಹಿತಿ ನೀಡಿದ್ದಾರೆ. ಬಳಿಕ ಇಬ್ಬರನ್ನು ಮೆಗ್ಗಾನ್ ಆಸ್ಪತ್ರೆಗೆ ದಾಖಲು ಮಾಡಿದ್ದಾರೆ.

ಸದ್ಯ ಕಾನ್ಸ್​​ಟೇಬಲ್ ಮಂಜುನಾಥ್​ ಅವರಿಗೆ ಚಿಕಿತ್ಸೆ ನೀಡಿ ಬ್ಯಾಂಡೇಜ್ ಹಾಕಲಾಗಿದೆ. ಇನ್ನು, ರೂಪೇಶ್​​ಗೆ ಸ್ಕ್ಯಾನಿಂಗ್ ಮಾಡಲಾಗುತ್ತಿದೆ. ಆಸ್ಪತ್ರೆಗೆ ವಿನೋಬನಗರ ಪಿಐ ರವಿ ಭೇಟಿ ನೀಡಿ ಪರಿಶೀಲಿಸಿದ್ದಾರೆ.

ABOUT THE AUTHOR

...view details