ಶಿವಮೊಗ್ಗ: ಮಹಾನಗರ ಪಾಲಿಕೆಯ ಎಫ್ಡಿಎ ಸುನೀಲ್ ಕುಮಾರ್ 10 ಸಾವಿರ ರೂಪಾಯಿ ಲಂಚ ಪಡೆಯುವಾಗ ಎಸಿಬಿ ಬಲೆಗೆ ಬಿದ್ದಿದ್ದಾರೆ.
ಭ್ರಷ್ಟರಿಗೆ ಬಿಸಿ: ಎಸಿಬಿ ಅಧಿಕಾರಿಗಳ ಬಲೆಗೆ ಬಿದ್ದ ಮಹಾನಗರ ಪಾಲಿಕೆಯ ಎಫ್ಡಿಎ - shivmogga FDA sunil acb attack news
ಮಹಾನಗರ ಪಾಲಿಕೆಯ ಪ್ರಥಮ ದರ್ಜೆ ಸಹಾಯಕ (ಎಫ್ಡಿಎ) ಸುನೀಲ್ ಕುಮಾರ್ 10 ಸಾವಿರ ರೂ. ಲಂಚ ಪಡೆಯುವಾಗ ಭ್ರಷ್ಟಾಚಾರ ನಿಗ್ರಹ ದಳದ ( ಎಸಿಬಿ) ಬಲೆಗೆ ಬಿದ್ದಿದ್ದಾರೆ.
FDA sunil
ಶಿವಮೊಗ್ಗ ಮಹಾನಗರ ಪಾಲಿಕೆ ಎಫ್ಡಿಎ ಸುನೀಲ್, ಆಶ್ರಯ ಯೋಜನಾ ಕಚೇರಿಯಲ್ಲಿ ಕಾರ್ಯನಿರ್ವಹಿಸುತ್ತಿದ್ದಾರೆ. ಇವರು ಆಶ್ರಯ ನಿವೇಶನ ಹಕ್ಕು ಪತ್ರ ನೀಡಲು 5 ಲಕ್ಷ ರೂ. ಬೇಡಿಕೆ ಇಟ್ಟಿದ್ದು, ಇಂದು ಹರಿಗೆಯ ನಾಗರಾಜ್ ಎಂಬುವರಿಂದ 10 ಸಾವಿರ ರೂ. ಮುಂಗಡ ಹಣ ಪಡೆಯುವಾಗ ಸಿಕ್ಕಿಬಿದ್ದಿದ್ದಾರೆ.
ಡಿವೈಎಸ್ಪಿ ಮನೋಜ್ ಕುಮಾರ್ ನೇತೃತ್ವದಲ್ಲಿ ಇನ್ಸ್ಪೆಕ್ಟರ್ ತಿಪ್ಪೆಸ್ವಾಮಿ ಹಾಗೂ ಸಿಬ್ಬಂದಿ ನಿನ್ನೆ ಸುನೀಲ್ ಕುಮಾರ್ ಅವರ ವಿವೇಕಾನಂದ ಬಡಾವಣೆಯ ಮನೆಯ ಮೇಲೆಯೂ ದಾಳಿ ನಡೆಸಿದ್ದರು.