ಶಿವಮೊಗ್ಗ: ಕೊರೊನಾ ನಂತರದಲ್ಲಿ ಪದವಿ ಕಾಲೇಜುಗಳು ಪುನಾರಂಭಗೊಂಡಿದ್ದು, ತಕ್ಷಣವೇ ಅತಿಥಿ ಉಪನ್ಯಾಸಕರನ್ನು ನೇಮಿಸುವಂತೆ ಆಗ್ರಹಿಸಿ ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್ ವತಿಯಿಂದ ಜಿಲ್ಲಾಧಿಕಾರಿ ಕಛೇರಿ ಎದುರು ಪ್ರತಿಭಟನೆ ನಡೆಸಲಾಯಿತು.
ಪ್ರಸ್ತುತ ಪದವಿ ಕಾಲೇಜುಗಳು ಆರಂಭವಾಗಿದ್ದು, ವಿದ್ಯಾರ್ಥಿಗಳು ಸಹ ಆಗಮಿಸುತ್ತಿದ್ದಾರೆ. ಈ ನಡುವೆ ಪರೀಕ್ಷಾ ದಿನಾಂಕ ಸಹ ನಿಗದಿಯಾಗಿದೆ. ಆದ್ರೇ ಉಪನ್ಯಾಸಕರ ಕೊರತೆಯಿಂದಾಗಿ ತರಗತಿಗಳೇ ನಡೆಯುತ್ತಿಲ್ಲಾ. ಹಾಗಾಗಿ ಕೂಡಲೇ ಸರ್ಕಾರ ಉಪನ್ಯಾಸಕರನ್ನು ನೇಮಿಸುವ ಮೂಲಕ ವಿದ್ಯಾರ್ಥಿಗಳಿಗೆ ಅನುಕೂಲ ಮಾಡಿಕೊಡಬೇಕು ಎಂದು ಒತ್ತಾಯಿಸಿದರು.