ಶಿವಮೊಗ್ಗ: ಸಿಗಂದೂರು ಲಾಂಚ್ನಿಂದ ನದಿಗೆ ಹಾರಿದ ಮಹಿಳೆಯನ್ನು ಲಾಂಚ್ನಲ್ಲಿದ್ದ ವ್ಯಕ್ತಿಗಳು ರಕ್ಷಿಸಿರುವ ಘಟನೆ ಇಂದು ಸಂಜೆ ಸಾಗರದ ಸಿಗಂದೂರು ಬಳಿ ನಡೆದಿದೆ.
ಸಿಗಂದೂರು ಲಾಂಚ್ನಿಂದ ನದಿಗೆ ಹಾರಿದ ಮಹಿಳೆ : ಮುಂದೇನಾಯ್ತು? - A woman try to suicide in Sigandur launch
ಶರಾವತಿ ನದಿಯ ಹಿನ್ನೀರಿನ ಮಧ್ಯ ಭಾಗದಲ್ಲಿ ಸಿಗಂದೂರು ಲಾಂಚ್ನಿಂದ ಮಹಿಳೆಯೊಬ್ಬರು ನದಿಗೆ ಹಾರಿ ಆತ್ಮಹತ್ಯೆಗೆ ಯತ್ನಿಸಿದ್ದು, ಲಾಂಚ್ನಲ್ಲಿದ್ದವರು ಮಹಿಳೆ ರಕ್ಷಿಸಿದ್ದಾರೆ..
ಲಾಂಚ್ನಿಂದ ನದಿಗೆ ಹಾರಿದ ಮಹಿಳೆ
ಹಾವೇರಿ ಜಿಲ್ಲೆಯ ಹಿರೇಕೆರೂರು ಮೂಲದ ಮಹಿಳೆಯೊಬ್ಬರು ಆತ್ಮಹತ್ಯೆಗೆ ಯತ್ನಿಸಿದ್ದಾರೆ. ಸಿಗಂದೂರು ದೇವಸ್ಥಾನಕ್ಕೆ ಹೋಗಿ ದೇವರ ದರ್ಶನ ಪಡೆದು ಸಾಗರ ಕಡೆಗೆ ಬರುತ್ತಿದ್ದ ವೇಳೆ ಶರಾವತಿ ನದಿಯ ಹಿನ್ನೀರಿನ ಮಧ್ಯ ಭಾಗದಲ್ಲಿ ಸಿಗಂದೂರು ಲಾಂಚ್ನಿಂದ ಹಾರಿ ಮಹಿಳೆ ಆತ್ಮಹತ್ಯೆಗೆ ಯತ್ನಿಸಿದ್ದಾರೆ. ಈ ಸಮಯದಲ್ಲಿ ಲಾಂಚ್ನಲ್ಲಿದ್ದ ಪ್ರಕಾಶ್, ಸುದಾಕರ್, ಪ್ರಶಾಂತ ಎಂಬುವರು ತಕ್ಷಣ ಕಾರ್ಯಪ್ರವೃತರಾಗಿ ನದಿಗೆ ಹಾರಿದ್ದ ಮಹಿಳೆಯನ್ನು ರಕ್ಷಿಸಿದ್ದಾರೆ.
ಇನ್ನು, ಮಹಿಳೆ ಪ್ರಾಣಾಪಾಯದಿಂದ ಪಾರಾಗಿದ್ದು, ಸಾಗರ ಆಸ್ಪತ್ರೆಗೆ ದಾಖಲಿಸಲಾಗಿದೆ.
Last Updated : Jun 27, 2021, 8:39 PM IST