ಕರ್ನಾಟಕ

karnataka

ETV Bharat / city

ಆನವಟ್ಟಿಯಲ್ಲಿ ಅಪರೂಪದ ನಂದಿಕಲ್ಲು ದಾನ ಶಾಸನ ಪತ್ತೆ - hoysala era inscription

ಶಿವಮೊಗ್ಗ ಜಿಲ್ಲೆಯ ಸೊರಬ ತಾಲೂಕು ಆನವಟ್ಟಿ ಹೋಬಳಿಯ ನೇರಲಗಿ ಗ್ರಾಮದ ಬಯಲು ಬಸವೇಶ್ವರ ದೇವಸ್ಥಾನದ ಬಳಿ ಹೊಯ್ಸಳರ ಕಾಲದ ಅಪರೂಪದ ನಂದಿಕಲ್ಲು ದಾನ ಶಾಸನ ಪತ್ತೆಯಾಗಿದೆ.

ನಂದಿಕಲ್ಲು ದಾನ ಶಾಸನ

By

Published : Sep 16, 2019, 6:36 PM IST

Updated : Sep 16, 2019, 7:59 PM IST

ಶಿವಮೊಗ್ಗ: ಸೊರಬ ತಾಲೂಕು ಆನವಟ್ಟಿ ಹೋಬಳಿಯ ನೇರಲಗಿ ಗ್ರಾಮದ ಬಯಲು ಬಸವೇಶ್ವರ ದೇವಸ್ಥಾನದ ಬಳಿ ಅಪರೂಪದ ನಂದಿಕಲ್ಲು ದಾನ ಶಾಸನ ಪತ್ತೆಯಾಗಿದೆ.

ಆನವಟ್ಟಿಯಲ್ಲಿ ಅಪರೂಪದ ನಂದಿಕಲ್ಲು ದಾನ ಶಾಸನ ಪತ್ತೆ

ಚೌಕಾಕಾರದಲ್ಲಿರುವ ಈ ಶಾಸನ ಒಂದು ಮೀಟರ್​ ಎತ್ತರ ಹಾಗೂ 30 ಸೆಂ. ಮೀ. ಅಗಲವಿದೆ. ಹೊಯ್ಸಳರ ಕಾಲದ ನಂದಿಕಲ್ಲು ದಾನ ಶಾಸನ ಇದಾಗಿದ್ದು, ಇದರ ಮುಂಭಾಗದಲ್ಲಿ ಆರು ಸಾಲಿನ ಲಿಪಿ ಇದೆ. ವೀರಭದ್ರ ದೇವಾಲಯಕ್ಕೆ ಈ ಶಾಸನವಿರುವ ಭೂಮಿಯನ್ನು ದಾನ ಮಾಡಲಾಗಿದೆ ಅನ್ನೋದು ಈ ಶಾಸನದಲ್ಲಿ ಉಲ್ಲೇಖವಾಗಿದೆ. ಇದು ಕ್ರಿ.ಶ. 17 -18 ಶತಮಾನಕ್ಕೆ ಸೇರಿದ ಶಾಸನವೆಂದು ಹೇಳಲಾಗ್ತಿದೆ.

ಅಷ್ಟಲಕ್ಷ್ಮೀ ವಿಗ್ರಹ

ಮತ್ತೊಂದು ಬಾರಂಗಿ ಗ್ರಾಮದಲ್ಲೂ ಅಷ್ಟಲಕ್ಷ್ಮೀ ವಿಗ್ರಹವೊಂದು ಪತ್ತೆಯಾಗಿದ್ದು, ಇದನ್ನು ಗ್ರಾಮಸ್ಥರು ಜಿಲ್ಲಾ ಪ್ರಾಚ್ಯವಸ್ತು ಇಲಾಖೆಯ ಸಹಾಯಕ‌ ನಿರ್ದೇಶಕ ಶೇಜೇಶ್ವರ್ ಅವರಿಗೆ ನೀಡಲಾಗಿದೆ.

Last Updated : Sep 16, 2019, 7:59 PM IST

ABOUT THE AUTHOR

...view details