ಶಿವಮೊಗ್ಗ:ನಿನ್ನೆ ಅಹಮದಾಬಾದ್ನಿಂದ ಬಂದ 9 ಜನರಲ್ಲಿ 8 ಜನರಿಗೆ ಕೋವಿಡ್-19 ಪಾಸಿಟಿವ್ ಇರುವುದು ದೃಢಪಟ್ಟಿದೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಕೆ.ಎಸ್.ಈಶ್ವರಪ್ಪ ತಿಳಿಸಿದ್ದಾರೆ.
ಶಿವಮೊಗ್ಗ ಜಿಲ್ಲಾಧಿಕಾರಿಗಳ ಕಚೇರಿಯಲ್ಲಿ ನಡೆದ ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ಅವರು, ಕಳೆದ ಫೆಬ್ರವರಿ 27 ರಂದು ಇವರು ಶಿವಮೊಗ್ಗದಿಂದ ಅಹಮದಾಬಾದ್ಗೆ ತೆರಳಿದ್ದರು. ಇವರು ನಿನ್ನೆ ವಾಪಸ್ ಆಗಿದ್ದಾರೆ. ಬಂದವರ ಸ್ವಾಬ್ ಟೆಸ್ಟ್ ನಡೆಸಲಾಗಿದೆ. ಇದರಲ್ಲಿ 8 ಜನರ ವರದಿ ಪಾಸಿಟಿವ್ ಬಂದಿದೆ.
ಇನ್ನೂಂದು ವರದಿಯನ್ನು ಮತ್ತೊಮ್ಮೆ ಟೆಸ್ಟ್ಗೆ ಕಳುಹಿಸಲಾಗಿದೆ. 8 ಜನರಲ್ಲಿ 7 ಜನ ಶಿಕಾರಿಪುರ ತಾಲೂಕಿನವರು ಹಾಗೂ ಓರ್ವ ತೀರ್ಥಹಳ್ಳಿ ತಾಲೂಕಿನವರು ಎಂದು ತಿಳಿದು ಬಂದಿದೆ. ಉಳಿದ ಓರ್ವ ಸಹ ಶಿಕಾರಿಪುರದವರು ಎಂದು ತಿಳಿದು ಬಂದಿದೆ. ಇದರಲ್ಲಿ ಶಿಕಾರಿಪುರದ ಪುರುಷ ರೋಗಿ-808 ರಿಂದ 815ರ ತನಕ ಇರುವ 8 ಜನರನ್ನು ಶಿವಮೊಗ್ಗದ ಸಿಮ್ಸ್ ಕೋವಿಡ್ ಆಸ್ಪತ್ರೆಗೆ ರವಾನೆ ಮಾಡಲಾಗಿದೆ. ಸದ್ಯಕ್ಕೆ ಇವರುಗಳು ಮಾತ್ರ ಆಸ್ಪತ್ರೆಯಲ್ಲಿದ್ದು, ಇವರ ಜೊತೆ ಪ್ರಥಮ ಹಾಗೂ ದ್ವೀತಿಯ ಸಂಪರ್ಕದಲ್ಲಿದ್ದವರನ್ನು ಸಂಜೆ ಒಳಗೆ ಪತ್ತೆ ಮಾಡಿ ಅವರನ್ನು ಸಹ ಕ್ವಾರಂಟೈನ್ ಮಾಡಲಾಗುತ್ತದೆ. ಸದ್ಯ ಇವರೆಲ್ಲಾ ಅಹಮದಾಬಾದ್ನಿಂದ ಬಂದವರಾದ ಕಾರಣ ಶಿವಮೊಗ್ಗ ಜಿಲ್ಲೆಯನ್ನು ಇನ್ನೂ ಗ್ರೀನ್ಝೋನ್ನಲ್ಲಿಯೇ ಮುಂದುವರೆಸಲಾಗುವುದು ಎಂದು ಸಚಿವ ಈಶ್ವರಪ್ಪ ತಿಳಿಸಿದ್ದಾರೆ.
ಇಷ್ಟು ದಿನ ಅಧಿಕಾರಿಗಳು ಉತ್ತಮವಾಗಿ ಕೆಲಸ ನಿರ್ವಹಿಸಿ, ಜಿಲ್ಲೆಯನ್ನು ಗ್ರೀನ್ಝೋನ್ನಲ್ಲಿಡಲು ಸಹಕರಿಸಿದ್ದರು. ಜಿಲ್ಲೆಯಲ್ಲಿ ಮುಂದೆ ಲಾಕ್ಡೌನ್ ಹೆಚ್ಚು ಬಿಗಿಗೊಳಿಸುವ ಹಾಗೂ ಅಂಗಡಿ ಮುಗ್ಗಟ್ಟುಗಳನ್ನು ಬಂದ್ ಮಾಡುವ ಬಗ್ಗೆ ಇನ್ನೂ ಯಾವುದೇ ನಿರ್ಧಾರ ಮಾಡಿಲ್ಲ. ಮುಂದೆ ಚರ್ಚಿಸಿ ತೀರ್ಮಾನ ತೆಗೆದು ಕೊಳ್ಳಲಾಗುವುದು. ಈಗಲಾದರೂ ಜಿಲ್ಲೆಯ ಜನ ಲಾಕ್ಡೌನ್ಅನ್ನು ಗಂಭೀರವಾಗಿ ಪರಿಗಣಿಸಿ, ಲಾಕ್ ಡೌನ್ ಆದೇಶ ಪಾಲಿಸಬೇಕು ಎಂದು ವಿನಂತಿ ಮಾಡಿಕೊಂಡರು.