ಕರ್ನಾಟಕ

karnataka

ETV Bharat / city

ಶಿವಮೊಗ್ಗದಲ್ಲಿ ಮೂವರು ಕೊರೊನಾ ಸೋಂಕಿತರು ಗುಣಮುಖ: ಆಸ್ಪತ್ರೆಯಿಂದ ಡಿಸ್ಚಾರ್ಜ್​ - ಕೋವಿಡ್​​-19

ಜಿಲ್ಲೆಗೆ ಗುಜರಾತ್​ನಿಂದ ಬಂದಿದ್ದ 9 ಜನ ತಬ್ಲಿಘಿಗಳಲ್ಲಿ 8 ಜನಕ್ಕೆ‌ ಕೊರೊನಾ ತಗುಲಿತ್ತು. ಇದರಲ್ಲಿ ಈಗಾಗಲೇ 4 ಜನ ಮೇ 25ರಂದು ಆಸ್ಪತ್ರೆಯಿಂದ ಬಿಡುಗಡೆ ಹೊಂದಿದ್ದರು. ಇಂದು ಮೆಗ್ಗಾನ್ ಆಸ್ಪತ್ರೆಯಿಂದ ಮತ್ತೆ ಮೂವರು ಬಿಡುಗಡೆ ಹೊಂದಿದ್ದಾರೆ.

3-corona-patient-discharge-from-shivamogga-hospital
ಶಿವಮೊಗ್ಗ

By

Published : May 29, 2020, 5:12 PM IST

Updated : May 30, 2020, 9:56 AM IST

ಶಿವಮೊಗ್ಗ:ಮೂವರು ಕೊರೊನಾ ಸೋಂಕಿತರು ಗುಣಮುಖರಾದ ಹಿನ್ನೆಲೆ ಕೋವಿಡ್​ ಆಸ್ಪತ್ರೆ ಸಿಬ್ಬಂದಿ ಚಪ್ಪಾಳೆ ತಟ್ಟುವ ಮೂಲಕ ಬೀಳ್ಕೊಟ್ಟರು.

ಜಿಲ್ಲೆಯಲ್ಲಿ ಮೇ 8ರಂದು ಗುಜರಾತ್​​ನಿಂದ ಬಂದಿದ್ದ 9 ಜನ ತಬ್ಲಿಘಿಗಳಲ್ಲಿ 8 ಜನಕ್ಕೆ‌ ಕೊರೊನಾ ತಗುಲಿತ್ತು. ಇದರಲ್ಲಿ ಈಗಾಗಲೇ 4 ಜನ ಮೇ 25ರಂದು ಆಸ್ಪತ್ರೆಯಿಂದ ಬಿಡುಗಡೆ ಹೊಂದಿದ್ದರು. ಇಂದು ಮೆಗ್ಗಾನ್ ಆಸ್ಪತ್ರೆಯಿಂದ ಮೂವರು ಬಿಡುಗಡೆ ಹೊಂದಿದ್ದಾರೆ. ಇದರಲ್ಲಿ ಓರ್ವ ತೀರ್ಥಹಳ್ಳಿ ತಾಲೂಕಿನವರು, ಉಳಿದ ಇಬ್ಬರು ಶಿಕಾರಿಪುರ ತಾಲೂಕಿನವರು( P-811, P-812 ಮತ್ತು P-814).

ಶಿವಮೊಗ್ಗದಲ್ಲಿ ಮೂವರು ಕೊರೊನಾ ಸೋಂಕಿತರು ಗುಣಮುಖ

ಕೋವಿಡ್ ಪರೀಕ್ಷೆ ನಡೆಸಿದಾಗ ನೆಗೆಟಿವ್ ಬಂದ ಕಾರಣ ಇವರನ್ನು ಮನೆಗೆ ಕಳುಹಿಸಲಾಗುತ್ತಿದೆ. ಅದೇ ರೀತಿ ಆಸ್ಪತ್ರೆಯಿಂದ ಬಿಡುಗಡೆಯಾದವರು ಮತ್ತೆ 14 ದಿನ ಹೋಂ‌ ಕ್ವಾರಂಟೈನ್​ನಲ್ಲಿ ಇರಬೇಕು. ಇವರನ್ನು ಸ್ಥಳೀಯ ಆಶಾ ಕಾರ್ಯಕರ್ತೆಯರು ಮನೆಗೆ ಭೇಟಿ ನೀಡಿ ಪರಿಶೀಲಿಸುತ್ತಿರುತ್ತಾರೆ. ಜಿಲ್ಲೆಯಲ್ಲಿ 34 ಪಾಸಿಟಿವ್ ಕೇಸ್​ಗಳಲ್ಲಿ ಈಗ‌ 7 ಜನ ಬಿಡುಗಡೆಯಾಗಿದ್ದಾರೆ. ಆಸ್ಪತ್ರೆಯಲ್ಲಿ 27 ಜನ ಇದ್ದಾರೆ ಎಂದು ಸಿಮ್ಸ್ ನಿರ್ದೇಶಕ ಡಾ. ಗುರುಪಾದಪ್ಪ‌ ತಿಳಿಸಿದ್ದಾರೆ.

ಜಿ.ಪಂ ಸಿಇಒ‌ ವೈಶಾಲಿ, ಸಿಮ್ಸ್ ನಿರ್ದೇಶಕ ಗುರುಪಾದಪ್ಪ, ಜಿಲ್ಲಾ‌ ಸರ್ಜನ್ ರಘುನಂದನ್‌ ಸೇರಿದಂತೆ ಆಸ್ಪತ್ರೆಯ ನರ್ಸ್​ಗಳು ಚಪ್ಪಾಳೆ ತಟ್ಟುವ ಮೂಲಕ ಆಸ್ಪತ್ರೆಯ ವಾಹನದಲ್ಲಿ ಕೊರೊನಾದಿಂದ ಗುಣಮುಖರಾದವರನ್ನು ಬೀಳ್ಕೂಟ್ಟರು.

Last Updated : May 30, 2020, 9:56 AM IST

ABOUT THE AUTHOR

...view details