ಕರ್ನಾಟಕ

karnataka

ETV Bharat / city

ಭದ್ರಾವತಿ ಖಾಸಗಿ ನರ್ಸಿಂಗ್ ಕಾಲೇಜಿನ 24 ವಿದ್ಯಾರ್ಥಿಗಳಿಗೆ ಕೊರೊನಾ: ಕಾಲೇಜು ಸೀಲ್​ಡೌನ್

ಭದ್ರಾವತಿಯ ನಿರ್ಮಲಾ ನರ್ಸಿಂಗ್ ಕಾಲೇಜಿನಲ್ಲಿ 24 ವಿದ್ಯಾರ್ಥಿಗಳಿಗೆ ಕೊರೊನಾ ಸೋಂಕು ತಗುಲಿರುವುದು ದೃಢಪಟ್ಟಿದ್ದು, ಕಾಲೇಜು ಮತ್ತು ನರ್ಸಿಂಗ್ ಹೋಂ ಅನ್ನು ಸೀಲ್​​ಡೌನ್ ಮಾಡಲಾಗಿದೆ.

students of Nirmala Nursing College tested positive for covid
ನಿರ್ಮಲಾ ನರ್ಸಿಂಗ್ ಕಾಲೇಜು ವಿದ್ಯಾರ್ಥಿಗಳಿಗೆ ಕೊರೊನಾ

By

Published : Dec 9, 2021, 2:03 PM IST

Updated : Dec 9, 2021, 3:52 PM IST

ಶಿವಮೊಗ್ಗ:ಜಿಲ್ಲೆಯ ಭದ್ರಾವತಿ ತಾಲೂಕು ಕಚೇರಿ ರಸ್ತೆಯಲ್ಲಿರುವ ನಿರ್ಮಲಾ ನರ್ಸಿಂಗ್ ಕಾಲೇಜಿನಲ್ಲಿ ಒಂದೇ ದಿನ 24 ಕೋವಿಡ್‌ ಪ್ರಕರಣಗಳು ಪತ್ತೆಯಾಗಿದೆ. ಸೋಂಕು ದೃಢಪಡುತ್ತಿದ್ದಂತೆಯೇ ಕಾಲೇಜನ್ನು ಸೀಲ್​​ಡೌನ್ ಮಾಡಲಾಗಿದೆ ಎಂದು ಜಿಲ್ಲಾಧಿಕಾರಿ ಕೆ.ಬಿ.ಶಿವಕುಮಾರ್ ತಿಳಿಸಿದ್ದಾರೆ.

ಈ ಕಾಲೇಜಿನ ವಿದ್ಯಾರ್ಥಿಗಳು ಪರೀಕ್ಷೆ ಬರೆಯಲು ಶಿವಮೊಗ್ಗಕ್ಕೆ ಬಂದಿದ್ದರು ಎನ್ನಲಾಗಿದೆ. ಪರೀಕ್ಷೆ ಮುಗಿಸಿ ವಾಪಸ್ ಆದವರಲ್ಲಿ ಸಣ್ಣ ಮಟ್ಟಿನ ಜ್ವರ ಕಂಡು ಬಂದ ಹಿನ್ನೆಲೆಯಲ್ಲಿ ತಪಾಸಣೆ ನಡೆಸಿದಾಗ ಕೋವಿಡ್ ದೃಢಪಟ್ಟಿದೆ. ನರ್ಸಿಂಗ್ ಹೋಂ ಜೊತೆಗೇ ಕಾಲೇಜು ಇರುವುದರಿಂದ ನರ್ಸಿಂಗ್ ಹೋಂ ಅನ್ನು ಸಹ ಸೀಲ್​​ಡೌನ್ ಮಾಡಿ ಸ್ಯಾನಿಟೈಸ್​​ ಮಾಡಲಾಗುತ್ತಿದೆ. ಹೀಗಾಗಿ ಇಂದು ನರ್ಸಿಂಗ್ ಹೋಂನಲ್ಲಿ ಒಪಿಡಿ ಸೇವೆ ಬಂದ್ ಮಾಡಲಾಗಿದೆ.

ಇದನ್ನೂ ಓದಿ: ಕೋವಿಡ್ 3ನೇ ಅಲೆ ತಡೆಗೆ ಕಠಿಣ ಕ್ರಮ: ಸಚಿವ ಆರ್​​.ಅಶೋಕ್

ಕಾಲೇಜು ಹಾಗೂ ನರ್ಸಿಂಗ್ ಹೋಂನ ಎಲ್ಲಾ ವಿದ್ಯಾರ್ಥಿಗಳು, ಸಿಬ್ಬಂದಿಯನ್ನು ಕೊರೊನಾ ಪರೀಕ್ಷೆಗೆ ಒಳಪಡಿಸಲಾಗುತ್ತಿದ್ದು, ಪ್ರಕರಣಗಳ ಸಂಖ್ಯೆ ಏರಿಕೆಯಾಗುವ ಸಾಧ್ಯತೆಯಿದೆ. ನರ್ಸಿಂಗ್ ಹೋಂ ಅನ್ನು ಪೊಲೀಸರು ಸುತ್ತುವರೆದಿದ್ದು, ಮುನ್ನೆಚ್ಚರಿಕಾ ಕ್ರಮಗಳನ್ನು ಕೈಗೊಳ್ಳಲಾಗಿದೆ.

Last Updated : Dec 9, 2021, 3:52 PM IST

For All Latest Updates

TAGGED:

ABOUT THE AUTHOR

...view details