ಕರ್ನಾಟಕ

karnataka

ETV Bharat / city

ಭದ್ರಾವತಿ ಬಳಿ ಜಿಂಕೆ ಮಾಂಸದೂಟ ತಯಾರಿಸುತ್ತಿದ್ದವರ ಮೇಲೆ ದಾಳಿ - ವನ್ಯಜೀವಿ ಹತ್ಯೆ ಪ್ರಕರಣ

ಜಿಂಕೆ ಮಾಂಸದೂಟ ತಯಾರಿಸುತ್ತಿದ್ದ ಮನೆಯ ಮೇಲೆ ದಾಳಿ ಮಾಡಿ, ಇಬ್ಬರನ್ನು ಬಂಧಿಸಲಾಗಿದೆ.

ಜಿಂಕೆ ಮಾಸ, Etv Bharat
ಜಿಂಕೆ ಮಾಸ, Etv Bharat

By

Published : Aug 12, 2022, 8:13 AM IST

ಶಿವಮೊಗ್ಗ: ಜಿಂಕೆ ಮಾಂಸದೂಟ ಮಾಡುತ್ತಿದ್ದ ಇಬ್ಬರನ್ನು ಉಂಬ್ಳೆಬೈಲು ವಲಯ ಅರಣ್ಯಾಧಿಕಾರಿಗಳು ಬಂಧಿಸಿದ್ದಾರೆ. ಭದ್ರಾವತಿ ತಾಲೂಕು ಹುಣಸೇಕಟ್ಟೆ ಗ್ರಾಮದ ವೆಂಕಟೇಶ್ ಎಂಬುವರ ಮನೆಯಲ್ಲಿ ಜಿಂಕೆಯ ಮಾಂಸವನ್ನು ಬೇಯಿಸಿ, ಊಟ ತಯಾರು ಮಾಡುವಾಗ ಅರಣ್ಯಾಧಿಕಾರಿಗಳು ದಾಳಿ ನಡೆಸಿದ್ದಾರೆ.

ದಾಳಿ ವೇಳೆ, ಇವರ ಮನೆಯಲ್ಲಿ ಸುಮಾರು ಎರಡು ಕೆಜಿಯಷ್ಟು ಜಿಂಕೆ ಮಾಂಸ ದೊರಕಿದೆ‌. ಜೊತೆಗೆ ಮನೆ ಪರಿಶೀಲಿಸಿದಾಗ ಮಾಂಸವನ್ನು ಕತ್ತರಿಸುವ ಮರದ ತುಂಡು ಹಾಗೂ ಮಚ್ಚು ಪತ್ತೆಯಾಗಿದೆ. ವೆಂಕಟೇಶ್ ಜೊತೆ ಅವರ ಮಗ ಮಂಜುನಾಥ್​​ನನ್ನು ಸಹ ಬಂಧಿಸಲಾಗಿದೆ. ಆರೋಪಿಗಳ ವಿರುದ್ಧ ವನ್ಯಜೀವಿ ಹತ್ಯೆ ಪ್ರಕರಣ ದಾಖಲಿಸಲಾಗಿದೆ. ದಾಳಿಯ ವೇಳೆ ಉಂಬ್ಳೆಬೈಲು ಆರ್​ಎಫ್​​ಒ ತೇಜ್, ಡೆಪ್ಯೂಟಿ ಆರ್​ಎಫ್​ಒ ಅಬ್ದುಲ್ ಕರೀಂ, ಗಿಡ್ಡುಸ್ವಾಮಿ‌ ಸೇರಿದಂತೆ ಇತರರಿದ್ದರು.

(ಇದನ್ನೂ ಓದಿ: ಆಟೋ ಮತ್ತು ಬೈಕ್​ಗೆ ಡಿಕ್ಕಿ ಹೊಡೆದ ಕಾರು.. ಸಹೋದರಿಯರ ಜೊತೆ ತಾಯಿ ಸೇರಿ ಆರು ಜನ ಸಾವು)

ABOUT THE AUTHOR

...view details