ಮೈಸೂರು: ಅಕಸ್ಮಾತ್ತಾಗಿ ನಾಲೆಗೆ ಬಿದ್ದು ಪ್ರಾಣಾಪಾಯದಿಂದ ಒದ್ದಾಡುತ್ತಿದ್ದ ಜಿಂಕೆಯನ್ನ ಯುವಕರು ರಕ್ಷಣೆ ಮಾಡಿರುವ ಘಟನೆ ಕಳಲೆ ಗ್ರಾಮದಲ್ಲಿ ನಡೆದಿದೆ.
ನಾಲೆಗೆ ಬಿದ್ದ ಜಿಂಕೆ ರಕ್ಷಿಸಿದ ಯುವಕರು - ನಂಜನಗೂಡು ತಾಲೂಕಿನ ಕಳಲೆ-ಏಚಗುಂಡ್ಲ ಗ್ರಾಮ
ನಂಜನಗೂಡು ತಾಲೂಕಿನ ಕಳಲೆ-ಏಚಗುಂಡ್ಲ ಗ್ರಾಮಗಳ ರಸ್ತೆಯ ಬೀಚನಹಳ್ಳಿ ಕಬಿನಿ ನಾಲೆಗೆ ಆಯತಪ್ಪಿ ಬಿದ್ದು ಒದ್ದಾಡುತ್ತಿದ್ದ ಜಿಂಕೆಯನ್ನು ಯುವಕರು ರಕ್ಷಣೆ ಮಾಡಿದ್ದಾರೆ.
![ನಾಲೆಗೆ ಬಿದ್ದ ಜಿಂಕೆ ರಕ್ಷಿಸಿದ ಯುವಕರು ಜಿಂಕೆ ರಕ್ಷಿಸಿದ ಯುವಕರು](https://etvbharatimages.akamaized.net/etvbharat/prod-images/768-512-11176240-thumbnail-3x2-lek.jpg)
ಜಿಂಕೆ ರಕ್ಷಿಸಿದ ಯುವಕರು
ಮೈಸೂರಿನಲ್ಲಿ ಜಿಂಕೆ ರಕ್ಷಿಸಿದ ಯುವಕರು
ಜಮೀನಿಗೆ ತೆರಳಿದ್ದ ಗ್ರಾಮದ ಯುವಕರಾದ ರವಿಚಂದ್ರ, ವಿನೋದ್, ರಾಜೇಶ್ ಎಂಬುವರು ನಾಲೆಗೆ ಬಿದ್ದಿದ್ದ ಗಂಡು ಜಿಂಕೆಯನ್ನ ಮೇಲೆತ್ತಿಕೊಂಡು ಬಂದು ರಕ್ಷಣೆ ಮಾಡಿದ್ದಾರೆ. ನಂಜನಗೂಡು ತಾಲೂಕಿನ ಕಳಲೆ-ಏಚಗುಂಡ್ಲ ಗ್ರಾಮಗಳ ರಸ್ತೆಯ ಬೀಚನಹಳ್ಳಿ ಕಬಿನಿ ನಾಲೆಯಲ್ಲಿ ಜಿಂಕೆ ಆಯತಪ್ಪಿ ಬಿದ್ದಿದ್ದು, ಪರಿಣಾಮ ಜಿಂಕೆಯ ಕಾಲುಗಳಿಗೆ ಮತ್ತು ಮುಖಕ್ಕೆ ಗಾಯಗಳಾಗಿವೆ.
ಇನ್ನು ಈ ಕುರಿತು ಯುವಕರು ಅರಣ್ಯ ಇಲಾಖೆ ಅಧಿಕಾರಿಗಳಿಗೆ ಕರೆ ಮಾಡಿ ವಿಷಯ ತಿಳಿಸಿದ್ದು, ಸ್ಥಳಕ್ಕೆ ಅರಣ್ಯ ಇಲಾಖೆಯ ಅಧಿಕಾರಿ ಶರತ್ ಭೇಟಿ ನೀಡಿ, ಜಿಂಕೆಯನ್ನು ವಶಕ್ಕೆ ಪಡೆದು ಚಿಕಿತ್ಸೆಗೆ ಒಳಪಡಿಸಿದ್ದಾರೆ.