ಮೈಸೂರು: ಸಾಲ ಮಾಡಿ ಕೊಂಡುಕೊಂಡಿದ್ದ ಮೊಬೈಲ್ ನೀರಿನಲ್ಲಿ ಬಿದ್ದು ಹಾಳಾಗಿದ್ದಕ್ಕೆ ಮನನೊಂದ ಯುವಕ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡ ಘಟನೆ ನಗರದ ಜನತಾ ಕಾಲೋನಿಯಲ್ಲಿ ನಡೆದಿದೆ. ಮಹೇಂದ್ರ (22)ಆತ್ಮಹತ್ಯೆಗೆ ಶರಣಾದ ಯುವಕ.
ಈತ ಚಿಕನ್ ಅಂಗಡಿಯೊಂದರಲ್ಲಿ ಕೆಲಸ ಮಾಡುತ್ತಿದ್ದ. ಮೊಬೈಲ್ ಗೇಮ್ಗಳನ್ನು ಹೆಚ್ಚಾಗಿ ಆಡುತ್ತಾ ಕಾಲ ಕಳೆಯುತ್ತಿದ್ದ. ಸಾಲ ಮಾಡಿ ಮೊಬೈಲ್ ತೆಗೆದುಕೊಂಡಿದ್ದ. ಆದರೆ ಈತನ ಮೊಬೈಲ್ ಆಕಸ್ಮಿಕವಾಗಿ ನೀರಿಗೆ ಬಿದ್ದು ಹಾಳಾಗಿದ್ದು, ಅದನ್ನು ರಿಪೇರಿ ಮಾಡಲು ಹೆಚ್ಚಿನ ಹಣ ಬೇಕಾಗಿತ್ತು.