ಕರ್ನಾಟಕ

karnataka

ETV Bharat / city

ಸಾವರ್ಕರ್ ಫೋಟೋ ಮುಸ್ಲಿಂ ಏರಿಯಾದಲ್ಲಿ ಇದ್ದಾಗ ಕೋಪ ಬರುವುದಿಲ್ಲವೇ?: ಶಾಸಕ ಯತೀಂದ್ರ ಸಿದ್ದರಾಮಯ್ಯ

ಸಾವರ್ಕರ್ ಏನು ಸ್ವಾತಂತ್ರ ಹೋರಾಟಗಾರರಲ್ಲ. ಸಾವರ್ಕರ್‌ ಮೂಲಭೂತವಾದಿ. ಮುಸ್ಲಿಂ ಏರಿಯಾದಲ್ಲಿ ಸಾವರ್ಕರ್ ಫೋಟೋ ಯಾಕೆ ಇಡಬೇಕು ಎಂಬ ಸಿದ್ದರಾಮಯ್ಯ ಹೇಳಿಕೆಯನ್ನು ಅವರ ಪುತ್ರ ಯತೀಂದ್ರ ಸಮರ್ಥಿಸಿಕೊಂಡಿದ್ದಾರೆ.

Yathindra Siddaramaiah
ಯತೀಂದ್ರ ಸಿದ್ದರಾಮಯ್ಯ

By

Published : Aug 18, 2022, 5:39 PM IST

ಮೈಸೂರು:ಮುಸ್ಲಿಂ ಏರಿಯಾದಲ್ಲಿ ಸಾವರ್ಕರ್ ಫೋಟೋ ಯಾಕೆ ಇಡಬೇಕು ಎಂಬ ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಹೇಳಿಕೆಯನ್ನ ಅವರ ಪುತ್ರ, ಶಾಸಕ ಯತೀಂದ್ರ ಸಿದ್ದರಾಮಯ್ಯ ಸಮರ್ಥಿಸಿಕೊಂಡಿದ್ದಾರೆ. ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಸಂಪೂರ್ಣವಾಗಿ ಹಾಳಾಗಿದೆ. ಬಿಜೆಪಿ ಸರ್ಕಾರ ಅಧಿಕಾರಕ್ಕೆ ಬಂದ ನಂತರ ಕೋಮು ದ್ವೇಷ ಹೆಚ್ಚಾಗಿ ಹರಡುತ್ತಿದೆ. ಒಬ್ಬರನ್ನೊಬ್ಬರು ಸಾಯಿಸುವುದು ಹೆಚ್ಚಾಗುತ್ತಿದೆ. ಇದಕ್ಕೆ ಕಡಿವಾಣ ಹಾಕುವ ಬದಲು ಮುಖ್ಯಮಂತ್ರಿಗಳೇ ಪರೋಕ್ಷವಾಗಿ ಬೆಂಬಲ ನೀಡುತ್ತಿದ್ದಾರೆ ಎಂದು ಆರೋಪಿಸಿದರು.

ನಗರದಲ್ಲಿಂದು ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಬಿಜೆಪಿ ಸರ್ಕಾರದ ವೈಫಲ್ಯತೆಯನ್ನು ಮುಚ್ಚಿ ಹಾಕಲು ಅನಗತ್ಯ ಗಲಭೆ ಸೃಷ್ಟಿಸುತ್ತಿದ್ದಾರೆ. ಸಾವರ್ಕರ್ ಏನು ಸ್ವಾತಂತ್ರ್ಯ ಹೋರಾಟಗಾರರಲ್ಲ. ಆತ ಒಬ್ಬ ಮೂಲಭೂತವಾದಿ. ಮುಸ್ಲಿಮರನ್ನು ಸಾವರ್ಕರ್ ಯಾವತ್ತಿಗೂ ಭಾರತೀಯರು ಎಂದು ಒಪ್ಪಿಕೊಂಡಿರಲಿಲ್ಲ. ಮುಸ್ಲಿಂ ಮತ್ತು ಕ್ರಿಶ್ಚಿಯನ್ ಎರಡನೇ ದರ್ಜೆಯ ಪ್ರಜೆಗಳಾಗಿ ಇರಬೇಕು. ಹಿಂದೂ ರಾಷ್ಟ್ರವನ್ನು, ಹಿಂದೂ ಅಧಿಕಾರ ಒಪ್ಪಿಕೊಂಡು ಎರಡನೇ ದರ್ಜೆ ನಾಗರಿಕರಾಗಿ ಇರಬೇಕೆಂದು ಹೇಳಿದವರು ಎಂದು ಅಸಮಾಧಾನ ಹೊರಹಾಕಿದರು.

ಶಾಸಕ ಯತೀಂದ್ರ ಸಿದ್ದರಾಮಯ್ಯ

ಸಾವರ್ಕರ್ ಅನ್ಯಮತ ದ್ವೇಷಿ, ಹಾಗಾಗಿ ಸಹಜವಾಗಿ ಸಾವರ್ಕರ್ ಫೋಟೋ ಮುಸ್ಲಿಂ ಏರಿಯಾಗಳಲ್ಲಿ ಇದ್ದಾಗ ಕೋಪ ಬರುತ್ತೆ. ಹಿಂದೂ ಏರಿಯಾಗಳಲ್ಲಿ ಮುಸ್ಲಿಂ ನಾಯಕರ ಫೋಟೋ ಹಾಕಿದಾಗ ಕೋಪ ಬರುವುದಿಲ್ಲವೇ? ಹೀಗೆ ಮುಸ್ಲಿಂ ಏರಿಯಾಗಳಲ್ಲಿ ಸಾವರ್ಕರ್ ಫೋಟೋ ಹಾಕಿದಾಗ ಪ್ರಚೋದನಕಾರಿಯಾಗುತ್ತದೆ. ಇಂತಹ ಘಟನೆಗಳನ್ನ ತಡೆಗಟ್ಟುವುದನ್ನು ಬಿಟ್ಟು, ಅನಗತ್ಯ ವಿಚಾರವನ್ನು ಪ್ರಸ್ತಾಪ ಮಾಡುತ್ತಿದ್ದಾರೆ ಎಂದು ಸರ್ಕಾರದ ವಿರುದ್ಧ ಯತೀಂದ್ರ ಸಿದ್ದರಾಮಯ್ಯ ಹರಿಹಾಯ್ದರು.

ಇದನ್ನೂ ಓದಿ:ಮುಸ್ಲಿಂ ಏರಿಯಾ ಅಂದ್ರೆ ಪಾಕಿಸ್ತಾನಕ್ಕೆ ಸೇರಿದ್ಯಾ?: ಸಿದ್ದರಾಮಯ್ಯ ವಿರುದ್ಧ ಸಚಿವ ಅಶೋಕ್ ಕಿಡಿ

ABOUT THE AUTHOR

...view details