ಕರ್ನಾಟಕ

karnataka

ETV Bharat / city

ದುರಸ್ತಿಯಾಗದ ಮೈಸೂರು - ತಿ. ನರಸೀಪುರ ರಸ್ತೆ: ಶಾಸಕ ಡಾ. ಯತೀಂದ್ರ ಸಿದ್ದರಾಮಯ್ಯ ಭೇಟಿ, ಪರಿಶೀಲನೆ - Mysore-T Naraseepur road repair news

ಇನ್ನೂ ಸಂಪೂರ್ಣವಾಗಿ ದುರಸ್ತಿಯಾಗದೆ ಸಂಚಾರಕ್ಕೆ ಅಡಚಣೆಯಾಗುತ್ತಿದ್ದ ಮೈಸೂರು - ತಿ.ನರಸೀಪುರ ರಸ್ತೆಯ ವರುಣ ಕೆರೆ ಸಮೀಪ ರಸ್ತೆ ಬಿರುಕು ಬಿಟ್ಟ ರಸ್ತೆಯನ್ನು ವರುಣ ಕ್ಷೇತ್ರದ ಶಾಸಕ ಡಾ.ಯತೀಂದ್ರ ಸಿದ್ದರಾಮಯ್ಯ ಪರಿಶೀಲನೆ ನಡೆಸಿದರು.

Yateendra Siddaramaiah inspection Mysore-T Naraseepur road
ಡಾ. ಯತೀಂದ್ರ ಸಿದ್ದರಾಮಯ್ಯ

By

Published : Jan 4, 2020, 9:41 PM IST

ಮೈಸೂರು:ಮೈಸೂರು- ತಿ.ನರಸೀಪುರ ರಸ್ತೆಯ ವರುಣ ಕೆರೆ ಸಮೀಪ ರಸ್ತೆ ಬಿರುಕು ಬಿಟ್ಟು ಎರಡೂವರೆ ವರ್ಷಗಳೇ ಕಳೆದು ಹೋಗಿತ್ತು. ಹೀಗಾಗಿ ಇನ್ನೂ ಸಂಪೂರ್ಣವಾಗಿ ರಿಪೇರಿಯಾಗದೇ ಸಂಚಾರಕ್ಕೆ ಅಡಚಣೆಯಾಗುತ್ತಿರುವುದರಿಂದ ವರುಣ ಕ್ಷೇತ್ರದ ಶಾಸಕ ಡಾ.ಯತೀಂದ್ರ ಸಿದ್ದರಾಮಯ್ಯ, ಸ್ಥಳಕ್ಕೆ ದಿಢೀರ್ ಭೇಟಿ ನೀಡಿ ಪರಿಶೀಲನೆ ನಡೆಸಿದರು.

2017ರ ಅಕ್ಟೋಬರ್ 12ರಂದು ಮೈಸೂರು-ತಿ.ನರಸೀಪುರ ರಸ್ತೆಯಲ್ಲಿರುವ ವರುಣಾ ಕೆರೆ ಸಮೀಪ ರಸ್ತೆಯಲ್ಲಿ ಬಿರುಕು ಬಿಟ್ಟಿತ್ತು. ಹೀಗಾಗಿ ಈ ರಸ್ತೆಯಲ್ಲಿ ಮೂರು ವರ್ಷಗಳಿಂದ ಒಂದು ಕಿ.ಮೀ. ಅಂತರದಲ್ಲಿ ವಾಹನಗಳ ಸಂಚಾರಕ್ಕೆ ಅಡಚಣೆಯಾಗುತ್ತಿತ್ತು. ವಾಹನ ಸವಾರರು, ಜನಪ್ರತಿನಿಧಿಗಳು ಹಾಗೂ ಅಧಿಕಾರಿಗಳನ್ನು ಶಪಿಸಿಕೊಂಡು ಹೋಗುತ್ತಿದ್ದರು.

ಶಾಸಕ ಡಾ. ಯತೀಂದ್ರ ಸಿದ್ದರಾಮಯ್ಯರಿಂದ ರಸ್ತೆ ಪರಿಶೀಲನೆ

ಆ ಬಳಿಕ ಕೆಲ ವಾಹನ ಸವಾರರು ಡಾ.ಯತೀಂದ್ರ ಸಿದ್ದರಾಮಯ್ಯ ಅವರಿಗೆ ಕರೆ ಮಾಡಿ, ಕುಸಿದು ಬಿದ್ದಿರುವ ರಸ್ತೆಯನ್ನು ಸರಿಪಡಿಸಿಕೊಡಿ ಎಂದು ಕೇಳಿಕೊಂಡಿದ್ದರು. ಈ ಹಿನ್ನೆಲೆಯಲ್ಲಿ ಮೈಸೂರು - ತಿ. ನರಸೀಪುರ ರಾಷ್ಟ್ರೀಯ ಹೆದ್ದಾರಿಯ ವರುಣ ಕೆರೆಯ ಮುಖ್ಯ ರಸ್ತೆ ದುರಸ್ತಿ ಕಾಮಗಾರಿಯನ್ನು ಶನಿವಾರ ಪರಿಶೀಲಿಸಿದ ಯತೀಂದ್ರ ಸಿದ್ದರಾಮಯ್ಯ, ನಿತ್ಯ ಆಗುತ್ತಿರುವ ಸಂಚಾರ ದಟ್ಟಣೆಯನ್ನು ಗಮನದಲ್ಲಿಟ್ಟುಕೊಂಡು ಪ್ರಗತಿಯಲ್ಲಿರುವ ಕಾಮಗಾರಿಯನ್ನು ಆದಷ್ಟು ಬೇಗ ಪೂರ್ಣಗೊಳಿಸಿ ಮುಕ್ತ ಸಂಚಾರಕ್ಕೆ ಅನುವು ಮಾಡಬೇಕೆಂದು ಅಧಿಕಾರಿಗಳಿಗೆ ಖಡಕ್​​ ಸೂಚನೆ ನೀಡಿದರು.

ಶಾಸಕ ಡಾ. ಯತೀಂದ್ರ ಸಿದ್ದರಾಮಯ್ಯರಿಂದ ರಸ್ತೆ ಪರಿಶೀಲನೆ

ಸದ್ಯ ಮೂರು ವರ್ಷಗಳಿಂದ ಕುಂಟುತ್ತಾ ಸಾಗುತ್ತಿರುವ ಕಾಮಗಾರಿ, ಮುಂದಿನ ದಿನಗಳಲ್ಲಿ ವೇಗ ಪಡೆದುಕೊಳ್ಳಲಿದೆಯಾ ಎಂಬುವುದು ಕುತೂಹಲವಾಗಿದೆ.

ABOUT THE AUTHOR

...view details