ಮೈಸೂರು: ಜಿಲ್ಲೆಯ ಎಚ್.ಡಿ.ಕೋಟೆ ತಾಲೂಕಿನಲ್ಲಿ ವ್ಯಾಕ್ಸಿನ್ ಹಾಕುವ ವೇಳೆ ಮಹಿಳೆಯೊಬ್ಬರು ರಂಪಾಟ ನಡೆಸಿ, ಹಿಡಿಶಾಪ ಹಾಕಿದರು.
ಲಸಿಕೆ ಬೇಡವೆಂದು ಮಹಿಳೆ ರಂಪಾಟ: ವಿಡಿಯೋ ವೈರಲ್ - ಕೊರೊನಾ ಲಸಿಕೆ ಹಾಕಿಸಿಕೊಳ್ಳಲು ಹಿಂದೇಟು
ಕೊರೊನಾ ಲಸಿಕೆ ಹಾಕಿಸಿಕೊಳ್ಳುವಂತೆ ಪರಿಪರಿಯಾಗಿ ಆರೋಗ್ಯ ಇಲಾಖೆ ಸಿಬ್ಬಂದಿ ಬೇಡಿಕೊಂಡರೂ ಸಹ ಮಹಿಳೆ ನಿರಾಕರಿಸಿ ರಂಪಾಟ ಮಾಡಿದ್ದಾಳೆ. ಈ ವೇಳೆ ಗ್ರಾಮಸ್ಥರು ಆಕೆಯನ್ನು ಹಿಡಿದುಕೊಂಡು ಲಸಿಕೆ ಹಾಕಿಸಿದ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
ಲಸಿಕೆ ಹಾಕಿಸಿ ಕೊಳ್ಳುವುದಿಲ್ಲವೆಂದು ರಂಪಾಟ ಮಾಡಿದ ಮಹಿಳೆ
ಕೊರೊನಾ ಲಸಿಕೆ ಹಾಕಿಸಿಕೊಳ್ಳುವಂತೆ ಮಹಿಳೆಗೆ ಪರಿಪರಿಯಾಗಿ ಆರೋಗ್ಯ ಇಲಾಖೆ ಸಿಬ್ಬಂದಿ ಬೇಡಿಕೊಂಡರೂ ಸಹ ಮಹಿಳೆ ನಿರಾಕರಿಸಿ ಓಡಿ ಹೋಗಲು ಮುಂದಾದಾಗ ಗ್ರಾಮಸ್ಥರು ಆಕೆಯನ್ನು ಹಿಡಿದುಕೊಂಡು ಲಸಿಕೆ ಹಾಕಿಸಿದ್ದಾರೆ. ಇದರಿಂದ ರೊಚ್ಚಿಗೆದ್ದ ಮಹಿಳೆ, ಅಧಿಕಾರಿಗಳಿಗೆ ಹಾಗೂ ಗ್ರಾಮಸ್ಥರಿಗೆ ಹಿಡಿಶಾಪ ಹಾಕಿದ್ದು ಕಂಡುಬಂತು.
ಕೊರೊನಾ ಲಸಿಕೆ ಕುರಿತು ಎಷ್ಟೇ ಜಾಗೃತಿ ಮೂಡಿಸುತ್ತಿದ್ದರೂ ಕೂಡ ಕೆಲವರಿಗೆ ಅದರಲ್ಲಿಯೂ ಗ್ರಾಮೀಣ ಪ್ರದೇಶದ ಜನರಿಗೆ ಲಸಿಕೆಯ ಕುರಿತು ಇನ್ನೂ ಭಯ ಹೋಗಿಲ್ಲ.