ಮೈಸೂರು: ಬೇಟೆಗಾರರ ಕೃತ್ಯಕ್ಕೆ ಕಾಡುಹಂದಿಯೊಂದು ಬಲಿಯಾಗಿದೆ. ಸಿಡಿಮದ್ದಿನ ಉಂಡೆ ತಿಂದು ಕಾಡುಹಂದಿ ಸಾವನ್ನಪ್ಪಿರುವ ಘಟನೆ ನಂಜನಗೂಡು ತಾಲೂಕಿನ ಕೋಣನೂರು ಗ್ರಾಮದಲ್ಲಿ ನಡೆದಿದೆ.
ಗ್ರಾಮದ ಶ್ರೀ ಕಟ್ಟೆ ಮಹದೇಶ್ವರಸ್ವಾಮಿ ದೇವಸ್ಥಾನದ ಬಳಿ ಬೇಟೆಗಾರರು ಇಟ್ಟಿದ್ದ ಸಿಡಿಮದ್ದು ತುಂಬಿದ್ದ ಉಂಡೆ ತಿಂದ ಹಂದಿ ಸ್ಥಳದಲ್ಲಿಯೇ ಮೃತಪಟ್ಟಿದ್ದು, ಸ್ಥಳಕ್ಕೆ ಅರಣ್ಯ ಇಲಾಖೆ ಅಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.