ಕರ್ನಾಟಕ

karnataka

ETV Bharat / city

ಕುಡುಕ ಗಂಡನ ಕಾಟ ತಾಳಲಾರದೇ ಆತನ ಕುತ್ತಿಗೆ ಹಿಡಿದು ಕೆಡವಿ ಕೊಂದ ಹೆಂಡತಿ! - Mysore murder case

ಗಂಡನಿಂದ ರಕ್ಷಿಸಿಕೊಳ್ಳಲು ಆತನ ಕುತ್ತಿಗೆ ಹಿಡಿದು ನೆಲಕ್ಕೆ ಕೆಡವಿದಾಗ ಕುಡಿದ ಮತ್ತಿನಲ್ಲಿದ್ದ ಬಸವರಾಜಪ್ಪ ಮೃತಪಟ್ಟಿರಬಹುದೆಂಬ ಶಂಕೆ ವ್ಯಕ್ತವಾಗಿದೆ.‌ ಈ ಸಂಬಂಧ ಸರಗೂರು ಪೊಲೀಸರು ಹೆಂಡತಿ ನೇತ್ರಾಳನ್ನು ಬಂಧಿಸಿ, ತನಿಖೆ ಕೈಗೊಂಡಿದ್ದಾರೆ..

wife murdered her husband in Mysore
ಮೈಸೂರಿನಲ್ಲಿ ಹೆಂಡತಿಯಿಂದ ಗಂಡನ ಕೊಲೆ

By

Published : Jan 22, 2022, 3:11 PM IST

Updated : Jan 22, 2022, 3:57 PM IST

ಮೈಸೂರು: ಕುಡುಕ ಗಂಡನ ಕಾಟ ತಾಳಲಾರದೇ ಹೆಂಡತಿಯೇ ಗಂಡನನ್ನು ಸಾಯಿಸಿರುವ ಘಟನೆ ಮೈಸೂರು ಜಿಲ್ಲೆಯ ಸರಗೂರು ತಾಲೂಕಿನ ಮುಳ್ಳೂರು ಗ್ರಾಮದಲ್ಲಿ ನಡೆದಿದೆ. ಸರಗೂರು ತಾಲೂಕಿನ ಮುಳ್ಳೂರು ಗ್ರಾಮದ ಬಸವರಾಜಪ್ಪ (42) ಮೃತರು.

ಮುಳ್ಳೂರು ಗ್ರಾಮದ ಬಸವರಾಜಪ್ಪ ಮೃತದೇಹ

ಈತ ಪ್ರತಿ ದಿನ ಮದ್ಯಪಾನ ಮಾಡಿ ಹೆಂಡತಿಯೊಂದಿಗೆ ಜಗಳವಾಡಿ ಕಿರುಕುಳ ನೀಡುತ್ತಿದ್ದ. ನಿನ್ನೆ ರಾತ್ರಿಯೂ ಮದ್ಯಪಾನ ಮಾಡಿ ಹೆಂಡತಿ ನೇತ್ರಾಳೊಂದಿಗೆ ಜಗಳವಾಡಿ ಹಲ್ಲೆ ಮಾಡಿದ್ದ ಎನ್ನಲಾಗಿದೆ.

ಇದನ್ನೂ ಓದಿ:ಭಯಾನಕ ವಿಡಿಯೋ: ಕೆಎಸ್​ಆರ್​ಟಿಸಿ ಬಸ್ ಗುದ್ದಿದರೂ ಉಳಿಯಿತು ಬಡ ಜೀವ

ಈ ಸಂದರ್ಭದಲ್ಲಿ ಗಂಡನಿಂದ ರಕ್ಷಿಸಿಕೊಳ್ಳಲು ಆತನ ಕುತ್ತಿಗೆ ಹಿಡಿದು ನೆಲಕ್ಕೆ ಕೆಡವಿದಾಗ ಕುಡಿದ ಮತ್ತಿನಲ್ಲಿದ್ದ ಬಸವರಾಜಪ್ಪ ಮೃತಪಟ್ಟಿರಬಹುದೆಂಬ ಶಂಕೆ ವ್ಯಕ್ತವಾಗಿದೆ.‌ ಈ ಸಂಬಂಧ ಸರಗೂರು ಪೊಲೀಸರು ಹೆಂಡತಿ ನೇತ್ರಾಳನ್ನು ಬಂಧಿಸಿ, ತನಿಖೆ ಕೈಗೊಂಡಿದ್ದಾರೆ.

ನಿಮ್ಮ ಸೂಕ್ತ ಸಂಗಾತಿ ಹುಡುಕುತ್ತಿರುವಿರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ ನೋಂದಣಿ ಉಚಿತ

Last Updated : Jan 22, 2022, 3:57 PM IST

ABOUT THE AUTHOR

...view details