ಮೈಸೂರು:ದಸರಾ ಹಬ್ಬದಲ್ಲಿ ಮೈಸೂರನ್ನು ನೋಡಲು ತುಂಬಾ ಖುಷಿಯಾಗುತ್ತದೆ. ಎಲ್ಲರಿಗೂ ನವರಾತ್ರಿಯ ಶುಭಾಶಯಗಳು ಎಂದು ನಟ ಡಾಲಿ ಧನಂಜಯ ಹೇಳಿದ್ದಾರೆ.
ಮೈಸೂರು ದಸರಾ ಕುರಿತು ನಟ ಡಾಲಿ ಧನಂಜಯ್ ಹೇಳಿದ್ದೇನು? - ನವರಾತ್ರಿಯ ಶುಭಾಶಯಗಳು
ದಸರಾ ಹಬ್ಬದಲ್ಲಿ ಮೈಸೂರನ್ನು ನೋಡಲು ತುಂಬಾ ಖುಷಿಯಾಗುತ್ತದೆ. ಎಲ್ಲರಿಗೂ ನವರಾತ್ರಿಯ ಶುಭಾಶಯಗಳು ಎಂದು ನಟ ಡಾಲಿ ಧನಂಜಯ ಹೇಳಿದ್ದಾರೆ.
ಮೈಸೂರಿನಲ್ಲಿ ವಿದ್ಯಾಭ್ಯಾಸ ಮಾಡಿದ ಧನಂಜಯ, ದಸರಾ ಹಬ್ಬದಲ್ಲಿ ಮೈಸೂರನ್ನು ನೋಡಲು ತುಂಬಾ ಖುಷಿ. ಅದರಲ್ಲೂ ಈ ತಿಂಗಳು ವಿಶೇಷ ಹಾಗೂ ಅದ್ಭುತವಾಗಿರುತ್ತದೆ. ದಸರಾ ಆರಂಭದಿಂದ ಆನೆ ತಾಲೀಮು, ದಸರಾ ಕಾರ್ಯಕ್ರಮಗಳು, ಯುವ ದಸರಾ, ನಾಟಕಗಳು ಎಲ್ಲವೂ ಸುಂದರವಾಗಿರುತ್ತವೆ ಎಂದು ಹಳೆಯ ನೆನಪುಗಳನ್ನು ಮೆಲುಕು ಹಾಕಿದರು.
ಅದರಲ್ಲೂ ಮೈಸೂರಿನ ವಿದ್ಯುತ್ ದೀಪಗಳ ಅಲಂಕಾರ, ವಸ್ತು ಪ್ರದರ್ಶನ ನೆನಪಾಗುತ್ತದೆ. ದಸರಾದಲ್ಲಿ ಇಡೀ ಮೈಸೂರನ್ನು ಸುತ್ತುತ್ತಿದ್ದೆ. ಆದರೆ, ಈಗ ಅಷ್ಟೊಂದು ಸಮಯ ಕೊಟ್ಟು ದಸರಾ ನೋಡಲು ಸಾಧ್ಯವಾಗುತ್ತಿಲ್ಲ. ಮೈಸೂರಿಗೆ ಬಂದಾಗ ನನಗೆ ಖುಷಿಯಾಗುತ್ತದೆ ಎಂದು ಧನಂಜಯ್ ಸ್ವತಃ ವಿಡಿಯೋ ಮೂಲಕ ತಿಳಿಸಿದ್ದಾರೆ.