ರಾಮನಗರ:23 ವರ್ಷಗಳ ಬಳಿಕ ಇದೇ ಮೊದಲ ಬಾರಿಗೆ ಕಣ್ವ ಜಲಾಶಯ ತುಂಬಿ ಕ್ರಸ್ಟ್ ಗೇಟ್ ಮೂಲಕ ನದಿ ಪಾತ್ರಕ್ಕೆ ನೀರು ಬಿಡುಗಡೆ ಮಾಡಲಾಗಿದೆ. 1999ರಲ್ಲಿ ವಿಶ್ವೇಶ್ವರಯ್ಯ ನಿರ್ಮಿಸಿದ ಸ್ವಯಂ ಚಾಲಿತ ಕ್ರಸ್ಟ್ ಗೇಟ್ನಿಂದ ಬೇಬಿ ಸೈಫನ್ ಆಗಿದ್ದು ಬಿಟ್ಟರೆ, ಇದೇ ಪ್ರಥಮ ಬಾರಿಗೆ ಜಲಾಶಯ ತುಂಬಿದೆ. ಹೀಗಾಗಿ 4 ಗೇಟ್ಗಳಿಂದ ನೀರು ಬಿಡಲಾಗಿದೆ.
ಕಣ್ವ ಡ್ಯಾಂನಿಂದ ನೀರು ಬಿಡುಗಡೆ ಹೊಸ ಗೇಟ್ನಿಂದ ಮೊದಲ ಬಾರಿಗೆ ನೀರು ಬಿಡುಗಡೆ ಮಾಡಲಾಗಿದೆ. ಕಳೆದ 22 ವರ್ಷಗಳಿಂದ ನದಿ ಪಾತ್ರದಲ್ಲಿ ರೈತರಿಂದ ಒತ್ತುವರಿ ಆಗಿದ್ದ ಜಮೀನು ನೀರಿನಲ್ಲಿ ಮುಳುಗಿ ಬೆಳೆ ನಾಶವಾಗಿದೆ. ನದಿ ಪಾತ್ರದಲ್ಲಿ ನೀರು ನೋಡಲು ಜನರು ಜಲಾಶಯದತ್ತ ಬರುತ್ತಿದ್ದಾರೆ. ಮುಂಜಾಗ್ರತಾ ಕ್ರಮವಾಗಿ ನದಿ ಪಾತ್ರದ ಗ್ರಾಮಗಳಿಗೆ ಎಚ್ಚರಿಕೆ ನೀಡಲಾಗಿದೆ.
ರಾಜ್ಯದ ಪ್ರಮುಖ ಜಲಾಶಯಗಳ ಇಂದಿನ ನೀರಿನ ಮಟ್ಟ ಹೀಗಿದೆ.
ಮೈಸೂರು: ಕಬಿನಿ ಜಲಾಶಯ
- ಜಲಾಶಯದ ಗರಿಷ್ಠ ಮಟ್ಟ: 2,284 ಅಡಿ
- ಇಂದಿನ ಮಟ್ಟ: 2,283.55 ಅಡಿ
- ಒಳ ಹರಿವು: 7,920 ಕ್ಯೂಸೆಕ್
- ಹೊರ ಹರಿವು: 5,000 ಕ್ಯೂಸೆಕ್
ವಿಜಯಪುರ: ಆಲಮಟ್ಟಿಯ ಡ್ಯಾಂ(ಲಾಲ್ ಬಹದ್ದೂರ್ ಶಾಸ್ತ್ರಿ ಸಾಗರ)
- ಗರಿಷ್ಠ ಮಟ್ಟ: 519.60 ಮೀ.
- ಇಂದಿನ ಮಟ್ಟ: 518.67 ಮೀ.
- ಒಳಹರಿವು: 27,501 ಕ್ಯೂಸೆಕ್
- ಹೊರಹರಿವು: 18,451 ಕ್ಯೂಸೆಕ್
- ಒಟ್ಟು ನೀರಿನ ಸಂಗ್ರಹ ಸಾಮರ್ಥ್ಯ: 123.08 ಟಿಎಂಸಿ
- ಇಂದಿನ ನೀರಿನ ಸಂಗ್ರಹ: 107.721 ಟಿಎಂಸಿ
ಲಿಂಗನಮಕ್ಕಿ ಜಲಾಶಯ:
- ಇಂದಿನ ಮಟ್ಟ: 1,799.55 ಅಡಿ
- ಗರಿಷ್ಠ ಮಟ್ಟ : 1,819 ಅಡಿ
- ಒಳಹರಿವು: 30,756 ಕ್ಯೂಸೆಕ್
- ಹೊರಹರಿವು: 4,431.88 ಕ್ಯೂಸೆಕ್
- ನೀರು ಸಂಗ್ರಹ: 94.75 ಟಿಎಂಸಿ
- ಸಾಮರ್ಥ್ಯ: 151.64 ಟಿಎಂಸಿ
- ಕಳೆದ ವರ್ಷ ಈ ದಿನ ನೀರು ಸಂಗ್ರಹ: 1807.80 ಅಡಿ
ಭದ್ರಾ ಜಲಾಶಯ
- ಇಂದಿನ ಮಟ್ಟ: 184'2¾" ಅಡಿ
- ಗರಿಷ್ಠ ಮಟ್ಟ: 186 ಅಡಿ
- ಒಳಹರಿವು: 5319 ಕ್ಯೂಸೆಕ್
- ಹೊರಹರಿವು: 5319 ಕ್ಯೂಸೆಕ್
- ನೀರು ಸಂಗ್ರಹ: 69.320 ಟಿಎಂಸಿ
- ಸಾಮರ್ಥ್ಯ: 71.535 ಟಿಎಂಸಿ
- ಕಳೆದ ವರ್ಷ ಈ ದಿನದ ನೀರು ಸಂಗ್ರಹ 184'2¾" ಅಡಿ
ಇದನ್ನೂ ಓದಿ:ಹೆಚ್ಚಿದ ಒಳಹರಿವು.. ಕೆಆರ್ಎಸ್ ಭರ್ತಿ, ಇತರೆ ಜಲಾಶಯಗಳ ನೀರಿನ ಮಟ್ಟ ಹೀಗಿದೆ..