ಮೈಸೂರು: ಸಿದ್ದರಾಮಯ್ಯ ವಿರುದ್ಧ ಮಾತನಾಡಲು ವಿಶ್ವನಾಥ್‌ಗೆ ಏನು ಅಧಿಕಾರವಿದೆ ಎಂದು ಮಾಜಿ ಸಚಿವ ಡಾ.ಹೆಚ್.ಸಿ ಮಹಾದೇವಪ್ಪ ವಾಗ್ದಾಳಿ ನಡೆಸಿದ್ದಾರೆ.
ವಿಶ್ವನಾಥ್‌ಗೆ ಸಿದ್ದು ಬಗ್ಗೆ ಮಾತನಾಡಲು ಯಾವ ಅಧಿಕಾರವಿದೆ: ಡಾ.ಹೆಚ್.ಸಿ ಮಹಾದೇವಪ್ಪ - ಮಾಜಿ ಸಚಿವ ಹೆಚ್.ಸಿ. ಮಹಾದೇವಪ್ಪ ಬೈಟ್
ಕಾಂಗ್ರೆಸ್ ಶಾಸಕ ರೋಷನ್ ಬೇಗ್, ಸಿದ್ದರಾಮಯ್ಯ ವಿರುದ್ಧ ಟೀಕೆ ಮಾಡಿರುವುದು ಸರಿ ಎಂದು ಹೇಳಿರುವ ಹೆಚ್. ವಿಶ್ವನಾಥ್ ಹೇಳಿಕೆಗೆ ಪ್ರತಿಕ್ರಿಯಿಸಿದ ಡಾ. ಹೆಚ್.ಸಿ ಮಹಾದೇವಪ್ಪ, ಸಮನ್ವಯ ಸಮಿತಿಯನ್ನು ಜೆಡಿಎಸ್ ಅಧ್ಯಕ್ಷ ದೇವೇಗೌಡ ಹಾಗೂ ರಾಹುಲ್ ಗಾಂಧಿಯವರು ಮಾಡಿದ್ದಾರೆ. ಇದಕ್ಕೆ ಸಿದ್ದರಾಮಯ್ಯ ಅವರನ್ನು ಏಕೆ ಹೊಣೆ ಮಾಡುತ್ತೀರಿ? ಎಂದು ಆಕ್ರೋಶ ವ್ಯಕ್ತಪಡಿಸಿದರು.
ಡಾ. ಹೆಚ್.ಸಿ ಮಹಾದೇವಪ್ಪ
ಮಾಧ್ಯಮಗಳ ಜೊತೆ ಮಾತನಾಡಿದ ಅವರು,ರೋಷನ್ ಬೇಗ್ ಯಾವ ಉದ್ದೇಶ ಇಟ್ಟುಕೊಂಡು ಹೇಳಿದ್ದಾರೋ ಗೊತ್ತಿಲ್ಲ. ಬೇಗ್ ಮನಸ್ಸಿನಲ್ಲಿ ಏನಿಗೆ ಎಂಬುದರ ಕುರಿತು ಅವರನ್ನೇ ಕೇಳಬೇಕು. ರಾಜಕೀಯದಲ್ಲಿ ಯಾವಾಗ ಬೇಕಾದರೂ, ಏನೂ ಬೇಕಾದರೂ ಆಗಬಹುದು. ಸಿದ್ದರಾಮಯ್ಯ ಅವರನ್ನು ಹೊಣೆ ಮಾಡಲು ವಿಶ್ವನಾಥ್ ಅವರಿಗೆ ಏನು ಅಧಿಕಾರವಿದೆ? ಕಳ್ಳರ ಮನಸ್ಸು ಹುಳ್ಳುಳ್ಳಗೆ ಎನ್ನುವ ಹಾಗೆ ಅವರು ಏಕೆ ಮಾತನಾಡಿದರು ಎಂದು ಮಹದೇವಪ್ಪ ಅಸಮಾಧಾನ ತೋರಿಸಿದರು.