ಕರ್ನಾಟಕ

karnataka

ETV Bharat / city

ಮೈಸೂರು : ಲಂಚ ಸ್ವೀಕರಿಸುತ್ತಿದ್ದ ವೇಳೆ ಎಸಿಬಿ ಬಲೆಗೆ ಬಿದ್ದ ಗ್ರಾಮ ಲೆಕ್ಕಾಧಿಕಾರಿ - mysore Bribery case

ಈ ಅರ್ಜಿಯ ವಿಚಾರವಾಗಿ ಬನ್ನಿಕುಪ್ಪೆ ಗ್ರಾಮದ ಗ್ರಾಮ ಲೆಕ್ಕಾಧಿಕಾರಿ ಮಂಜುನಾಥ್ ನನ್ನು ಕೇಳಿದಾಗ ದಾಖಲಾತಿಗಳನ್ನು ತಂದು ಹಾಜರು ಪಡಿಸುವಂತೆ ತಿಳಿಸಿ ಎರಡು ಸಾವಿರ ರೂ. ಪಡೆದಿದ್ದ. ಆಗಸ್ಟ್ 18ರಂದು ಮತ್ತೆ ಗ್ರಾಮ ಲೆಕ್ಕಾಧಿಕಾರಿಯನ್ನು ಭೇಟಿಯಾಗಿ ಖಾತೆ ಬಗ್ಗೆ ಕೇಳಿದಾಗ, 10 ಸಾವಿರ ಬೇಡಿಕೆ ಇಟ್ಟು 7 ಸಾವಿರ ಕೊಡುವಂತೆ ಒತ್ತಾಯಿಸುತ್ತಿದ್ದರು..

Village accountant arrested in Bribery case
ಬನ್ನಿಕುಪ್ಪೆ ಗ್ರಾಮದ ಗ್ರಾಮ ಲೆಕ್ಕಾಧಿಕಾರಿ ಮಂಜುನಾಥ್

By

Published : Aug 21, 2021, 9:46 PM IST

ಮೈಸೂರು: ಜಮೀನಿನ ಖಾತೆ ಮಾಡಿ ಕೊಡಲು ಲಂಚ ಸ್ವೀಕರಿಸುತ್ತಿದ್ದ ಗ್ರಾಮ ಲೆಕ್ಕಾಧಿಕಾರಿ ಎಸಿಬಿ ಅಧಿಕಾರಿಗಳ ಬಲೆಗೆ ಬಿದ್ದಿದ್ದಾನೆ. ಹುಣಸೂರು ತಾಲೂಕಿನ ಬನ್ನಿಕುಪ್ಪೆ ಗ್ರಾಮದ ಗ್ರಾಮ ಲೆಕ್ಕಾಧಿಕಾರಿ ಮಂಜುನಾಥ್(49) ಎಸಿಬಿ ಬಲೆಗೆ ಬಿದ್ದ ಆರೋಪಿ.

ಎಸಿಬಿ ಬಲೆಗೆ ಬಿದ್ದ ಗ್ರಾಮ ಲೆಕ್ಕಾಧಿಕಾರಿ

ಹುಣಸೂರು ತಾಲೂಕಿನ ಮಧುಗಿರಿ ಕೊಪ್ಪಲಿನ ನಿವಾಸಿ ಬೋಗಚಾರಿ ಅವರಿಗೆ, ಬನ್ನಿಕುಪ್ಪೆ ಗ್ರಾಮದ ಸರ್ವೇ 106/10ರಲ್ಲಿ 2 ಎಕರೆ 8 ಗುಂಟೆ ಜಮೀನಿದ್ದು, ಇದನ್ನು ಖಾತೆ ಮಾಡಿಕೊಡುವಂತೆ ಹುಣಸೂರು ತಾಲೂಕು ಕಚೇರಿಗೆ ಜುಲೈ 2ರಂದು ಅರ್ಜಿ ಸಲ್ಲಿಸಿದ್ದರು.

ಈ ಅರ್ಜಿಯ ವಿಚಾರವಾಗಿ ಬನ್ನಿಕುಪ್ಪೆ ಗ್ರಾಮದ ಗ್ರಾಮ ಲೆಕ್ಕಾಧಿಕಾರಿ ಮಂಜುನಾಥ್ ನನ್ನು ಕೇಳಿದಾಗ ದಾಖಲಾತಿಗಳನ್ನು ತಂದು ಹಾಜರು ಪಡಿಸುವಂತೆ ತಿಳಿಸಿ ಎರಡು ಸಾವಿರ ರೂ. ಪಡೆದಿದ್ದ. ಆಗಸ್ಟ್ 18ರಂದು ಮತ್ತೆ ಗ್ರಾಮ ಲೆಕ್ಕಾಧಿಕಾರಿಯನ್ನು ಭೇಟಿಯಾಗಿ ಖಾತೆ ಬಗ್ಗೆ ಕೇಳಿದಾಗ, 10 ಸಾವಿರ ಬೇಡಿಕೆ ಇಟ್ಟು 7 ಸಾವಿರ ಕೊಡುವಂತೆ ಒತ್ತಾಯಿಸುತ್ತಿದ್ದರು.

ಇದರಿಂದ ಬೇಸರಗೊಂಡ ಬೋಗಚಾರಿ ಇಂದು(ಆ.21) ಮೈಸೂರಿನ ಎಸಿಬಿ ಕಚೇರಿಯಲ್ಲಿ ಪ್ರಕರಣ ದಾಖಲಿಸಿದರು.

ಇದನ್ನೂ ಓದಿ:ಪ್ರೇಮಿಗಳಿಂದ ಖಾಸಗಿ ಉದ್ಯೋಗಿ ಹತ್ಯೆಗೆ ಸುಪಾರಿ : ಶೂಟ್​ ಮಾಡಿ ರೌಡಿಶೀಟರ್​​ನ ಬಂಧಿಸಿದ ಖಾಕಿ ಪಡೆ

ಇಂದು ಸಂಜೆ 4ರ ಸಮಯದಲ್ಲಿ ಹುಣಸೂರು ತಾಲೂಕು ಕಚೇರಿ ಬಳಿ ಗ್ರಾಮ ಲೆಕ್ಕಾಧಿಕಾರಿ ಮಂಜುನಾಥ್, ಖಾತೆದಾರ ಬೋಗಚಾರಿಯಿಂದ 7 ಸಾವಿರ ರೂ. ಹಣ ಸ್ವೀಕರಿಸುತ್ತಿದ್ದಾಗ ಎಸಿಬಿ ದಾಳಿ ಮಾಡಿ ಬಂಧಿಸಿದ್ದಾರೆ.

ABOUT THE AUTHOR

...view details