ಕರ್ನಾಟಕ

karnataka

ETV Bharat / city

ಭಾರತ ವಿಶ್ವಗುರುವಾಗಲು ಸರ್ಕಾರ ದಿಟ್ಟ ಹೆಜ್ಜೆ ಹಾಕುತ್ತಿದೆ: ನಿರ್ಮಲಾ​ ಸೀತಾರಾಮನ್‌ - University of Mysore

ದೆಹಲಿಯಲ್ಲಿ ಇರುವವರು ಲಡಾಖ್ ಲೇಹ್​​ನಲ್ಲಿ ವಿಶಾಲ ಆಗಸ ನೋಡಬಹುದು. ಅದು‌ ಮೈಸೂರಿನಲ್ಲೂ ಆಗಬೇಕು. ಕೊಡೈಕೆನಾಲ್ ಕೇಂದ್ರದ ಸೌಲಭ್ಯವೂ ಇಲ್ಲಿದೆ. ಇದು ಕೇವಲ ಪ್ಲಾನಿಟೋರಿಯಂದ ಅಲ್ಲ. ಅದಕ್ಕೂ ಮೀರಿದ್ದು ಇಲ್ಲಿದೆ ಎಂದು ನಿರ್ಮಲಾ​ ಸೀತಾರಾಮನ್ ಹೇಳಿದರು.

nirmala-sitharaman
ನಿರ್ಮಲ್​ ಸೀತಾರಾಮನ್‌

By

Published : Mar 6, 2022, 2:15 PM IST

Updated : Mar 6, 2022, 3:20 PM IST

ಮೈಸೂರು: ಭಾರತ ವಿಶ್ವಗುರುವಾಗಬೇಕು. ಈ ದಿಟ್ಟ ನಿಲುವಿನಲ್ಲಿ ಕೇಂದ್ರ ಸರ್ಕಾರ ಮಹತ್ವದ ಹೆಜ್ಜೆ ಹಾಕುತ್ತಿದೆ ಎಂದು ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಹೇಳಿದರು.

ಮೈಸೂರಿನ ಚಾಮುಂಡಿ ಬೆಟ್ಟದ ತಪ್ಪಲಿನ ತಾವರೆಕಟ್ಟೆ ಸಮೀಪ ಮೈಸೂರು ವಿಶ್ವವಿದ್ಯಾನಿಲಯ ಮತ್ತು ಭಾರತೀಯ ಖಗೋಳ ಭೌತಶಾಸ್ತ್ರ ಸಂಸ್ಥೆಯ ಕಾಸ್ಮೋಲಜಿ ಶಿಕ್ಷಣ ಮತ್ತು ಸಂಶೋಧನಾ ತರಬೇತಿ ಕೇಂದ್ರಕ್ಕೆ ಶಂಕುಸ್ಥಾಪನೆ ನೆರವೇರಿಸಿ ಮಾತನಾಡಿದ ಅವರು, ಖಗೋಳ ಭೌತವಿಜ್ಞಾನ ಕ್ಷೇತ್ರದಲ್ಲಿ ಇಲ್ಲಿಂದ ಬರುವ ಡಾಟಾವನ್ನು ಹೇಗೆ ಬಳಕೆ ಮಾಡುವುದು ಎಂಬುವುದು ಮುಖ್ಯವಾಗಿದೆ. ವಿಜ್ಞಾನ ಕ್ಷೇತ್ರದಲ್ಲಿ ಮಾಹಿತಿ ಇದ್ದರೆ ಸಾಲದು, ಅದನ್ನು ಸಮರ್ಪಕವಾದ ರೀತಿಯಲ್ಲಿ ಬಳಸಿಕೊಳ್ಳಬೇಕು ಎಂದು ಸಲಹೆ ನೀಡಿದರು.

ಕಾಸ್ಮೋಲಜಿ ಶಿಕ್ಷಣ ಮತ್ತು ಸಂಶೋಧನಾ ತರಬೇತಿ ಕೇಂದ್ರ ತೆರೆಯಲು ಮೈಸೂರು ವಿವಿ‌ಯವರು ಸರಿಯಾದ ಜಾಗವನ್ನೇ ನೀಡಿದ್ದಾರೆ. ಸರ್ಕಾರದ ವಿವಿಧ ಇಲಾಖೆಗಳು ಒಟ್ಟಿಗೆ ಸಹಭಾಗಿತ್ವದಿಂದ ಕೆಲಸ ಮಾಡಿದರೆ ಇಂತಹ ಒಂದು ದೊಡ್ಡ ಯೋಜನೆ ಕಾರ್ಯಗತವಾಗುತ್ತದೆ. ಕೋವಿಡ್ ಮಧ್ಯದಲ್ಲೂ 81 ಕೋಟಿ ವೆಚ್ಚದ ಈ ಯೋಜನೆ ಸಿಕ್ಕಿದೆ ಎಂದರು.

ಮೈಸೂರಿನಲ್ಲಿ ಕಾಸ್ಮೋಲಜಿ ಶಿಕ್ಷಣ ಮತ್ತು ಸಂಶೋಧನಾ ತರಬೇತಿ ಕೇಂದ್ರಕ್ಕೆ ಶಂಕುಸ್ಥಾಪನೆ ನೆರವೇರಿಸಿ ಕೇಂದ್ರ ಸಚಿವೆ ನಿರ್ಮಲಾ ಸೀತಾರಾಮನ್​.

ದೆಹಲಿಯಲ್ಲಿ ಇರುವವರು ಲಡಾಖ್ ಲೇಹ್​​ನಲ್ಲಿ ವಿಶಾಲ ಆಗಸ ನೋಡಬಹುದು. ಅದು‌ ಮೈಸೂರಿನಲ್ಲೂ ಆಗಬೇಕು. ಕೊಡೆಕೆನಾಲ್ ಕೇಂದ್ರದ ಸೌಲಭ್ಯವೂ ಇಲ್ಲಿದೆ. ಇದು ಕೇವಲ ಪ್ಲಾನಿಟೋರಿಯಂದ ಅಲ್ಲ. ಅದಕ್ಕೂ ಮೀರಿದ್ದು ಇಲ್ಲಿದೆ ಎಂದು ಹೇಳಿದರು.

ವಿಶೇಷ ವಿವಿ:ಮೈಸೂರು ವಿವಿ ದೇಶದಲ್ಲೇ ವಿಶೇಷವಾಗಿದ್ದು, ಈ ವಿವಿ ಬಗ್ಗೆ ನನಗೆ ಹೆಮ್ಮೆ ಇದೆ. ಹಲವು ಸಾಧನೆಗಳನ್ನು ಈ ವಿವಿ ಮಾಡಿದೆ. ನಾನು ಕರ್ನಾಟಕದ ರಾಜ್ಯಸಭೆ ಸದಸ್ಯೆಯಾಗಿದ್ದೇನೆ. ಮುಂದಿನ ಪೀಳಿಗೆಗೆ ನಾವು ಏನಾದರೂ ಮಾಡಬೇಕಿದೆ. ಜ್ಞಾನವನ್ನು ಶತಮಾನಗಳಿಂದಲೇ ನಮ್ಮವರು ಸೃಷ್ಟಿಸಿದ್ದಾರೆ. ನನಗೆ ಪಿ.ಎಸ್ (ಆಪ್ತ ಸಹಾಯಕ) ಆಗಿದ್ದವರು ಕರ್ನಾಟಕದವರು. ಎರಡು ವರ್ಷದಿಂದ ನನಗೆ ಈ ಯೋಜನೆ ಕುರಿತು ಹೇಳಿದ್ದರು ಎಂದು ನೆನಪು ಮಾಡಿದರು.

ಸಂಸದ ಪ್ರತಾಪ್​ ಸಿಂಹ ಮಾತನಾಡಿ, ಹಲವು ಭಾಷೆಗಳನ್ನು ಮಾತನಾಡುವ ನಿರ್ಮಲಾ ಸೀತಾರಾಮನ್​ ಅವರು ವಿರಳಾತಿವಿರಳ ರಾಜಕಾರಣಿ. ಯಾರ ಅರಿವಿಗೂ ಬಾರದೇ ತಾವೇ ಪ್ಲಾನಿಟೋರಿಯಂ‌ ಕೊಟ್ಟೊದ್ದಾರೆ. ಇದು ಅನಿರೀಕ್ಷಿತ ಉಡುಗೊರೆ. ಕಳೆದೊಂದು ವರ್ಷದಿಂದ ಟಿಬಿಐ ಇನ್ ಕ್ಯೂಬೆಷನ್ ಕೇಂದ್ರ ಕೊಡಿ ಎಂದು ಮನವಿ ಮಾಡಿದ್ದೆ. ಕೇಂದ್ರ ಸರ್ಕಾರ ಮೈಸೂರಿಗೆ ಸಾಕಷ್ಟು ಕೊಡುಗೆ ನೀಡುತ್ತಿದೆ ಎಂದರು.

ಇದನ್ನೂ ಓದಿ:ಉಕ್ರೇನ್‌ ಯುದ್ಧಭೂಮಿಗೆ 3 ಸಾವಿರಕ್ಕೂ ಹೆಚ್ಚು ಅಮೆರಿಕದ 'ಸ್ವಯಂಸೇವಕ'ರ ಆಗಮನ!

ಕೇಂದ್ರ ಸರ್ಕಾರದ ಪ್ರಧಾನ ವೈಜ್ಞಾನಿಕ ಸಲಹೆಗಾರ ಪ್ರೊ.ಕೆ.ವಿಜಯರಾಘವನ್, ಅಣುಶಕ್ತಿ ವಿಭಾಗದ ಕಾರ್ಯದರ್ಶಿ ಕೆ.ಎನ್.ವ್ಯಾಸ, ವಿಜ್ಞಾನ ಮತ್ತು ತಂತ್ರಜ್ಞಾನ ಇಲಾಖೆಯ ಕಾರ್ಯದರ್ಶಿ ಡಾ.ಎಸ್.ಚಂದ್ರಶೇಖರ, ಭಾರತೀಯ ಖಗೋಳ ಭೌತಶಾಸ್ತ್ರ ಸಂಸ್ಥೆ ನಿರ್ದೇಶಕಿ ಪ್ರೊ.ಅನ್ನಪೂರ್ಣಿ ಸುಬ್ರಹ್ಮಣಿಯಂ, ಮೈಸೂರು ವಿಶ್ವವಿದ್ಯಾನಿಲಯದ ಕುಲಪತಿ ಪ್ರೊ.ಹೇಮಂತ ಕುಮಾರ್, ಕುಲಸಚಿವ ಪ್ರೊ.ಆರ್.ಶಿವಪ್ಪ, ಜಿಲ್ಲಾಧಿಕಾರಿ ಡಾ.ಬಗಾದಿ ಗೌತಮ್ ಉಪಸ್ಥಿತರಿದ್ದರು.

Last Updated : Mar 6, 2022, 3:20 PM IST

ABOUT THE AUTHOR

...view details