ಕರ್ನಾಟಕ

karnataka

ETV Bharat / city

ಮೈಸೂರಲ್ಲಿ ಭೀಕರ ಅಪಘಾತ: ಮದುವೆಗೆ ಬಟ್ಟೆ ತರಲೋಗಿದ್ದವ, ಕಂದಮ್ಮ ಸೇರಿ ಮೂವರು ಸಾವು - auto collides with bus

ಮೈಸೂರು - ತಿ.ನರಸೀಪುರ ಹೆದ್ದಾರಿಯಲ್ಲಿ ನಡೆದ ಭೀಕರ ರಸ್ತೆ ಅಪಘಾತದಲ್ಲಿ ಇಬ್ಬರು ಸ್ಥಳದಲ್ಲೇ ಮೃತಪಟ್ಟಿದ್ದು, ಮತ್ತಿಬ್ಬರು ಗಂಭೀರವಾಗಿ ಗಾಯಗೊಂಡಿದ್ದಾರೆ.

ಬಸ್- ಆಟೋ ನಡುವೆ ಡಿಕ್ಕಿ
ಬಸ್- ಆಟೋ ನಡುವೆ ಡಿಕ್ಕಿ

By

Published : Oct 10, 2021, 6:42 PM IST

Updated : Oct 10, 2021, 8:28 PM IST

ಮೈಸೂರು:ಮದುವೆಗೆ ಬಟ್ಟೆ ತರಲು ಹೋಗಿದ್ದವ ಸೇರಿ ಮೂವರು ರಸ್ತೆ ಅಪಘಾತದಲ್ಲಿ ಸ್ಥಳದಲ್ಲೇ ಸಾವನ್ನಪ್ಪಿ, ಇನ್ನಿಬ್ಬರು ಗಂಭೀರವಾಗಿ ಗಾಯಗೊಂಡಿರುವ ಘಟನೆ ತಿ.ನರಸೀಪುರ ತಾಲೂಕಿನ ವರಕೋಡು ಗ್ರಾಮದ ಸಂಭವಿಸಿದೆ.

ತಿ.ನರಸೀಪುರ ತಾಲೂಕಿನ ಇಂದಿರಾ ಕಾಲೋನಿಯ ನಿವಾಸಿಗಳಾದ ಇಮ್ರಾನ್‌ಪಾಷ (30), ಯಾಸ್ಮಿನ್ (28) ಹಾಗೂ ಅಘ್ನಾನ್ (2) ಅಪಘಾತದಲ್ಲಿ ಮೃತಪಟ್ಟವರು. ಅಕ್ಟೋಬರ್​ 28ರಂದು ಇಮ್ರಾನ್ ಪಾಷಾ ಮದುವೆ ನಿಗದಿಯಾಗಿದ್ದರಿಂದ, ಸಂಬಂಧಿಕರೊಡನೆ ಆಟೋದಲ್ಲಿ ತೆರಳುತ್ತಿದ್ದರು. ಈ ವೇಳೆ ತಿ.ನರಸೀಪುರ ತಾಲೂಕಿನ ವರಕೋಡು ಗ್ರಾಮದ ಮೊರಾರ್ಜಿ ದೇಸಾಯಿ ವಸತಿ ಶಾಲೆ ಸಮೀಪದ ತಿರುವಿನಲ್ಲಿ ಬಳಿ ಸಾರಿಗೆ ಬಸ್ ಹಾಗೂ ಆಟೋ ನಡುವೆ ಡಿಕ್ಕಿ ಸಂಭವಿಸಿದೆ.

ಇಮ್ರಾನ್ ಪಾಷ

ಘಟನೆಯಲ್ಲಿ ಆಟೋದಲ್ಲಿದ್ದ ಮೂವರು ಸ್ಥಳದಲ್ಲಿಯೇ ಮೃತಪಟ್ಟರೆ, ಮತ್ತಿಬ್ಬರಿಗೆ ಗಂಭೀರವಾಗಿ ಗಾಯವಾಗಿದೆ. ಸ್ಥಳಕ್ಕೆ ಮೇಗಳಪುರ ಪೊಲೀಸರು ದೌಡಾಯಿಸಿ, ಮೃತದೇಹಗಳನ್ನು ಶವಗಾರಕ್ಕೆ ರವಾನಿಸಿ, ಗಾಯಾಳುಗಳನ್ನು ಆಸ್ಪತ್ರೆಗೆ ದಾಖಲಿಸಿದ್ದಾರೆ. ಈ ಸಂಬಂಧ ಮೇಗಳಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಇದನ್ನೂ ಓದಿ:ಊರಿಗೆ ಬರುತ್ತಿದ್ದ ಯೋಧ ಅಪಘಾತದಲ್ಲಿ ಸಾವು.. ಗರ್ಭಿಣಿ ಪತ್ನಿಗೆ ಆಘಾತ, ಆತ್ಮಹತ್ಯೆ ಯತ್ನ

Last Updated : Oct 10, 2021, 8:28 PM IST

ABOUT THE AUTHOR

...view details