ಮೈಸೂರು:ಸಂಚಾರಿ ಪೊಲೀಸರು ಕಡ್ಡಾಯವಾಗಿ ಬಾಡಿ ಕ್ಯಾಮೆರಾ ಧರಿಸಬೇಕು ಎಂದು ನಗರ ಪೊಲೀಸ್ ಕಮಿಷನರ್ ಕೆ ಟಿ ಬಾಲಕೃಷ್ಣ ಸೂಚಿಸಿದ್ದಾರೆ.
ವಾಹನ ಸವಾರರೇ ಎಚ್ಚರ.. ಸಂಚಾರಿ ಪೊಲೀಸರಲ್ಲಿ ಇರುತ್ತವೆ ಬಾಡಿ ಕ್ಯಾಮೆರಾಗಳು.. - ಸಂಚಾರಿ ನಿಯಮ ಉಲ್ಲಂಘನೆ
ಸಂಚಾರಿ ಪೊಲೀಸರು ಕಡ್ಡಾಯವಾಗಿ ಬಾಡಿ ಕ್ಯಾಮೆರಾ ಧರಿಸಬೇಕು ಎಂದು ನಗರ ಪೊಲೀಸ್ ಕಮಿಷನರ್ ಕೆ ಟಿ ಬಾಲಕೃಷ್ಣ ಸೂಚಿಸಿದ್ದಾರೆ.
ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಕೇಂದ್ರ ಸರ್ಕಾರ ತಿದ್ದುಪಡಿ ಮಾಡಿರುವ ನೂತನ ಮೋಟಾರು ವಾಹನ ಕಾಯ್ದೆಯ ಅಧಿಸೂಚನೆಯನ್ನು ರಾಜ್ಯ ಸರ್ಕಾರ ಹೊರಡಿಸಿದೆ. ಸಂಚಾರಿ ನಿಯಮ ಉಲ್ಲಂಘನೆಯ ನೂತನ ನಿಯಮವನ್ನು ಮೈಸೂರಿನಲ್ಲಿ ಶನಿವಾರದಿಂದ ಜಾರಿಗೆ ತರಲು ನಿರ್ಧರಿಸಲಾಗಿದೆ ಎಂದು ತಿಳಿಸಿದ್ದಾರೆ.
ಸಂಚಾರಿ ಪೊಲೀಸರಿಗೆ ಕ್ಯಾಮೆರಾ:ನಗರದಲ್ಲಿ ಕರ್ತವ್ಯನಿರ್ವಹಿಸುವ ಸಂಚಾರಿ ಪೊಲೀಸರು ಕಡ್ಡಾಯವಾಗಿ ಬಾಡಿ ಕ್ಯಾಮೆರಾ ಧರಿಸಲೇಬೇಕು. ನಮ್ಮಲ್ಲಿ 21 ಬಾಡಿವಾನ್ ಕ್ಯಾಮೆರಾಗಳಿದ್ದು, ಅವುಗಳನ್ನು 25ಕ್ಕೆ ಏರಿಸುವಂತೆ ಇಲಾಖೆಗೆ ತಿಳಿಸಿದ್ದೇವೆ ಎಂದು ಹೇಳಿದ್ದಾರೆ.ಸಾರ್ವಜನಿಕರು ಸಂಚಾರಿ ನಿಯಮಗಳನ್ನು ಕಡ್ಡಾಯವಾಗಿ ಪಾಲಿಸಿ ಸಹಕರಿಸಬೇಕು. ಜೊತೆಗೆ ಜನಪ್ರತಿನಿಧಿಗಳಿಗೂ ಸಂಚಾರ ನಿಯಮ ಅನ್ವಯ ಆಗುತ್ತದೆ ಎಂದರು.