ಮೈಸೂರು: ಕೊರೊನಾ ವೈರಸ್ ಆತಂಕದಿಂದ ಮೈಸೂರು ಪ್ರವಾಸಿ ತಾಣಗಳಿಗೆ ಪ್ರವಾಸಿಗರು ಬಾರದೇ ಇರಬಹುದು ಎಂಬ ಆತಂಕ ಮನೆ ಮಾಡಿತ್ತು. ಆದರೆ, ಕೇಂದ್ರ ಹಾಗೂ ರಾಜ್ಯ ಮೂಡಿಸುತ್ತಿರುವ ಜಾಗೃತಿಯಿಂದ ಪ್ರವಾಸಿಗರು ಪ್ರವಾಸಿ ತಾಣಗಳಿಗೆ ಭಯವಿಲ್ಲದೇ ಆಗಮಿಸುತ್ತಿದ್ದಾರೆ.
ಮೈಸೂರಿನ ಪ್ರವಾಸಿ ತಾಣಗಳಲ್ಲಿ ಪ್ರಮುಖವಾಗಿ ಮೃಗಾಲಯಕ್ಕೆ ಬರುವ ಪ್ರವಾಸಿಗರ ಸಂಖ್ಯೆ ಇಳಿಮುಖವಾಗಿಲ್ಲ. ಕೇರಳಕ್ಕೆ ಹೊಂದಿಕೊಂಡಂತಿರುವ ಚಾಮರಾಜನಗರ ಜಿಲ್ಲೆಯ ಗುಂಡ್ಲುಪೇಟೆ ತಾಲೂಕಿನ ಚೆಕ್ಪೋಸ್ಟ್, ಮೈಸೂರಿನ ಹೆಚ್ ಡಿ ಕೋಟೆ ತಾಲೂಕಿನ ಚೆಕ್ ಪೋಸ್ಟ್ ಹಾಗೂ ಕೊಡಗು ಜಿಲ್ಲೆಯ ಚೆಕ್ಪೋಸ್ಟ್ಗಳಲ್ಲಿ ಬರುವ ಪ್ರವಾಸಿಗರ ಆರೋಗ್ಯ ತಪಾಸಣೆ ಮಾಡಿ, ನಂತರವಷ್ಟೇ ಸಾಂಸ್ಕೃತಿಕ ನಗರಿ ಮೈಸೂರಿಗೆ ತೆರಳಲು ಅವಕಾಶ ನೀಡಲಾಗುತ್ತಿದೆ. ಹೀಗಾಗಿ ಕೇರಳ ಪ್ರವಾಸಿಗರು ಮೈಸೂರಿನ ಸ್ಥಳಗಳಿಗೆ ಭೇಟಿಕೊಟ್ಟು ವಾಪಸ್ ತೆರಳುತ್ತಿದ್ದಾರೆ.