ಕರ್ನಾಟಕ

karnataka

ETV Bharat / city

ನವರಾತ್ರಿ ಸಂದರ್ಭ ಮೈಸೂರು ಮೈಗಾಲಯಕ್ಕೆ ಭೇಟಿ ಕೊಟ್ಟವರೆಷ್ಟು, ಸಂಗ್ರಹವಾದ ಹಣ ಎಷ್ಟು? - Vijayadashami Festival

ನವರಾತ್ರಿ ಉತ್ಸವ ಕಣ್ತುಂಬಿಕೊಳ್ಳಲು ಮೈಸೂರಿಗೆ ಆಗಮಿಸಿದ್ದ ಪ್ರವಾಸಿಗರಲ್ಲಿ ಈ ಬಾರಿ ಮೃಗಾಲಯಕ್ಕೆ ಭೇಟಿ ನೀಡಿದವರ ಸಂಖ್ಯೆ ಕಳೆದ ಬಾರಿಗಿಂತ ಅಧಿಕವಾಗಿದೆ.

tourist-visit-the-mysore-zoo

By

Published : Oct 10, 2019, 5:46 PM IST

ಮೈಸೂರು:ನವರಾತ್ರಿ ಸಂದರ್ಭದಲ್ಲಿ ಮೈಸೂರಿನ ಚಾಮರಾಜೇಂದ್ರ ಮೃಗಾಲಯಕ್ಕೆ ಒಟ್ಟು 1.65 ಲಕ್ಷ ಮಂದಿ ಭೇಟಿ ನೀಡಿದ್ದು, ₹ 1.59 ಕೋಟಿ ದಾಖಲೆ ಮೊತ್ತ ಸಂಗ್ರಹವಾಗಿದೆ.

ಕಳೆದ ವರ್ಷಕ್ಕೆ ಹೋಲಿಕೆ ಮಾಡಿದರೆ ಈ ಬಾರಿ ₹ 55 ಲಕ್ಷ ಅಧಿಕ ಹಣ ಸಂಗ್ರಹವಾಗಿದೆ. ಆಯುಧ ಪೂಜೆ ದಿನ 30,273 ಮಂದಿ, ವಿಜಯ ದಶಮಿ ದಿನ 78,286 ಮಂದಿ ಭೇಟಿ ನೀಡಿದ್ದಾರೆ ಎಂದು ಮೃಗಾಲಯದ ಪ್ರಾಧಿಕಾರದ ನಿರ್ವಾಹಕರು ತಿಳಿಸಿದ್ದಾರೆ.

ಕಳೆದ ದಸರಾದಲ್ಲಿ (2018) 1.56 ಲಕ್ಷ ಪ್ರವಾಸಿಗರು ಭೇಟಿ ನೀಡಿದ್ದರು. ₹1.05 ಕೋಟಿ ಹಣ ಸಂಗ್ರಹವಾಗಿತ್ತು. ಈ ಬಾರಿ ಅತಿ ಹೆಚ್ಚು ಜನ ಮೃಗಾಲಯಕ್ಕೆ ಭೇಟಿ ನೀಡಿದ್ದಾರೆ.

ABOUT THE AUTHOR

...view details