ಕರ್ನಾಟಕ

karnataka

ETV Bharat / city

ಟೊಮೇಟೊ ಜ್ವರದ ಭೀತಿ ಬಾವಲಿ ಚೆಕ್ ಪೋಸ್ಟ್​ನಲ್ಲಿ ಹೈ ಅಲರ್ಟ್​​ - ಮೈಸೂರಿನ ಎಚ್.ಡಿ.ಕೋಟೆ ಕೇರಳ ಗಡಿಭಾಗದ ಬಾವಕಿ ಚೆಕ್ ಪೋಸ್ಟ್​ನಲ್ಲಿ ಕಟ್ಟೆಚ್ಚರ

ಕೇರಳದಲ್ಲಿನ ಟೊಮೇಟೊ ಜ್ವರದ ಭೀತಿ ಹಿನ್ನೆಲೆಯಲ್ಲಿ, ಮೈಸೂರಿನ ಎಚ್.ಡಿ.ಕೋಟೆ ಕೇರಳ ಗಡಿಭಾಗದ ಬಾವಕಿ ಚೆಕ್ ಪೋಸ್ಟ್​ನಲ್ಲಿ ಕಟ್ಟೆಚ್ಚರ ವಹಿಸಲಾಗಿದೆ. ಕೇರಳ ಗಡಿಭಾಗದ ಬಾವಲಿ ಚೆಕ್ ಪೋಸ್ಟ್​ಗೆ ತಹಶೀಲ್ದಾರ್ ರತ್ನಾಂಬಿಕ ತಾಲೂಕು ಆರೋಗ್ಯಾಧಿಕಾರಿ ಡಾ.ರವಿಕುಮಾರ್ ಭೇಟಿ ನೀಡಿ ತಪಾಸಣೆ ನಡೆಸಿದ್ದಾರೆ.

Tomoto Fever alert in Mysuru kerala border
ಟೊಮ್ಯಾಟೊ ಜ್ವರದ ಭೀತಿ ಬಾವಲಿ ಚೆಕ್ ಪೋಸ್ಟ್​ನಲ್ಲಿ ಹೈ ಅಲಾಟ್೯

By

Published : May 12, 2022, 8:57 PM IST

ಮೈಸೂರು: ಕೇರಳದಲ್ಲಿನ ಟೊಮೇಟೊ ಜ್ವರದ ಭೀತಿ ಹಿನ್ನೆಲೆಯಲ್ಲಿ, ಮೈಸೂರಿನ ಎಚ್.ಡಿ.ಕೋಟೆ ಕೇರಳ ಗಡಿಭಾಗದ ಬಾವಕಿ ಚೆಕ್ ಪೋಸ್ಟ್​ನಲ್ಲಿ ಕಟ್ಟೆಚ್ಚರ ವಹಿಸಲಾಗಿದೆ. ಕೇರಳದಿಂದ ಆಗಮಿಸುವ ವಹನಗಳ ತಪಾಸಣೆ, ಜ್ವರ ದೃಢಪಟ್ಟ ಮಕ್ಕಳು ಮತ್ತು ಪೋಷಕರಿಗೆ ರಾಜ್ಯದ ಪ್ರವೇಶ ನಿರ್ಬಂಧ ವಿಧಿಸಲಾಗಿದೆ.

0-5ವರ್ಷದೊಳಗಿನ ಮಕ್ಕಳಲ್ಲಿ‌ ಕಂಡು ಬರುವ ಟೊಮೇಟೊ ಜ್ವರ, ಮೈಮೇಲೆ ಕೆಂಪುಬಣ್ಣದ ಟೊಮೇಟೊ ಆಕಾರದಲ್ಲಿ ಕಾಣಿಸಿಕೊಳ್ಳುವ ಗುಳ್ಳೆಗಳಾಗಿವೆ. ಗುಳ್ಳೆಗಳು ಒಡೆದು ಕೀವು ರಕ್ತ ಹೊರಬಂದು ಇತರ ಮಕ್ಕಳಿಗೆ ತಾಗಿದರೆ ಅವರಲ್ಲೂ ಹರಡುತ್ತಿದೆ. ಜ್ವರಕ್ಕೆ ಹೆದರಬೇಕಾದ ಅಗತ್ಯ ಇಲ್ಲ ಎಚ್ಚರವಹಿಸಿ ಬೇಕಿದೆ ಎನ್ನುತ್ತಾರೆ ಎಚ್.ಡಿ. ತಾಲೂಕಿನ ಆರೋಗ್ಯಾಧಿಕಾರಿ ಡಾ. ರವಿಕುಮಾರ್ ಹೇಳುತ್ತಾರೆ.

ಟೊಮೇಟೊ ಜ್ವರದ ಭೀತಿ ಬಾವಲಿ ಚೆಕ್ ಪೋಸ್ಟ್​ನಲ್ಲಿ ಹೈ ಅಲಾಟ್೯

ಇಂದು ಕೇರಳ ಗಡಿಭಾಗದ ಬಾವಲಿ ಚೆಕ್ ಪೋಸ್ಟ್​ಗೆ ತಹಶೀಲ್ದಾರ್ ರತ್ನಾಂಬಿಕ ತಾಲೂಕು ಆರೋಗ್ಯಾಧಿಕಾರಿ ಡಾ.ರವಿಕುಮಾರ್ ಭೇಟಿ ನೀಡಿದ್ದಾರೆ. ವಾಹನಗಳ ತಪಾಸಣೆ ನಡೆಸಿ ಎಚ್ವರ ವಹಿಸಲು ಚೆಕ್ ಪೋಸ್ಟ್ ನಿಯೋಜಿತ ಸಿಬ್ಬಂದಿಗಳಿಗೆ ತಹಶೀಲ್ದಾರ್‌ ರತ್ನಾಂಬಿಕಾ ಎಚ್ಚರಿಕೆ ನೀಡಿದ್ದಾರೆ.

ಇದನ್ನೂ ಓದಿ:ರಾಜ್ಯದಲ್ಲಿಂದು 157 ಮಂದಿಗೆ ಕೋವಿಡ್ ಸೋಂಕು.. ಸಾವು ಶೂನ್ಯ

For All Latest Updates

ABOUT THE AUTHOR

...view details