ಕರ್ನಾಟಕ

karnataka

ETV Bharat / city

ಮೈಸೂರಿನಲ್ಲಿ ಇಂದು 13 ಪೊಲೀಸರು ಸೇರಿದಂತೆ 22 ಮಂದಿಗೆ ಕೊರೊನಾ! - ಸಾಂಸ್ಕೃತಿಕ ನಗರಿಗೆ ಮತ್ತೆ ಆತಂಕ

ಪಾದರಾಯನಪುರದಲ್ಲಿ ಕರ್ತವ್ಯ ನಿರ್ವಹಿಸಿ ವಾಪಸಾಗಿದ್ದ 13 ಮಂದಿ ಪೊಲೀಸರನ್ನ ಹೋಂ ಕ್ವಾರಂಟೈನ್ ಮಾಡಲಾಗಿತ್ತು. ಆದರೆ ಇವರೆಲ್ಲರಿಗೂ ಕೊರೊನಾ ಸೋಂಕು ದೃಢವಾದ ಹಿನ್ನೆಲೆಯಲ್ಲಿ ಪೊಲೀಸರು ಸೇರಿದಂತೆ 22 ಮಂದಿಯನ್ನು ಕೋವಿಡ್-19 ಆಸ್ಪತ್ರಗೆ ದಾಖಲು ಮಾಡಿ ಚಿಕಿತ್ಸೆ ನೀಡಲಾಗುತ್ತಿದೆ.

today 22 new corona case in mysore
ಮೈಸೂರಿನಲ್ಲಿ ಪೊಲೀಸರು ಸೇರಿದಂತೆ, 22 ಮಂದಿಗೆ ಕೊರೊನಾ, ಸಾಂಸ್ಕೃತಿಕ ನಗರಿಗೆ ಮತ್ತೆ ಆತಂಕ

By

Published : Jun 20, 2020, 8:15 PM IST

ಮೈಸೂರು: 13 ಮಂದಿ ಪೊಲೀಸರು ಸೇರಿದಂತೆ ಒಂದೇ ದಿನ ಮೈಸೂರಿನಲ್ಲಿ 22 ಜನರಿಗೆ ಕೊರೊನಾ ಸೋಂಕು ದೃಢವಾಗಿದ್ದು, ಈ ಮೂಲಕ ಸಕ್ರಿಯ ಪ್ರಕರಣಗಳ ಸಂಖ್ಯೆ 39ಕ್ಕೇರಿದೆ.

ಸ್ವಲ್ಪ ನಿರಾಳವಾಗಿದ್ದ ಮೈಸೂರಿಗೆ ಮತ್ತೆ ಆತಂಕ ಎದುರಾಗುವ ಸ್ಥಿತಿ ನಿರ್ಮಾಣವಾಗುತ್ತಿದೆ. ಪಾದರಾಯನಪುರದಲ್ಲಿ ಕರ್ತವ್ಯ ನಿರ್ವಹಿಸಿ ವಾಪಸಾಗಿದ್ದ 13 ಮಂದಿ ಪೊಲೀಸರನ್ನ ಹೋಂ ಕ್ವಾರಂಟೈನ್ ಮಾಡಲಾಗಿತ್ತು. ಆದರೆ ಇವರೆಲ್ಲರಿಗೂ ಕೊರೊನಾ ಸೋಂಕು ದೃಢವಾದ ಹಿನ್ನೆಲೆಯಲ್ಲಿ ಪೊಲೀಸರು ಸೇರಿದಂತೆ 22 ಮಂದಿಯನ್ನು ಕೋವಿಡ್-19 ಆಸ್ಪತ್ರಗೆ ದಾಖಲು ಮಾಡಿ ಚಿಕಿತ್ಸೆ ನೀಡಲಾಗುತ್ತಿದೆ.

ಮೈಸೂರಿನಲ್ಲಿ ಒಟ್ಟಾರೆ ಈವರೆಗೆ 151 ಕೊರೊನಾ ಸೋಂಕು ದೃಢಪಟ್ಟಿದ್ದು, ಇಲ್ಲಿಯವರೆಗೆ 112 ಮಂದಿ ಡಿಸ್ಚಾರ್ಜ್​ ಆಗಿದ್ದಾರೆ.

ABOUT THE AUTHOR

...view details