ಮೈಸೂರು: ವರುಣನ ಆರ್ಭಟಕ್ಕೆ ಬರೀ ಮನುಷ್ಯ ಕುಲ ಅಷ್ಟೆ ಅಲ್ಲ, ಪ್ರಾಣಿಗಳು ಸಹ ತೊಂದರೆಗೆ ಸಿಲುಕಿ ಸಂಕಷ್ಟ ಎದುರಿಸುತ್ತಿವೆ. ಇದಕ್ಕೆ ಉದಾರಹಣೆ ಎಂಬಂತೆ ಹುಲಿಯೊಂದು ಬಂಡೀಪುರ ಅರಣ್ಯ ಪ್ರದೇಶದಿಂದ ನಾಗರಹೊಳೆ ಅರಣ್ಯ ಪ್ರದೇಶಕ್ಕೆ ಹೋಗಲು ಕಬಿನಿ ಹಿನ್ನೀರಿನಲ್ಲಿ ಈಜಿ ಹರಸಾಹಸ ಪಟ್ಟು ದಡ ಸೇರಬೇಕಾಯಿತು.
ಕಬಿನಿ ಹಿನ್ನೀರಿನಲ್ಲಿ ಗಡಿದಾಟಲು ಈಜಿದ ಹುಲಿರಾಯ: ವಿಡಿಯೋ ನೋಡಿ - MYSORE NEWS
ಹುಲಿಯೊಂದು ಬಂಡೀಪುರ ಅರಣ್ಯ ಪ್ರದೇಶದಿಂದ ನಾಗರಹೊಳೆ ಅರಣ್ಯ ಪ್ರದೇಶಕ್ಕೆ ಹೋಗಲು ಕಬಿನಿ ಹಿನ್ನೀರಿನಲ್ಲಿ ಈಜಿ ದಡ ಸೇರಿದ ದೃಶ್ಯವನ್ನು ಪ್ರವಾಸಿಗರು ತಮ್ಮ ಕ್ಯಾಮರಾದಲ್ಲಿ ಸೆರೆ ಹಿಡಿದಿದ್ದಾರೆ. ಈ ವಿಡಿಯೋ, ಕಾಡು ಪ್ರಾಣಿಗಳ ಮೇಲೂ ಮಳೆ ಪರಿಣಾಮ ಬೀರಿದ್ದು, ಜೀವ ಉಳಿಸಿಕೊಳ್ಳಲು ಮೂಕ ಜೀವಿಗಳು ಪರದಾಡುತ್ತಿವೆ ಎಂಬುದಕ್ಕೆ ಸಾಕ್ಷಿಯಾದಂತಿದೆ.
![ಕಬಿನಿ ಹಿನ್ನೀರಿನಲ್ಲಿ ಗಡಿದಾಟಲು ಈಜಿದ ಹುಲಿರಾಯ: ವಿಡಿಯೋ ನೋಡಿ tiger-swimming-in-kabini-back-water-at-mysore](https://etvbharatimages.akamaized.net/etvbharat/prod-images/768-512-13465977-thumbnail-3x2-kdkd.jpg)
ಕಳೆದ ಹದಿನೈದು ದಿನಗಳಿಂದ ಎಡೆಬಿಡದೇ ಸುರಿಯುತ್ತಿರುವ ಭಾರಿ ಮಳೆಗೆ ಕಬಿನಿ ಜಲಾಶಯಕ್ಕೆ ಹೆಚ್ಚವರಿಯಾಗಿ ನೀರು ಬರುತ್ತಿದೆ. ಕಬಿನಿ ಹಿನ್ನೀರಿನಲ್ಲಿ ಹುಲಿಯೊಂದು ಬಂಡೀಪುರ ಅರಣ್ಯ ಪ್ರದೇಶದಿಂದ ನಾಗರಹೊಳೆ ಅರಣ್ಯ ಪ್ರದೇಶ ದಾಟಲು ಹಿನ್ನೀರಿನ ನದಿಯಲ್ಲಿ ಈಜಿ ಬರುತ್ತಿರುವ ದೃಶ್ಯವನ್ನು ಪ್ರವಾಸಿಗರು ತಮ್ಮ ಕ್ಯಾಮರಾದಲ್ಲಿ ಸೆರೆ ಹಿಡಿದಿದ್ದಾರೆ. ಈಜಿ ದಡ ಸೇರಿದ ಹುಲಿ ಮರದ ಕೆಳಗೆ ಸ್ವಲ್ಪ ಸಮಯ ವಿಶ್ರಾಂತಿ ಪಡೆಯಿತು.
ಕೆಲವು ದಿನಗಳಿಂದ ಎಡೆಬಿಡದೆ ಕೇರಳದ ವೈನಾಡು ಪ್ರದೇಶದಲ್ಲಿ ಮಳೆಯಾಗುತ್ತಿದ್ದು, ಕಬಿನಿ ಜಲಾಶಯಕ್ಕೆ ಹೆಚ್ಚಾಗಿ ನೀರು ಬರುತ್ತಿದೆ. ಕಬಿನಿ ಹಿನ್ನೀರಿನ ಮಟ್ಟ ಹೆಚ್ಚಾಗಿದ್ದು, ಕಾಡು ಪ್ರಾಣಿಗಳು ಬಂಡೀಪುರ ಅರಣ್ಯ ವಲಯದಿಂದ ನಾಗರಹೊಳೆ ಅರಣ್ಯ ಪ್ರದೇಶಕ್ಕೆ ಬರಲು ತೊಂದರೆ ಅನುಭವಿಸುತ್ತಿವೆ.