ಕರ್ನಾಟಕ

karnataka

ETV Bharat / city

ಚಾಮನಹಳ್ಳಿ ತೋಟದಲ್ಲಿ ಹುಲಿ ಪ್ರತ್ಯಕ್ಷ : ಸೆರೆಗಾಗಿ ಅರಣ್ಯ ಇಲಾಖೆಯಿಂದ ಕಾರ್ಯಾಚರಣೆ - ಅರಣ್ಯ ಇಲಾಖೆ ತಂಡದಿಂದ ಕಾರ್ಯಾಚರಣೆ

ಕಾಡಿನಿಂದ ಆಹಾರ ಅರಸಿ ನಾಡಿಗೆ ಬಂದ ಹುಲಿ- ತೋಟದಲ್ಲಿ ಸಿಲುಕಿದ ಟೈಗರ್​- ಸೆರೆ ಹಿಡಿಯಲು ಸಾಕಾನೆಗಳೊಂದಿಗೆ ಅರಣ್ಯ ಇಲಾಖೆ ಸಿಬ್ಬಂದಿ ಕಾರ್ಯಾಚರಣೆ

Tiger in Chamanahalli farm
ಚಾಮನಹಳ್ಳಿ ತೋಟದಲ್ಲಿ ಹುಲಿ ಪ್ರತ್ಯಕ್ಷ

By

Published : Jul 11, 2022, 1:52 PM IST

ಮೈಸೂರು:ಸರಗೂರು ಬಳಿಯ ಚಾಮನ ಹಳ್ಳಿಯ ತೋಟದಲ್ಲಿ ಭಾನುವಾರ ಸಂಜೆ ದನ ಕಾಯುವ ವ್ಯಕ್ತಿಯೊಬ್ಬರಿಗೆ ಹುಲಿ ಕಾಣಿಸಿಕೊಂಡಿದೆ. ಈ ವಿಚಾರ ತಿಳಿದ ಗ್ರಾಮಸ್ಥರು ಆತಂಕಗೊಂಡು ಅರಣ್ಯ ಇಲಾಖೆಗೆ ಮಾಹಿತಿ ನೀಡಿದ್ದಾರೆ. ಹುಲಿ ಸೆರೆಗಾಗಿ ಅರಣ್ಯ ಇಲಾಖೆ ತಂಡವೇ ದೌಡಾಯಿಸಿದ್ದು, ಸಾಕಾನೆ ನೆರವಿನಿಂದ ಕಾರ್ಯಾಚರಣೆಯನ್ನು ಆರಂಭಿಸಿದ್ದಾರೆ.

ಚಾಮನಹಳ್ಳಿ ತೋಟದಲ್ಲಿ ಹುಲಿ ಪ್ರತ್ಯಕ್ಷ : ಸೆರೆಗಾಗಿ ಕಾರ್ಯಚರಣೆ ಆರಂಭ

ಅರಣ್ಯ ಇಲಾಖೆಯವರು ನಿನ್ನೆ ಹುಲಿ ಇರುವ ಜಾಗಗಳಲ್ಲಿ ಕ್ಯಾಮರಾ ಅಳವಡಿಸಿದ್ದರು. ಇಂದು ಬೆಳಗ್ಗೆ ಸಾಕಾನೆಗಳಾದ ಭೀಮ ಹಾಗೂ ಶ್ರೀಕಂಠನ ನೆರವಿನಿಂದ ಕಾರ್ಯಾಚರಣೆ ಆರಂಭಿಸಿದ್ದಾರೆ.

ಆನೆಗಳಿಂದ ಕಾರ್ಯಾಚರಣೆ ನಡೆಸುತ್ತಿರುವ ಅರಣ್ಯ ಇಲಾಖೆ ಸಿಬ್ಬಂದಿ

ತೋಟದಲ್ಲಿ ಸಿಕ್ಕಿಬಿದ್ದ ಹುಲಿ:ಕಾಡಿನಿಂದ ಆಹಾರ ಅರಸಿ ನಾಡಿಗೆ ಬಂದಿರುವ ಈ ಹುಲಿ ತೋಟದಲ್ಲಿ ನವಿಲನ್ನು ಬೇಟೆಯಾಡಿ ಅದನ್ನು ಅಲ್ಲೇ ತಿಂದು ಮುಗಿಸಿದೆ. ತೋಟದಿಂದ ಹೊರ ಹೋಗಲು ಪ್ರಯತ್ನಿಸಿದಾಗ ತೋಟದ ಸುತ್ತ ಅಳವಡಿಸಿರುವ ಸೋಲಾರ್ ತಂತಿಗೆ ಹುಲಿಯ ಹಿಂಬದಿಯ ಕಾಲು ಸಿಕ್ಕಿ, ಗಾಯಗೊಂಡಿದೆ ಎನ್ನಲಾಗುತ್ತಿದೆ. ಡಿಸಿಎಫ್ ಕಮಲ ಕರಿಕಾಳನ್, ಎಸಿಎಫ್ ಶಿವರಾಮು, ಆರ್​ಎಫ್​ಒ ಮಧು, ವೈದ್ಯ ಪ್ರಕಾಶ್ ಮತ್ತು ಸಿಬ್ಬಂದಿ ನೇತೃತ್ವದಲ್ಲಿ ಹುಲಿ ಸೆರೆಹಿಡಿಯಲು ಕಾರ್ಯಾಚರಣೆ ಆರಂಭವಾಗಿದೆ.

ಇದನ್ನೂ ಓದಿ:Video - ಕೆಮ್ಮಣ್ಣು ಗುಂಡಿಯ ಪ್ರವಾಸಿ ಸ್ಥಳದಲ್ಲಿ ಮೂರು ಹುಲಿಗಳು ಪ್ರತ್ಯಕ್ಷ

ABOUT THE AUTHOR

...view details