ಮೈಸೂರು: ಗುಂಡ್ರೆ ಅರಣ್ಯ ಪ್ರದೇಶದ ಕಬಿನಿ ಹಿನ್ನೀರಿನ ನಾಯಳ್ಳದಲ್ಲಿ ಕೊಳೆತೆ ಸ್ಥಿತಿಯಲ್ಲಿ ಗಂಡು ಹುಲಿಯ ಮೃತ ದೇಹ (ಸುಮಾರು 8 ವರ್ಷ) ಗಸ್ತಿನಲ್ಲಿದ್ದ ಅರಣ್ಯ ಇಲಾಖೆಯ ಸಿಬ್ಬಂದಿಗೆ ಪತ್ತೆಯಾಗಿದೆ.
ಕಬಿನಿ ಹಿನ್ನೀರಿನ ನಾಯಳ್ಳದಲ್ಲಿ ಕೊಳೆತ ಸ್ಥಿತಿಯಲ್ಲಿ ಹುಲಿ ಮೃತದೇಹ ಪತ್ತೆ - ಮೈಸೂರಿನಲ್ಲಿ ಹಲಿ ಶವ ಪತ್ತೆ
ಗುಂಡ್ರೆ ಅರಣ್ಯ ಪ್ರದೇಶದ ಕಬಿನಿ ಹಿನ್ನೀರಿನ ನಾಯಳ್ಳದಲ್ಲಿ ಕೊಳೆತೆ ಸ್ಥಿತಿಯಲ್ಲಿ ಗಂಡು ಹುಲಿಯ ಮೃತ ದೇಹ ಪತ್ತೆಯಾಗಿದೆ.
ಕೊಳೆತ ಸ್ಥಿತಿಯಲ್ಲಿ ಹುಲಿ ಮೃತದೇಹ ಪತ್ತೆ
ಗಂಡು ಹುಲಿಯ ಮೃತ ದೇಹವನ್ನು ಅವಲೋಕಿಸಿದಾಗ ಹುಲಿಗಳ ಕಾದಾಟದಲ್ಲಿ ತೀವ್ರವಾಗಿ ಗಾಯಗೊಂಡು ಮೃತಪಟ್ಟಿರಬಹುದು ಎಂದು ಅರಣ್ಯ ಇಲಾಖೆ ಅಧಿಕಾರಿಗಳು ಶಂಕೆ ವ್ಯಕ್ತಪಡಿಸಿದ್ದಾರೆ. ಸ್ಥಳಕ್ಕೆ ಅರಣ್ಯ ಇಲಾಖೆ ಸಿಎಫ್ ಕರಿಕಾಳನ್ ಸೇರಿದಂತೆ ಇತರ ಅಧಿಕಾರಿಗಳ ತಂಡ ಭೇಟಿ ನೀಡಿ ಪರಿಶೀಲನೆ ಕೈಗೊಂಡಿದೆ. ಹುಲಿ ಮರಣೋತ್ತರ ಪರೀಕ್ಷೆ ನಂತರ ಹುಲಿಯ ಮೃತದೇಹಕ್ಕೆ ಅಗ್ನಿ ಸ್ಪರ್ಶ ಮಾಡಲಾಗುತ್ತದೆ ಎಂದು ಅರಣ್ಯ ಇಲಾಖೆ ಮೂಲಗಳು ತಿಳಿಸಿವೆ.
ಇದನ್ನೂ ಓದಿ:ಸಂಕ್ರಾಂತಿ ಹಿನ್ನೆಲೆ ನದಿಗೆ ಸ್ನಾನಕ್ಕೆಂದು ಹೋದ ಇಬ್ಬರು ನೀರುಪಾಲು