ಮೈಸೂರು: ನಂಜನಗೂಡು ತಾಲೂಕಿನ ಹಾದನೂರು ಒಡೆಯನಪುರದಲ್ಲಿ ಜಾನುವಾರು ಮೇಯಿಸುತ್ತಿದ್ದ ವ್ಯಕ್ತಿ ಮೇಲೆ ಹುಲಿ ದಾಳಿ ನಡೆಸಿ ಒಬ್ಬನನ್ನು ಬಲಿ ಪಡೆದ ಘಟನೆ ಕಳೆದ ನಾಲ್ಕೈದು ದಿನಗಳ ಹಿಂದಷ್ಟೇ ನಡೆದಿತ್ತು. ಈ ಬೆನ್ನಲ್ಲೇ ಇದೀಗ ಮತ್ತೆ ದನಗಾಹಿ ಮೇಲೆ ಹುಲಿ ದಾಳಿ ಮಾಡಿದ್ದು, ಯುವಕ ಗಾಯಗೊಂಡಿದ್ದಾನೆ.
ಹುಲಿ ದಾಳಿ: ರೈತರ ಚೀರಾಟ ಕೇಳಿ ದನಗಾಹಿ ಬಿಟ್ಟು ಹಸು ಹೊತ್ತೊಯ್ದ ವ್ಯಾಘ್ರ - mysore Tiger
ದನಗಾಹಿಯೊಬ್ಬನ ಮೇಲೆ ಹುಲಿ ದಾಳಿ ನಡೆಸಿರುವ ಘಟನೆ ಮೈಸೂರು ಜಿಲ್ಲೆಯ ನಂಜನಗೂಡು ತಾಲೂಕಿನ ಹಾದನೂರು ಒಡೆಯನಪುರ ಗ್ರಾಮದಲ್ಲಿ ನಡೆದಿದೆ.
![ಹುಲಿ ದಾಳಿ: ರೈತರ ಚೀರಾಟ ಕೇಳಿ ದನಗಾಹಿ ಬಿಟ್ಟು ಹಸು ಹೊತ್ತೊಯ್ದ ವ್ಯಾಘ್ರ tiger attack](https://etvbharatimages.akamaized.net/etvbharat/prod-images/768-512-16019529-thumbnail-3x2-lek.jpg)
ಹುಲಿ ದಾಳಿ
ಪ್ರಸನ್ನ ಕುಮಾರ್ ಹುಲಿ ದಾಳಿಯಿಂದ ಗಾಯಗೊಂಡ ಯುವಕ. ಈತ ದನ ಮೇಯಿಸುತ್ತಿದ್ದಾಗ ಹಠಾತ್ ಹುಲಿ ದಾಳಿ ಮಾಡಿದ್ದು, ಕೂಡಲೇ ಯುವಕ ಚೀರಾಡಿದ್ದಾನೆ. ಯುವಕನ ಚೀರಾಟ ಕೇಳಿದ ಕೃಷಿ ಕಾರ್ಮಿಕರು ಕೂಡಲೇ ಆತನ ಸಹಾಯಕ್ಕೆ ಧಾವಿಸಿದ್ದು, ಇದನ್ನ ಗಮನಿಸಿದ ಹುಲಿ, ದನಗಾಹಿ ಬಿಟ್ಟು ಪಕ್ಕದಲ್ಲಿದ್ದ ಹಸುವನ್ನ ಹೊತ್ತೊಯ್ದಿದೆ. ಗಾಯಾಳುವನ್ನ ಹೆಚ್ಚಿನ ಚಿಕಿತ್ಸೆಗಾಗಿ ಜಿಲ್ಲಾಸ್ಪತ್ರೆಗೆ ಸ್ಥಳಾಂತರ ಮಾಡಲಾಗಿದೆ.
ಇದನ್ನೂ ಓದಿ:ಮೈಸೂರಲ್ಲಿ ದನಗಾಹಿ ಮೇಲೆ ಹುಲಿ ದಾಳಿ.. ವ್ಯಕ್ತಿ, ಜಾನುವಾರು ಕೊಂದುಹಾಕಿದ ಟೈಗರ್