ಮೈಸೂರು :ಹಾದನೂರು ಒಡೆಯನಪುರ ಗ್ರಾಮದದನಗಾಹಿ ಪುಟ್ಟಸ್ವಾಮಿಯನ್ನು ಹುಲಿಯೊಂದು ದಾಳಿ ಮಾಡಿ ಕೊಂದು ಹಾಕಿತ್ತು. ಇದಾದ ನಂತರ ಗ್ರಾಮದ ಜನತೆಯಲ್ಲಿ ಭಯದ ವಾತಾವರಣ ನಿರ್ಮಾಣವಾಗಿದ್ದು, ತಮ್ಮ ಜಮೀನಿಗೆ ಹೋಗಲು ಹಿಂದೇಟು ಹಾಕುತ್ತಿದ್ದಾರೆ. ವಸತಿ ಪ್ರದೇಶಕ್ಕೆ ಕಾಡು ಪ್ರಾಣಿ ನುಗ್ಗಿ ದಾಳಿ ಮಾಡಿದರೂ, ಅರಣ್ಯ ಇಲಾಖೆ ಹುಲಿ ಹಿಡಿಯುವಲ್ಲಿ ಹಿಂದೇಟು ಹಾಕುತ್ತಿದೆ ಎಂದು ಗ್ರಾಮಸ್ಥರು ದೂರಿದ್ದಾರೆ.
ಹುಲಿ ದಾಳಿಯ ಘಟನೆ ನಡೆದು 24ಗಂಟೆಯಾದರೂ ಅರಣ್ಯ ಇಲಾಖೆ ಹುಲಿ ಸೆರೆಗೆ ಸೂಕ್ತ ಕ್ರಮ ಕೈಗೊಂಡಿಲ್ಲ. ಘಟನೆ ನಡೆದ ಸ್ಥಳದಲ್ಲಿ ಬೋನು ಇರಿಸಿ ಅಧಿಕಾರಿಗಳು ನಾಪತ್ತೆಯಾಗಿದ್ದಾರೆ ಎಂದು ಜನರು ಆಕ್ರೋಶ ವ್ಯಕ್ತಪಡಿಸಿದ್ದಾರೆ.