ಕರ್ನಾಟಕ

karnataka

ETV Bharat / city

ಮೈಸೂರು ಮೃಗಾಲಯದಲ್ಲಿ ಮೂರು ಹುಲಿ‌ ಮರಿಗಳ ಜನನ

ಮೈಸೂರು ಮೃಗಾಲಯದ ಹೆಣ್ಣು ಹುಲಿ ತಾರಳಿ ಮೂರು ಮರಿಗಳಿಗೆ ಜನ್ಮ ನೀಡಿದೆ.

cubs-born
ಹುಲಿ‌ ಮರಿಗಳ ಜನನ

By

Published : May 9, 2022, 9:08 PM IST

ಮೈಸೂರು:ಇಲ್ಲಿನ ಚಾಮರಾಜೇಂದ್ರ ಮೃಗಾಲಯದಲ್ಲಿ ಏಪ್ರಿಲ್​ 26ರಂದು ಮೂರು ಮರಿಗಳು ಜನಿಸಿವೆ‌. ಈ ಮೂರು ಹುಲಿ ಮರಿಗಳು ಗಂಡು ಹುಲಿಯಾದ 'ರಾಕಿ' ಮತ್ತು ಹೆಣ್ಣು ಹುಲಿ 'ತಾರಳಿ'ಗೆ ಜನಿಸಿವೆ. ತಾಯಿ ಮತ್ತು ಮರಿಗಳ ಮೇಲೆ ಪ್ರಾಣಿ ಪಾಲಕರು ಮತ್ತು ಮೃಗಾಲಯದ ವೈದ್ಯರು ನಿಗಾ ಇಟ್ಟಿದ್ದಾರೆ.

ಮೈಸೂರು ಮೃಗಾಲಯದಲ್ಲಿ ಮೂರು ಹುಲಿ‌ ಮರಿಗಳ ಜನನ

ತಾರಾ ಹುಲಿಗೆ 8 ವರ್ಷವಾಗಿದ್ದು, ರಾಕಿ ಹುಲಿಗೆ ನಾಲ್ಕು ವರ್ಷವಾಗಿದೆ‌. ಪ್ರಸ್ತುತ ಮೈಸೂರು ಮೃಗಾಲಯದಲ್ಲಿ 9 ಗಂಡು ಹುಲಿಗಳು ಮತ್ತು 7 ಹೆಣ್ಣು ಹುಲಿಗಳಿವೆ. ಇದೀಗ ಮೂರು ಹುಲಿ ಮರಿಗಳ ಜನನವಾಗಿದೆ.

ಓದಿ:ಮಹಿಳೆಯಿಂದ ಬೈಕ್​​​ನಲ್ಲಿ ಏಕಾಂಗಿ 'ವಿಶ್ವ' ಪರ್ಯಟನೆ

ABOUT THE AUTHOR

...view details