ಮೈಸೂರು: ಚಾಮುಂಡಿಬೆಟ್ಟ ರಸ್ತೆಯಲ್ಲಿ (chamundi hill road) ಮೂರು ಚಿರತೆಗಳು (leopards) ಪ್ರತ್ಯಕ್ಷವಾಗಿವೆ. ಚಿರತೆಗಳನ್ನು ನೋಡಿ ಕಾರು ಚಾಲಕ ಬೆಚ್ಚಿ ಬಿದ್ದಿದ್ದಾರೆ.
ಚಾಮುಂಡಿ ಬೆಟ್ಟ ರಸ್ತೆಯಲ್ಲಿ ಮೂರು ಚಿರತೆಗಳು ಪ್ರತ್ಯಕ್ಷ ಚಾಮುಂಡಿಬೆಟ್ಟದ ತಪ್ಪಲಿನಲ್ಲಿರುವ ಜೆಎಸ್ಎಸ್ ಆಯುರ್ವೇದ ಆಸ್ಪತ್ರೆ(JSS ayurveda hospital) ಯಿಂದ ಲಲಿತಾದ್ರಿಪುರದ ತಿರುವಿನ ಸರ್ಕಲ್ ಬಳಿ ಮೂರು ಚಿರತೆಗಳು ರಸ್ತೆ ಮಧ್ಯೆದಲ್ಲಿ ಸಂಚಾರ ಮಾಡಿದೆ. ಇದನ್ನು ನೋಡಿದ ಕಾರು ಚಾಲಕ ವಿಡಿಯೋ ಮಾಡಿದ್ದಾರೆ.
ಇದನ್ನೂ ಓದಿ:ಶಿವಗಂಗೆ ಬೆಟ್ಟದ ಮೇಲೆ ಸ್ವರ್ಗದಂತ ಮನಮೋಹಕ ದೃಶ್ಯ: Watch video
ಸಂಜೆಯಾಗುತ್ತಿದ್ದಂತೆ ಚಿರತೆಗಳು ಚಾಮುಂಡಿಬೆಟ್ಟದ (mysore chamundi hill) ತಪ್ಪಲಿನ ರಸ್ತೆಗೆ ಬರುವುದು ಇತ್ತೀಚಿನ ದಿನಗಳಲ್ಲಿ ಮಾಮೂಲಿ ಎಂಬಂತಾಗಿದೆ. ಆದರೆ, ಈವರೆಗೂ ಮನುಷ್ಯರ ಮೇಲೆ ಚಿರತೆಗಳು ದಾಳಿ ಮಾಡಿಲ್ಲ ಎಂಬುದು ಮಾತ್ರ ಸಮಾಧಾನಕರ ವಿಷಯ. 3 ದಿನಗಳ ಹಿಂದೆ ಬೈಕ್ ಸವಾರ ಬೆಟ್ಟಕ್ಕೆ ಹೋಗುವ ಸಂದರ್ಭ ಬೈಕ್ ಮುಂದೆಯೇ ಚಿರತೆ ಪ್ರತ್ಯಕ್ಷವಾಗಿತ್ತು. ಇದೀಗ ಕಾರ್ ಎದುರು ಮೂರು ಚಿರತೆಗಳು ಪ್ರತ್ಯಕ್ಷವಾಗಿವೆ. ಇದು ಇಲ್ಲಿನ ದಾರಿಹೋಕರಲ್ಲಿ ತೀವ್ರ ಭಯವನ್ನುಂಟು ಮಾಡಿದೆ.