ಕರ್ನಾಟಕ

karnataka

ETV Bharat / city

ಚಾಮುಂಡಿ ಬೆಟ್ಟಕ್ಕೆ ರೋಪ್ ವೇ ಅಳವಡಿಕೆ ಇಲ್ಲ: ಸಚಿವ ಸೋಮಶೇಖರ್ - ಮೈಸೂರು

ಚಾಮುಂಡಿ ಬೆಟ್ಟದಲ್ಲಿ ರೋಪ್ ​ವೇ ಅಳವಡಿಸಲ್ಲ- ಜಿಲ್ಲಾ ಉಸ್ತುವಾರಿ ಸಚಿವ ಸೋಮಶೇಖರ್​ ಸ್ಪಷ್ಟನೆ- ಪರಿಸರವಾದಿಗಳ ಹೋರಾಟಕ್ಕೆ ಜಯ

ropeway plan
ಚಾಮುಂಡಿ ಬೆಟ್ಟಕ್ಕೆ ರೋಪ್ ವೇ ಅಳವಡಿಕೆ ಇಲ್ಲ: ಸಚಿವ ಸೋಮಶೇಖರ್

By

Published : Jul 6, 2022, 3:34 PM IST

ಮೈಸೂರು :ಪರಿಸರ ಪ್ರೇಮಿಗಳಿಂದ ನೈಸರ್ಗಿಕವಾಗಿರುವ ಚಾಮುಂಡಿ ಬೆಟ್ಟಕ್ಕೆ ರೋಪ್ ವೇ ಅಳವಡಿಕೆಗೆ ವಿರೋಧ ವ್ಯಕ್ತವಾಗಿದ್ದರಿಂದ ರೋಪ್ ವೇ ಅಳವಡಿಕೆಯಿಂದ ಹಿಂದೆ ಸರಿಯಲಾಗಿದೆ. ಹಾಗೆ ರೋಪ್ ವೇ ಯೋಜನೆಯನ್ನು ಕೈಬಿಡಲಾಗಿದೆ ಎಂದು ಮೈಸೂರು ಜಿಲ್ಲಾ ಉಸ್ತುವಾರಿ ಸಚಿವ ಎಸ್​ ಟಿ ಸೋಮಶೇಖರ್​ ಮಾಹಿತಿ ನೀಡಿದ್ದಾರೆ.

ಚಾಮುಂಡಿ ಬೆಟ್ಟಕ್ಕೆ ರೋಪ್ ವೇ ಅಳವಡಿಕೆ ಇಲ್ಲ

ಇಂದು ಜಿಲ್ಲಾಧಿಕಾರಿ ಕಚೇರಿಯಲ್ಲಿ ಸಭೆ ನಡೆಸಿದ ಉಸ್ತುವಾರಿ ಸಚಿವರು, ಬಳಿಕ ಮಾಧ್ಯಮದವರೊಂದಿಗೆ ಮಾತನಾಡಿ, ಚಾಮುಂಡಿ ಬೆಟ್ಟದ ಮೇಲಿನ ಒತ್ತಡವನ್ನು ಕಡಿಮೆಮಾಡಲು ನಿವಾಸಿಗಳನ್ನು ಬೇರೆಡೆಗೆ ಸ್ಥಳಾಂತರ ಮಾಡಲು ಜಿಲ್ಲಾಡಳಿತ ಚಿಂತನೆ ಮಾಡಿದೆ. ಇನ್ಮುಂದೆ ಚಾಮುಂಡಿ ಬೆಟ್ಟದ ಮೇಲೆ ವಸತಿ ಸಮುಚ್ಚಯಗಳನ್ನು ನಿರ್ಮಾಣ ಮಾಡಲು ಅವಕಾಶ ಇಲ್ಲ. ಅವರ ವಾಸಕ್ಕೆ ಸರ್ಕಾರಿ ಜಾಗವನ್ನು ಗುರುತಿಸಿ ವ್ಯವಸ್ಥೆ ಮಾಡುವ ಬಗ್ಗೆ ಚಿಂತೆನೆ ನಡೆಸಲಾಗಿದೆ ಎಂದು ತಿಳಿಸಿದರು.

ಇದನ್ನೂ ಓದಿ :ಪಿಎಸ್‌ಐ ನೇಮಕಾತಿ ಅಕ್ರಮ: ತನಿಖೆ ಪ್ರಾಮಾಣಿಕ ಮತ್ತು ಪಾರದರ್ಶಕ- ಸಚಿವ ಆರಗ ಸಮರ್ಥನೆ

ABOUT THE AUTHOR

...view details