ಮೈಸೂರು: ಜುಬಿಲಂಟ್ ಕಾರ್ಮಿಕನಿಗೆ ಕಂಟೈನರ್ ಮೂಲಕ ಸೋಂಕು ತಗಲಿದೆ ಎಂಬ ವದಂತಿ ಹಬ್ಬಿದ್ದು, ಇದನ್ನು ಪರೀಕ್ಷೆ ಮಾಡಿದಾಗ ಪ್ರಕರಣದ ವರದಿ ನೆಗೆಟಿವ್ ಬಂದಿದೆ ಎಂದು ಎಡಿಜಿಪಿ ಡಾ. ಪರಶಿವಮೂರ್ತಿ ತಿಳಿಸಿದ್ದಾರೆ.
ಜಿಲ್ಲಾ ವರಿಷ್ಠಾಧಿಕಾರಿ ಕಚೇರಿ ಸಭಾಂಗಣದಲ್ಲಿ ಎಡಿಜಿಪಿ ಡಾ. ಪರಶಿವಮೂರ್ತಿ ಸುದ್ದಿಗೋಷ್ಠಿ ಜಿಲ್ಲಾ ವರಿಷ್ಠಾಧಿಕಾರಿ ಕಚೇರಿ ಸಭಾಂಗಣದಲ್ಲಿ ಸುದ್ದಿಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಅವರು, ಜುಬಿಲಂಟ್ ಕಾರ್ಖಾನೆಯಲ್ಲಿ ಮೊದಲ ಬಾರಿಗೆ ಪತ್ತೆಯಾದ ಕೊರೊನಾ ಸೋಂಕಿತ ವ್ಯಕ್ತಿಯ ಹೇಳಿಕೆಯಂತೆ ಕಂಟೈನರ್ ಕೂಡ ಪರೀಕ್ಷೆ ಮಾಡಲಾಗಿದೆ. ಆದರೆ, ಅದರ ವರದಿ ನೆಗೆಟಿವ್ ಬಂದಿದೆ. ತನಿಖೆಯನ್ನು ಇನ್ನಷ್ಟು ಚುರುಕುಗೊಳಿಸುತ್ತೇವೆ ಎಂದರು.
ಜುಬಿಲಂಟ್ ಕಾರ್ಖಾನೆಗೆ ಯಾರು ಬಂದಿದ್ದರು? ಯಾರಿಂದ ಈ ರೀತಿ ಆಗಿದೆ? ಎಂಬುವುದರ ಬಗ್ಗೆ ಹಂತ ಹಂತವಾಗಿ ತನಿಖೆ ನಡೆಯುತ್ತಿದೆ. ಯಾರೂ ಕೂಡ ಆತಂಕಕ್ಕೆ ಒಳಗಾಗಬಾರದು. ಎಲ್ಲರೂ ಕೂಡ ಗುಣಮುಖರಾಗಲಿದ್ದಾರೆ ಎಂದು ಹೇಳಿದರು. ಮೈಸೂರಿನಲ್ಲಿ ಇಂದು ಒಂದೇ ದಿನ ಹತ್ತು ಪ್ರಕರಣಗಳು ಬಂದಿದೆ. 9 ಪ್ರಕರಣ ಜುಬಿಲಂಟ್ ಸಂಬಂಧವಾದರೆ, ಇನ್ನೊಂದು ಪ್ರಕರಣದ ಬಗ್ಗೆ ತನಿಖೆ ನಡೆಯುತ್ತಿದೆ. ಮುಂದಿನ ದಿನಗಳಲ್ಲಿ ಪೊಲೀಸ್ ವ್ಯವಸ್ಥೆ ಮತ್ತಷ್ಟು ಬೀಗಿಗೊಳಿಸುತ್ತೇವೆ. ಸಾರ್ವಜನಿಕರು ಅಗತ್ಯ ಸಹಕಾರ ನೀಡಬೇಕು ಎಂದು ತಿಳಿಸಿದರು.
ಜಿಲ್ಲೆ ಹಾಗೂ ರಾಜ್ಯದ ಚೆಕ್ ಪೋಸ್ಟ್ಗಳಲ್ಲಿ ಅಗತ್ಯ ವಸ್ತುಗಳನ್ನು ತೆಗೆದುಕೊಂಡು ಹೋಗುವ ವಾಹನಗಳಿಗೆ ಪಾಸ್ ನೀಡಲಾಗಿದೆ. ಯಾರಿಗೂ ತೊಂದರೆ ಉಂಟಾಗುವುದಿಲ್ಲ ಎಂದರು.