ಮೈಸೂರು: ದೇವಾಲಯದ ಶಿವ ಲಿಂಗದ ಮೇಲೆ ನಾಗರ ಹಾವೊಂದು ಬಂದು ಮಲಗಿದ್ದು, ಇದನ್ನು ನೋಡಿದ ಭಕ್ತರು ಅಚ್ಚರಿಗೊಂಡ ಘಟನೆ ಹುಣಸೂರು ತಾಲೂಕಿನ ಬಿಳಿಕೆರೆಯಲ್ಲಿ ನಡೆದಿದೆ.
ದೇವಾಲಯದಲ್ಲಿ ಮಲ್ಲಪ್ಪನ ಮುಡಿಯೇರಿದ ನಾಗಪ್ಪ - ಶಿವ ಲಿಂಗದ ಮೇಲೆ ಮಲಗಿದ ನಾಹರಹಾವು
ಹುಣಸೂರು ತಾಲೂಕಿನ ಬಿಳಿಕೆರೆ ಗ್ರಾಮದ ಮಲ್ಲಪ್ಪ ದೇವಾಲಯದಲ್ಲಿರುವ ಶಿವಲಿಂಗದ ಮೇಲೆ ನಾಗರ ಹಾವೊಂದು ಮಲಗಿದ್ದು, ಇದನ್ನು ನೋಡಿದ ಭಕ್ತರು ವಿಶೇಷ ಪೂಜೆ ಸಲ್ಲಿಸಿದರು.
ಶಿವ ಲಿಂಗದ ಮೇಲೆ ನಾಗರಹಾವು
ಜಿಲ್ಲೆಯ ಹುಣಸೂರು ತಾಲೂಕಿನ ಬಿಳಿಕೆರೆ ಗ್ರಾಮದ ಮಲ್ಲಪ್ಪ ದೇವಾಲಯದಲ್ಲಿ ಪೂಜೆ ಮಾಡಲು ಬಂದ ಪೂಜಾರಿ ಇದನ್ನು ನೋಡಿ ತಕ್ಷಣ ಗ್ರಾಮಸ್ಥರಿಗೆ ಮಾಹಿತಿ ನೀಡಿದರು.
ದೇವಾಲಯಕ್ಕೆ ಆಗಮಿಸಿದ ಗ್ರಾಮಸ್ಥರು ಶಿವಲಿಂಗದ ಮೇಲಿರುವ ನಗರ ಹಾವನ್ನು ಕಂಡು ಭಕ್ತಿಯಿಂದ ಪೂಜೆ ಸಲ್ಲಿಸಿದರು. ಹಾವು ಲಿಂಗದ ಮೇಲೆ ಇದ್ದ ಹಿನ್ನೆಲೆಯಲ್ಲಿ ದೇವಾಲಯದ ಬಾಗಿಲನ್ನು ಹಾಕಲಾಗಿದೆ.