ಕರ್ನಾಟಕ

karnataka

ETV Bharat / city

ದೇವಾಲಯ ತೆರವು ವಿವಾದ : ಹುಚ್ಚಗಣಿ ಗ್ರಾಮದಲ್ಲಿ ಕಾಂಗ್ರೆಸ್, ಬಿಜೆಪಿ ಕಾರ್ಯಕರ್ತರ ಮಧ್ಯೆ ಮಾರಾಮಾರಿ - ಹುಚ್ಚಗಣಿ ಗ್ರಾಮ

ಮಹಾದೇವಮ್ಮ ದೇಗುಲ ನಿರ್ವಹಣೆಗೆ‌ ಕಮಿಟಿ ರಚಿಸುವ ವಿಚಾರದಲ್ಲಿ ಎರಡು ಪಕ್ಷಗಳ ಕಾರ್ಯಕರ್ತರ ಮಧ್ಯೆ ವೈರತ್ವ ಆರಂಭವಾಗಿದೆ. ಇಂದು ಕೆಪಿಸಿಸಿ ಕಾರ್ಯಾಧ್ಯಕ್ಷ ಆರ್ ಧ್ರುವನಾರಾಯಣ್ ಭೇಟಿ ನೀಡಿ ನಿರ್ಗಮಿಸಿದ ಬಳಿಕ‌ ಈ ಘಟನೆ ನಡೆದಿದೆ..

quarrel between Congress and BJP activists
ಕಾಂಗ್ರೆಸ್, ಬಿಜೆಪಿ ಕಾರ್ಯಕರ್ತರ ಮಧ್ಯೆ ಮಾರಾಮಾರಿ

By

Published : Sep 15, 2021, 3:58 PM IST

ಮೈಸೂರು :ನಂಜನಗೂಡು ತಾಲೂಕಿನ ಹುಚ್ಚಗಣಿ ಗ್ರಾಮದ ಮಹಾದೇವಮ್ಮ ದೇವಸ್ಥಾನ ತೆರವು ವಿವಾದದ ಹಿನ್ನೆಲೆ ಕಾಂಗ್ರೆಸ್ ಹಾಗೂ ಬಿಜೆಪಿ ಕಾರ್ಯಕರ್ತರ ಮಧ್ಯೆ ಮಾರಾಮಾರಿ ನಡೆದಿದೆ.

ಕಾಂಗ್ರೆಸ್-ಬಿಜೆಪಿ ಕಾರ್ಯಕರ್ತರ ಮಧ್ಯೆ ಮಾರಾಮಾರಿ

ಕಾಂಗ್ರೆಸ್ ಕಾರ್ಯಕರ್ತ ರವಿ ಎಂಬಾತ ಬಿಜೆಪಿ ಕಾರ್ಯಕರ್ತ ಉದಯ ರವಿ ಎಂಬಾತನ ಮೇಲೆ ಕಬ್ಬಿಣದ ರಾಡ್​​ನಿಂದ ಹಲ್ಲೆ ಮಾಡಿದ್ದಾರೆ ಎಂಬ ಆರೋಪ ಕೇಳಿ ಬಂದಿದೆ. ಹಲ್ಲೆ ಮಾಡಿ ರವಿ ಪರಾರಿಯಾಗಿದ್ದು, ಉದಯ ರವಿ ರಕ್ತದ ಮಡುವಿನಲ್ಲಿ ಒದ್ದಾಡಿದ್ದಾರೆ.

ಮಹಾದೇವಮ್ಮ ದೇಗುಲ ನಿರ್ವಹಣೆಗೆ‌ ಕಮಿಟಿ ರಚಿಸುವ ವಿಚಾರದಲ್ಲಿ ಎರಡು ಪಕ್ಷಗಳ ಕಾರ್ಯಕರ್ತರ ಮಧ್ಯೆ ವೈರತ್ವ ಆರಂಭವಾಗಿದೆ. ಇಂದು ಕೆಪಿಸಿಸಿ ಕಾರ್ಯಾಧ್ಯಕ್ಷ ಆರ್ ಧ್ರುವನಾರಾಯಣ್ ಭೇಟಿ ನೀಡಿ ನಿರ್ಗಮಿಸಿದ ಬಳಿಕ‌ ಈ ಘಟನೆ ನಡೆದಿದೆ.

ಹುಚ್ಚಗಣಿ ಗ್ರಾಮಕ್ಕೆ ತೆರಳಿದ ಹುಲ್ಲಹಳ್ಳಿ ಪರಿಸ್ಥಿತಿ ತಿಳಿಗೊಳಿಸಲು ಹರಸಾಹಸ ಪಡುತ್ತಿದ್ದಾರೆ‌. ರೊಚ್ಚಿಗೆದ್ದ ಬಿಜೆಪಿ ಕಾರ್ಯಕರ್ತರು ಹಾಗೂ ಉದಯ ರವಿ ಸಹೋದರರು ಮಚ್ಚು, ಲಾಂಗು ಹಿಡಿದು ಓಡಾಟ ನಡೆಸುತ್ತಿದ್ದಾರೆ. ಸದ್ಯ ಗ್ರಾಮದಲ್ಲಿ ಉದ್ವಿಗ್ನ ಸ್ಥಿತಿ ನಿರ್ಮಾಣವಾಗಿದೆ.

ಇದನ್ನೂ ಓದಿ:ದೇವಸ್ಥಾನ ಕಟ್ಟುವುದರಲ್ಲಿ ಹಾಗೂ ಕೆಡುವೋದರಲ್ಲಿ ಬಿಜೆಪಿಯವರು ರಾಜಕೀಯ ಮಾಡ್ತಾರೆ : ಆರ್.ಧ್ರುವನಾರಾಯಣ್

ABOUT THE AUTHOR

...view details