ಮೈಸೂರು:ಕಾಂಗ್ರೆಸ್ನಲ್ಲಿ ನಮಗೆ ಉತ್ತಮ ಗೌರವವಿದೆ. ಯಾವುದೇ ಕಾರಣಕ್ಕೂ ನಾವು ಜೆಡಿಎಸ್ ಪಕ್ಷ ಸೇರಲ್ಲ. ಅದರ ಅವಶ್ಯಕತೆಯೂ ಇಲ್ಲ. ನಮ್ಮ ತಂದೆ ಮತ್ತು ನಾನು ಕಾಂಗ್ರೆಸ್ ತೊರೆಯುತ್ತೇವೆ ಎಂಬುದು ಶುದ್ಧ ಸುಳ್ಳು ಎಂದು ಮಾಜಿ ಸಚಿವ ಡಾ.ಎಚ್.ಸಿ.ಮಹದೇವಪ್ಪ ಅವರ ಪುತ್ರ ಸುನೀಲ್ ಬೋಸ್ ಸ್ಪಷ್ಟನೆ ನೀಡಿದರು.
ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಅವರು, ನಮ್ಮ ಏಳಿಗೆಯನ್ನ ಸಹಿಸದವರು ಈ ರೀತಿಯಾಗಿ ಅಪಪ್ರಚಾರ ಮಾಡುತ್ತಿದ್ದಾರೆ. ಜೆಡಿಎಸ್ ಹಾಗೂ ಬಿಜೆಪಿ ಎರಡೂ ಒಂದೇ. ಮುಸ್ಲಿಮರು ಜೆಡಿಎಸ್ಗೆ ಮತ ನೀಡುವುದು ಒಂದೇ, ಬಿಜೆಪಿಗೆ ಮತ ಹಾಕುವುದು ಒಂದೇ. ನಾವು ಜೆಡಿಎಸ್ಗೆ ಹೋಗುವ ಅವಶ್ಯಕತೆ ಇಲ್ಲ. ಮಹದೇವಪ್ಪ, ಸುನಿಲ್ ಬೋಸ್ ಜೆಡಿಎಸ್ ಸೇರ್ತಾರೆ ಎಂಬುದು ಉಹಾಪೋಹ ಎಂದರು.