ಮೈಸೂರು: ದಕ್ಷಿಣ ಪದವೀಧರ ಕ್ಷೇತ್ರದ ಚುನಾವಣೆಗೆಎಲ್ಲ ಪಕ್ಷದವರು ಬೆಂಬಲ ಕೇಳುತ್ತಿದ್ದಾರೆ. ನಾನು ಮಾತ್ರ ತಟಸ್ಥಳಾಗಿದ್ದೇನೆ. ನನ್ನ ಮುಂದಿನ ರಾಜಕೀಯ ನಿಲುವು ನಿರ್ಧಾರ ಮಾಡೋರು ಜನರು. ಮೊದಲು ಜನರ ಬಳಿ ಚೆರ್ಚೆ ಮಾಡುತ್ತೇನೆ. ನಂತರ ರಾಜಕೀಯ ನಿಲುವು ಸ್ಪಷ್ಟ ಪಡಿಸುತ್ತೇನೆ ಎಂದು ಸಂಸದೆ ಸುಮಲತಾ ಸ್ಪಷ್ಟನೆ ನೀಡಿದರು.
ಮುಂದಿನ ದಿನಗಳಲ್ಲಿ ಬೇರೆ ಪಕ್ಷ ಸೇರುವ ಬಗ್ಗೆ ಮಾತಾನಾಡಿದ ಸುಮಲತಾ:ನನ್ನ ಸಿದ್ಧಾಂತ ಮತ್ತು ನನ್ನ ವಿಚಾರಗಳಿಗೆ ಪಕ್ಷಗಳು ಒಪ್ಪಿದರೆ ಸೇರುತ್ತೇನೆ. ಆದರೆ, ಜನರ ಬಳಿ ನಿರ್ಧಾರ ಕೇಳಿ ಅವರು ಏನು ಹೇಳುತ್ತಾರೋ ಅದರಂತೆ ನಿರ್ಧಾರ ತೆಗೆದು ಕೊಳ್ಳುತ್ತೇನೆ. ಸಮಯ ಸಂದರ್ಭ ನೋಡಿ ನಿರ್ಧಾರ ತೆಗೆದು ಕೊಳ್ಳಲಾಗುವುದು ಎಂದರು.