ಮೈಸೂರು: ನಗರದ ಗೋಪಾಲಕರ ಸಂಘ ಮತ್ತು ಪಶುಪಾಲನೆ ಇಲಾಖೆ ಸಹಯೋಗದೊಂದಿಗೆ ದಿ.ತೂಗುದೀಪ ಶ್ರೀನಿವಾಸ್ ಹಾಗೂ ದಿ.ರೆಬಲ್ ಸ್ಟಾರ್ ಅಂಬರೀಶ್ ಅವರ ಸ್ಮರಣಾರ್ಥವಾಗಿ ಏರ್ಪಡಿಸಿದ್ದ ರಾಜ್ಯಮಟ್ಟದ ಅಧಿಕ ಹಾಲು ಕರೆಯುವ ಸ್ಪರ್ಧೆ ಬೆಂಗಳೂರಿನ ಎಸ್ ರಿಶಿತಾ ಅವರು ತಮ್ಮ ಹಸುವಿನಿಂದ 41.900 ಕೆಜಿ ಹಾಲು ಕರೆಯುವ ಮೂಲಕ 1 ಲಕ್ಷ ನಗದು, 2 ಕೆಜಿ ಬೆಳ್ಳಿ ಹಾಗೂ ಟ್ರೋಫಿಯನ್ನು ಬಾಚಿಕೊಂಡರು.
ರಾಜ್ಯಮಟ್ಟದ ಹಾಲು ಕರೆಯುವ ಸ್ಪರ್ಧೆ: ವಿಜೇತೆಗೆ ಬಹುಮಾನ ಕೊಟ್ಟ ಡಿ ಬಾಸ್ - ಬಹುಮಾನ
ದಿ.ತೂಗುದೀಪ ಶ್ರೀನಿವಾಸ್ ಹಾಗೂ ದಿ.ರೆಬಲ್ ಸ್ಟಾರ್ ಅಂಬರೀಶ್ ಅವರ ಸ್ಮರಣಾರ್ಥವಾಗಿ ಏರ್ಪಡಿಸಿದ್ದ ರಾಜ್ಯಮಟ್ಟದ ಅಧಿಕ ಹಾಲು ಕರೆಯುವ ಸ್ಪರ್ಧೆ
ರಾಜ್ಯಮಟ್ಟದ ಹಾಲು ಕರೆಯುವ ಸ್ಪರ್ಧೆ
ಸ್ಪರ್ಧೆಯಲ್ಲಿ ಪ್ರಥಮ ಬಹುಮಾನ ಪಡೆದ ರಿಶಿತಾರಿಗೆ ಚಾಲೆಂಜಿಂಗ್ ಸ್ಟಾರ್ ದರ್ಶನ್ ಬಹುಮಾನ ನೀಡಿದರು. ನೆಲಮಂಗಲದ ಚಂದನ್ ಮುನಿರಾಜ್ ದ್ವಿತೀಯ ಬಹುಮಾನ ಪಡೆದಿದ್ದು (40.900 ಕೆಜಿ ಹಾಲು), 75 ಸಾವಿರ ನಗದು ಹಾಗೂ 1.50 ಕೆಜಿ ಬೆಳ್ಳಿ, ಬೆಂಗಳೂರಿನ ಜಗನ್ನಾಥ್ ಅವರು ತೃತಿಯ ಸ್ಥಾನ ಪಡೆದಿದ್ದು (40.700 ಕೆಜಿ ಹಾಲು), 50 ಸಾವಿರ ನಗದು ಹಾಗೂ 1 ಬೆಳ್ಳಿ ಟ್ರೋಫಿ ಪಡೆದುಕೊಂಡರು.