ಕರ್ನಾಟಕ

karnataka

ETV Bharat / city

ಕೋಡಿಹಳ್ಳಿ ಚಂದ್ರಶೇಖರ್ ಡ್ರಾಮಾ ಮಾಡುತ್ತಿದ್ದಾರೆ: ಎಸ್.ಟಿ. ಸೋಮಶೇಖರ್ ವಾಗ್ದಾಳಿ - ಕೋಡಿಹಳ್ಳಿ ಚಂದ್ರಶೇಖರ್ ವಿರುದ್ಧ ವಾಗ್ದಾಳಿ

ಸಾರಿಗೆ ನೌಕರರನ್ನು ಎತ್ತಿಕಟ್ಟಿ ಕೋಡಿಹಳ್ಳಿ ಚಂದ್ರಶೇಖರ್ ನಾಟಕ ಮಾಡಿಸುತ್ತಿದ್ದಾರೆ‌. ರೈತರನ್ನು ಎತ್ತಿಕಟ್ಟಿ ಪ್ರತಿಭಟನೆ ಮಾಡಿಸಿದ್ದು ಆಯಿತು, ಈಗ ಸಾರಿಗೆ ನೌಕರರನ್ನು ಈ ರೀತಿ ಎತ್ತಿಕಟ್ಟಿ ಪ್ರತಿಭಟನೆಗೆ ಕುಮ್ಮಕ್ಕು ನೀಡುತ್ತಿದ್ದಾರೆ ಎಂದು ಮೈಸೂರು ಉಸ್ತುವಾರಿ ಸಚಿವ ಎಸ್.ಟಿ. ಸೋಮಶೇಖರ್ ಆಕ್ರೋಶ ವ್ಯಕ್ತಪಡಿಸಿದರು.

ಎಸ್.ಟಿ.ಸೋಮಶೇಖರ್
ಎಸ್.ಟಿ.ಸೋಮಶೇಖರ್

By

Published : Dec 14, 2020, 2:36 PM IST

ಮೈಸೂರು: ರೈತರನ್ನು ಎತ್ತಿಕಟ್ಟಿ ಪ್ರತಿಭಟನೆ ಮಾಡಿಸುವುದಲ್ಲದೆ ಈಗ ಕಾರ್ಮಿಕರನ್ನು ಎತ್ತಿಕಟ್ಟಿ ಪ್ರತಿಭಟನೆ ನಡೆಸುವ ಡ್ರಾಮಾ ಮಾಡುತ್ತಿದ್ದಾರೆ ಎಂದು ಮೈಸೂರು ಉಸ್ತುವಾರಿ ಸಚಿವ ಎಸ್.ಟಿ. ಸೋಮಶೇಖರ್ ಅವರು ಕೋಡಿಹಳ್ಳಿ ಚಂದ್ರಶೇಖರ್ ವಿರುದ್ಧ ವಾಗ್ದಾಳಿ ನಡೆಸಿದರು.

ಕೋಡಿಹಳ್ಳಿ ಚಂದ್ರಶೇಖರ್ ವಿರುದ್ಧ ಎಸ್.ಟಿ.ಸೋಮಶೇಖರ್ ವಾಗ್ದಾಳಿ

ಇಂದು ಗ್ರಾಮಾಂತರ ಬಸ್ ನಿಲ್ದಾಣಕ್ಕೆ ಭೇಟಿ ನೀಡಿ ಪ್ರಯಾಣಿಕರ ಕಷ್ಟವನ್ನು ಆಲಿಸಿದ ಸಚಿವ ಎಸ್.ಟಿ. ಸೋಮಶೇಖರ್ ಅವರು, ಸರ್ಕಾರ ಯೂನಿಯನ್ ಲೀಡರ್​ಗಳ ಮನವಿಗೆ ಸ್ಪಂದಿಸಿದೆ. ಅವರ 10 ಬೇಡಿಕೆಗಳಲ್ಲಿ 9 ಬೇಡಿಕೆಗಳನ್ನು ಈಡೇರಿಸಲು ಸಿಎಂ ಹಾಗೂ ಸಾರಿಗೆ ಸಚಿವರು ಒಪ್ಪಿದ್ದಾರೆ. ಸಾರಿಗೆ ಯೂನಿಯನ್ ಮುಖಂಡರು ಮುಷ್ಕರ ವಾಪಸ್ ಪಡೆಯಲು ಒಪ್ಪಿದ್ದಾರೆ. ಈ ನಡುವೆ ಸಾರಿಗೆ ನೌಕರರನ್ನು ಕೋಡಿಹಳ್ಳಿ ಎತ್ತಿಕಟ್ಟಿ ನಾಟಕ ಮಾಡಿಸುತ್ತಿದ್ದಾರೆ‌. ರೈತರನ್ನು ಎತ್ತಿಕಟ್ಟಿ ಪ್ರತಿಭಟನೆ ಮಾಡಿಸಿದ್ದು ಆಯಿತು, ಈಗ ಸಾರಿಗೆ ನೌಕರರನ್ನು ಈ ರೀತಿ ಎತ್ತಿಕಟ್ಟಿ ಪ್ರತಿಭಟನೆಗೆ ಕುಮ್ಮಕ್ಕು ನೀಡುತ್ತಿದ್ದಾರೆ. ಆ ಮೂಲಕ ಜನರನ್ನು ದಿಕ್ಕು ತಪ್ಪಿಸುವ ಕೆಲಸ ಮಾಡುತ್ತಿದ್ದಾರೆ. ಮೊದಲು ಕೋಡಿಹಳ್ಳಿ ಚಂದ್ರಶೇಖರ್ ಮಾತನ್ನು ಕೇಳುವುದನ್ನು ಬಿಟ್ಟು ಹೊರಗೆ ಬನ್ನಿ ಎಂದು ಸಾರಿಗೆ ನೌಕರರಿಗೆ ಎಸ್.ಟಿ. ಸೋಮಶೇಖರ್ ಕರೆ ನೀಡಿದರು.

ಲಾಕ್​ಡೌನ್‌ನಿಂದಾಗಿ ಕೆಎಸ್​ಆರ್​ಟಿಸಿ ಹಾಗೂ ಬಿಎಂಟಿಸಿಗೆ ಆದಾಯವಿಲ್ಲ. ಆರ್ಥಿಕವಾಗಿ ಈಗ ಚೇತರಿಸಿಕೊಳ್ಳುತ್ತಿದ್ದು‌, ಚೇತರಿಸಿಕೊಂಡ ನಂತರ ಎಲ್ಲಾ ಸಮಸ್ಯೆ ಬಗೆಹರಿಯಲಿದೆ ಎಂದ ಸಚಿವರು, ಎಪಿಎಂಸಿ ಕಾಯ್ದೆ ತಿದ್ದುಪಡಿ ನೀತಿಯನ್ನು ಬದಲಾಯಿಸುವುದಿಲ್ಲ ಎಂದರು. ರೈತರು ತಾವು ಬೆಳೆದ ಬೆಳೆಯನ್ನು ಯಾವುದೇ ಮಾರುಕಟ್ಟೆಯಲ್ಲಿ ಬೇಕಾದರು ಮಾರಾಟ ಮಾಡಬಹುದು. ಜೊತೆಗೆ ಕನಿಷ್ಠ ಬೆಂಬಲ ಬೆಲೆಯು ಇರುತ್ತದೆ. ಆದ್ದರಿಂದ ಈ ಕಾಯ್ದೆ ತಿದ್ದುಪಡಿ ಸಾಧ್ಯವಿಲ್ಲ, ಇದನ್ನು ಬದಲಾಯಿಸುವ ಅಗತ್ಯವಿಲ್ಲ ಎಂದರು.

ಪಂಚಲಿಂಗ ದರ್ಶನ ಸುಸೂತ್ರವಾಗಿ ನೆರವೇರಿದ್ದು, ಮುಂಜಾನೆ 4.30 ರಿಂದ 5.45 ರ ವರೆಗೆ ಧಾರ್ಮಿಕ ಕಾರ್ಯಗಳು ಸುಲಲಿತವಾಗಿ ನಡೆದಿದೆ. ಸ್ಥಳೀಯರಿಗೆ ದೇವರ ದರ್ಶನಕ್ಕೆ ಅವಕಾಶ ಮಾಡಿಕೊಡುವಂತೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳಿಗೆ ತಿಳಿಸಲಾಗಿದೆ. ಪಂಚಲಿಂಗ ದರ್ಶನದಲ್ಲಿ ಸಿಎಂ ಕೂಡ ಭಾಗಿಯಾಗಬೇಕಿತ್ತು. ಆದರೆ ಸಾರಿಗೆ ನೌಕರರ ಮುಷ್ಕರದ ಹಿನ್ನೆಲೆಯಲ್ಲಿ ಬೆಂಗಳೂರಿನಲ್ಲೇ ಉಳಿದುಕೊಂಡಿದ್ದಾರೆ ಎಂದು ಸಚಿವ ಎಸ್.ಟಿ.ಸೋಮಶೇಖರ್ ತಿಳಿಸಿದರು.

ABOUT THE AUTHOR

...view details