ಕರ್ನಾಟಕ

karnataka

ETV Bharat / city

ಪಾರಂಪರಿಕ ಶೈಲಿಯ ಶೌಚಾಲಯ ನಿರ್ಮಾಣಕ್ಕೆ ಸಚಿವ ಎಸ್​ ಟಿ ಸೋಮಶೇಖರ್​​ ಚಾಲನೆ - ಪಾರಂಪರಿಕ ಶೈಲಿಕ ಶೌಚಾಲಯ ನಿರ್ಮಾಣ

ವಿಶೇಷಚೇತನರಿಗೆ ವಿಶೇಷ ಶೌಚಾಲಯದ ವ್ಯವಸ್ಥೆಯನ್ನೂ ಮಾಡಲಾಗಿದೆ. ಸುಮಾರು ಒಂದೂವರೆ ಕೋಟಿ ರೂ. ವೆಚ್ಚದಲ್ಲಿ ಕಟ್ಟಡ ನಿರ್ಮಿಸುತ್ತಿದ್ದು, ಗುತ್ತಿಗೆದಾರರಿಗೆ 5 ವರ್ಷ ಕಾಲಾವಧಿ ‌ನಿರ್ವಹಣೆ ಜವಾಬ್ದಾರಿಯನ್ನು ವಹಿಸಲಾಗಿದೆ..

st somashekhar-inaugurated-construction-of-a-traditional-toilet
ಪಾರಂಪರಿಕ ಶೈಲಿಕ ಶೌಚಾಲಯ ನಿರ್ಮಾಣ

By

Published : Jan 9, 2021, 3:29 PM IST

ಮೈಸೂರು : ನಗರದ ಪುರಭವನದ ಆವರಣದಲ್ಲಿ ಪಾರಂಪರಿಕ ಶೈಲಿಯ ಶೌಚಾಲಯ ಕಟ್ಟಡ ನಿರ್ಮಾಣ ಕಾಮಗಾರಿಗೆ ಜಿಲ್ಲಾ ಉಸ್ತುವಾರಿ ಸಚಿವ ಎಸ್ ಟಿ ಸೋಮಶೇಖರ್ ಶಂಕು ಸ್ಥಾಪನೆ ಮಾಡಿದರು.

ಪಾರಂಪರಿಕ ಶೈಲಿಯ ಶೌಚಾಲಯ ನಿರ್ಮಾಣಕ್ಕೆ ಸಚಿವರಿಂದ ಶಂಕುಸ್ಥಾಪನೆ..

ನಗರದ ಹೃದಯ ಭಾಗವಾದ ಪುರಭವನದಲ್ಲಿ ಮಲ್ಟಿಸ್ಟೋರ್ ಪಾರ್ಕಿಂಗ್ ವ್ಯವಸ್ಥೆ ಬರುತ್ತಿದ್ದು, ನಾಗರಿಕರಿಗೆ ಅನುಕೂಲವಾಗಲೆಂದು ಈ ಸುಸಜ್ಜಿತ ಶೌಚಾಲಯ ನಿರ್ಮಿಸಲಾಗುತ್ತಿದೆ. ಶೌಚಾಲಯ ಕಟ್ಟಡವು 17 ಶೌಚಾಲಯ, 8 ಸ್ನಾನ ಗೃಹ, 1 ಸೆಕ್ಯುರಿಟಿ ಕೊಠಡಿ, 1 ಮಕ್ಕಳಿಗೆ ಹಾಲುಣಿಸುವ ಕೇಂದ್ರ ಒಳಗೊಂಡಿದೆ.

ಪಾರಂಪರಿಕ ಶೈಲಿಯ ಶೌಚಾಲಯ ಮಾದರಿ..

ಓದಿ-ತನ್ನಲ್ಲಿ ಚೀನಾ ವ್ಯಾಕ್ಸಿನ್​ ಕ್ಲಿನಿಕಲ್​ ಹಂತದಲ್ಲಿದ್ದರೂ ಬೇಗ ಲಸಿಕೆ ಕಳುಹಿಸುವಂತೆ ಬ್ರೆಜಿಲ್​ ಅಧ್ಯಕ್ಷ ಮೋದಿಗೆ ಪತ್ರ!

ಅಲ್ಲದೆ, ವಿಶೇಷಚೇತನರಿಗೆ ವಿಶೇಷ ಶೌಚಾಲಯದ ವ್ಯವಸ್ಥೆಯನ್ನೂ ಮಾಡಲಾಗಿದೆ. ಸುಮಾರು ಒಂದೂವರೆ ಕೋಟಿ ರೂ. ವೆಚ್ಚದಲ್ಲಿ ಕಟ್ಟಡ ನಿರ್ಮಿಸುತ್ತಿದ್ದು, ಗುತ್ತಿಗೆದಾರರಿಗೆ 5 ವರ್ಷ ಕಾಲಾವಧಿ ‌ನಿರ್ವಹಣೆ ಜವಾಬ್ದಾರಿಯನ್ನು ವಹಿಸಲಾಗಿದೆ.

ABOUT THE AUTHOR

...view details