ಕರ್ನಾಟಕ

karnataka

ETV Bharat / city

ಮೈಸೂರಿನಲ್ಲಿ ಎಸ್‌ಎಸ್‌ಎಲ್‌ಸಿ ವಿದ್ಯಾರ್ಥಿನಿ ಸಾವು: ನೊಂದ ತಾಯಿಯ ಆಕ್ರಂದನ - ಮೈಸೂರು ಲೇಟೆಸ್ಟ್​​ ಅಪ್ಡೇಟ್​​ ನ್ಯೂಸ್​​

ನನ್ನ ಮಗಳಿಗೆ ಶಿಕ್ಷಕರು ಗದರಿದ್ದಾರೆ. ಇದರಿಂದಾಗಿಯೇ ಆಕೆ ಆತಂಕಕ್ಕೊಳಗಾಗಿ ಸಾವಿಗೀಡಾಗಿರಬಹುದು ಎಂದು‌ ಮೃತ ಅನುಶ್ರೀಯವರ ತಾಯಿ ಸಂಶಯ ವ್ಯಕ್ತಪಡಿಸಿದರು.

mysore
ಮೈಸೂರು

By

Published : Mar 30, 2022, 8:14 PM IST

ಮೈಸೂರು:ಪರೀಕ್ಷಾ ಕೊಠಡಿಯಲ್ಲಿ ಹೃದಯಾಘಾತದಿಂದ ಮೃತಪಟ್ಟಿದ್ದಾರೆ ಎನ್ನಲಾದ ವಿದ್ಯಾರ್ಥಿನಿ ಅನುಶ್ರೀ ಸಾವಿನ ಬಗ್ಗೆ ಪೋಷಕರು ಅನುಮಾನ ವ್ಯಕ್ತಪಡಿಸಿದ್ದಾರೆ. ನನ್ನ ಮಗಳ ಮೇಲೆ ಶಿಕ್ಷಕರು ಗದರಿದ್ದಾರೆ. ಇದರಿಂದಾಗಿ ಆತಂಕಕ್ಕೊಳಗಾಗಿ ಸಾವಿಗೀಡಾಗಿರಬಹುದು ಎಂದು‌ ತಾಯಿ ಹೇಳಿದರು.


ಇದನ್ನೂ ಓದಿ:ಪರೀಕ್ಷೆ ಬರೆಯುತ್ತಿದ್ದ ವೇಳೆಯೇ ಎಸ್​​ಎಸ್​ಎಲ್​ಸಿ ವಿದ್ಯಾರ್ಥಿನಿ ಹೃದಯಾಘಾತದಿಂದ ಮೃತ

ಮಾಜಿ ಸಚಿವ ಡಾ.ಹೆಚ್‌.ಸಿ.ಮಹದೇವಪ್ಪ ಅವರ ಪುತ್ರ ಸುನೀಲ್ ಬೋಸ್, ಅನುಶ್ರೀ ನಿವಾಸಕ್ಕೆ ತೆರಳಿ ಪೋಷಕರಿಗೆ ಸಾಂತ್ವನ ಹೇಳಿದ್ದಾರೆ. ಮಾ.28ರಂದು ವಿದ್ಯಾರ್ಥಿನಿ ಪರೀಕ್ಷೆ ಬರೆಯುತ್ತಿದ್ದಾಗ, ಪರೀಕ್ಷಾ ಕೇಂದ್ರ ಬದಲಾದ ಹಿನ್ನೆಲೆಯಲ್ಲಿ ನಿಗದಿಯಾಗಿರುವ ಪರೀಕ್ಷಾ ಕೇಂದ್ರಕ್ಕೆ ತೆರಳುವಂತೆ ಸೂಚಿಸಲಾಗಿತ್ತು. ಈ ವೇಳೆ ಪರೀಕ್ಷಾ ಕೇಂದ್ರಕ್ಕೆ ಹೋಗುತ್ತಿದ್ದ ಅನುಶ್ರೀ ಕುಸಿದು ಬಿದ್ದು ಹೃದಯಾಘಾತದಿಂದ ಮೃತಪಟ್ಟಿದ್ದಾರೆ ಎನ್ನಲಾಗಿದೆ.

ಇದನ್ನೂ ಓದಿ:ಪರೀಕ್ಷೆ ವೇಳೆ ಮೃತಪಟ್ಟ ವಿದ್ಯಾರ್ಥಿನಿ: ಆಸ್ಪತ್ರೆಗೆ ಶಾಸಕ ಅಶ್ವಿನ್ ಕುಮಾರ್ ಭೇಟಿ, ಕುಟುಂಬಕ್ಕೆ 1 ಲಕ್ಷ ಪರಿಹಾರ ಘೋಷಣೆ

For All Latest Updates

TAGGED:

ABOUT THE AUTHOR

...view details