ಕರ್ನಾಟಕ

karnataka

ETV Bharat / city

ಸಿದ್ದರಾಮಯ್ಯ ಎಷ್ಟು ಸಲ ತೊಡೆ ತಟ್ಟಿ ಬಿದ್ದೋಗಿಲ್ಲ ಹೇಳಿ: ಶ್ರೀನಿವಾಸ್​​​ ಪ್ರಸಾದ್​​​ ವ್ಯಂಗ್ಯ - ಚಾಮರಾಜನಗರ ಸಂಸದ ವಿ.ಶ್ರೀನಿವಾಸ್ ಪ್ರಸಾದ್ ನ್ಯೂಸ್​

ಹೆಚ್.ವಿಶ್ವನಾಥ್ ಸೋತರೆ ಜಗತ್ತು ಮುಳುಗಿ ಹೋಗುತ್ತಾ?, ಸಿದ್ದರಾಮಯ್ಯ ಎಷ್ಟು ಸಲ ತೊಡೆ ತಟ್ಟಿ ಬಿದ್ದೋಗಿಲ್ಲ ಹೇಳಿ? ಎಂದು ಚಾಮರಾಜನಗರ ಸಂಸದ ವಿ.ಶ್ರೀನಿವಾಸ್ ಪ್ರಸಾದ್ ಪ್ರಶ್ನಿಸಿದ್ದಾರೆ.

ವಿ.ಶ್ರೀನಿವಾಸ್ ಪ್ರಸಾದ್
ವಿ.ಶ್ರೀನಿವಾಸ್ ಪ್ರಸಾದ್

By

Published : Dec 8, 2019, 3:06 PM IST

ಮೈಸೂರು: ಹೆಚ್.ವಿಶ್ವನಾಥ್ ಸೋತರೆ ಜಗತ್ತು ಮುಳುಗಿ ಹೋಗುತ್ತಾ?, ಸಿದ್ದರಾಮಯ್ಯ ಎಷ್ಟು ಸಲ ತೊಡೆ ತಟ್ಟಿ ಬಿದ್ದೋಗಿಲ್ಲ ಹೇಳಿ? ಎಂದು ಚಾಮರಾಜನಗರ ಸಂಸದ ವಿ.ಶ್ರೀನಿವಾಸ್ ಪ್ರಸಾದ್ ಪ್ರಶ್ನಿಸಿದ್ದಾರೆ.

ಫಲಿತಾಂಶದ ಕುರಿತು ಮಾತನಾಡಿದ ವಿ.ಶ್ರೀನಿವಾಸ್ ಪ್ರಸಾದ್

ಮೈಸೂರಿನಲ್ಲಿ ಖಾಸಗಿ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಹುಣಸೂರು ಉಪ ಚುನಾವಣೆ ಸೋತರೆ ಏನೂ ಪರಿಣಾಮ ಬೀರುವುದಿಲ್ಲ ಎಂದು ವಿಶ್ವನಾಥ್ ಬಿಜೆಪಿಗೆ ಬರಲು ಪ್ರಮುಖವಾಗಿ ಕಾರಣರಾಗಿದ್ದ ಶ್ರೀನಿವಾಸ್ ಪ್ರಸಾದ್ ಹೇಳಿದ್ರು.

ನಾಳಿನ ಫಲಿತಾಂಶಕ್ಕೆ ಎಲ್ಲರೂ ಕಾಯ್ತಿದ್ದಾರೆ. ಇದು ಜನತೆಗೆ ಬಿಟ್ಟ ವಿಚಾರ. ಅನರ್ಹರ ಬಗ್ಗೆ ಜನರ ಮನಸ್ಥಿತಿ ಏನಿದೆ ಅಂತ ನಾಳೆ ಗೊತ್ತಾಗಲಿದೆ. ರಾಜ್ಯದಲ್ಲಿ ಬಿಜೆಪಿ ಸರ್ಕಾರ ಸ್ಥಿರವಾಗಿದ್ದು, ಉಪ ಚುನಾವಣೆ ಫಲಿತಾಂಶದಲ್ಲಿ ಬಿಜೆಪಿ ಹೆಚ್ಚಿನ ಸ್ಥಾನ ಗೆದ್ದು ಮತ್ತಷ್ಟು ಸ್ಥಿರವಾಗಲಿದೆ ಎಂದರು.

ಇನ್ನು ಸಿದ್ದರಾಮಯ್ಯ ಕೂಡ ಉಪ ಚುನಾವಣೆ ಫಲಿತಾಂಶ ಹೊರ ಬಿದ್ದ ನಂತರ ವೈಟ್ ವಾಶ್ ಆಗುತ್ತಾರೆ. ಸೋಲುವವರ ಬಗ್ಗೆ ಈಗ ಮಾತನಾಡೋದು ಬೇಡ. ಗೆದ್ದವರಿಗೆಲ್ಲರಿಗೂ ಮಂತ್ರಿಭಾಗ್ಯ ಎಂದು ಸಿಎಂ ಹೇಳಿದ್ದಾರೆ. ಬಿಜೆಪಿ, ಅನರ್ಹರಿಗೆ ಕೊಟ್ಟಿರುವ ಭರವಸೆ ಈಡೇರಿಸಲಿದೆ. ಸೋತರೆ ಪಕ್ಷದ ಹೈಕಮಾಂಡ್ ಹಾಗೂ ಮುಖ್ಯಮಂತ್ರಿಗಳು ತೀರ್ಮಾನ ಮಾಡ್ತಾರೆ ಎಂದರು.

ABOUT THE AUTHOR

...view details