ಕರ್ನಾಟಕ

karnataka

ETV Bharat / city

ದೇವೇಗೌಡರು ತಮ್ಮ ಕುಟುಂಬ ಬಿಟ್ಟು ಬೇರೆ ಯಾರಿಗಾದ್ರೂ ಅಧಿಕಾರ ಕೊಟ್ಟಿದ್ದಾರಾ? - undefined

ನಂಜನಗೂಡಿನಲ್ಲಿ ಶ್ರೀನಿವಾಸ್ ಪ್ರಸಾದ್ ಸುದ್ದಿಗೋಷ್ಠಿ. ಮಾಜಿ ಪ್ರಧಾನಿ ದೇವೇಗೌಡ ಹಾಗೂ ಕಾಂಗ್ರೆಸ್ ವಿರುದ್ಧ ಟೀಕೆ. ಮಾಜಿ ಸಿಎಂ ಸಿದ್ದಾರಾಮಯ್ಯ ಅಭಿವೃದ್ಧಿ ಮಾಡಿದ್ರೆ ತವರು ಜಿಲ್ಲೆಯಲ್ಲಿ ಸೋಲುತ್ತಿರಲಿಲ್ಲವೆಂದು ಲೇವಡಿ.

ಚಾಮರಾಜನಗರ ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ವಿ.ಶ್ರೀನಿವಾಸ್ ಪ್ರಸಾದ್

By

Published : Apr 2, 2019, 5:02 AM IST

ಮೈಸೂರು: ಹೆಚ್.ಡಿ.ದೇವೇಗೌಡರು ತಮ್ಮ ಕುಟುಂಬ ಬಿಟ್ಟು ಬೇರೆ ಯಾರಿಗಾದರೂ ಉನ್ನತ ಅಧಿಕಾರಿ ಕೊಟ್ಟಿದ್ದಾರಾ?. ಆದರೆ ಕಾಂಗ್ರೆಸ್ ಅವರ ಮುಂದೆ ಕೈಕೊಟ್ಟಿಕೊಂಡು ನಿಂತಿದೆ ಎಂದು ಚಾಮರಾಜನಗರ ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ವಿ.ಶ್ರೀನಿವಾಸ್ ಪ್ರಸಾದ್ ಹೇಳಿದ್ದಾರೆ.

ನಂಜನಗೂಡು ತಾಲೂಕಿನಲ್ಲಿ ಸುದ್ದಿಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಅವರು, ಕುಮಾರಸ್ವಾಮಿ ಮುಖ್ಯಮಂತ್ರಿಯಾಗಿ ಪ್ರಮಾಣವಚನ ಸ್ವೀಕಾರ ಮಾಡುವಾಗ ಮಹಾಘಟ್‍ಬಂಧನ್ ಮಾಡಲು ಎಲ್ಲ ನಾಯಕರು ಬಂದ್ದಿದ್ರು, ಆದ್ರೆ ಈಗ ಚುನಾವಣೆಯಲ್ಲಿ ಎಲ್ಲ ಎಲ್ಲಿದ್ದಾರೆ?. ಬರಲು ದೇವೇಗೌಡರು ಬಿಡುವುದಿಲ್ಲ, ರಾಹುಲ್ ಗಾಂಧಿಯೂ ಒಪ್ಪಿಕೊಳ್ಳುವುದಿಲ್ಲ. ಇವರಿಬ್ಬರಿಗೂ ಅಧಿಕಾರ ಬೇಕು ಎಂದು ಟೀಕಿಸಿದರು.

ಚಾಮರಾಜನಗರ ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ವಿ.ಶ್ರೀನಿವಾಸ್ ಪ್ರಸಾದ್

ಸಿದ್ದರಾಮಯ್ಯನವರು ಉತ್ತಮ ಆಡಳಿತ ನೀಡಿದ್ದರೆ, ತವರು ಜಿಲ್ಲೆಯಲ್ಲಿ ಸೋಲುತ್ತಿರಲಿಲ್ಲ. ಅಲ್ಲದೇ ಅವರ ಹಿಂದೆ ಇದ್ದ 17 ಮಂದಿ ಕೂಡ ಸೋಲುತ್ತಿರಲ್ಲಿಲ್ಲ. ಸಿದ್ದರಾಮಯ್ಯನಿಗೆ ಎಲ್ಲರಿಗೂ ಏಕವಚನದಲ್ಲಿ ಮಾತನಾಡಿ ಅಭ್ಯಾಸವಿದೆ ಎಂದರು.

For All Latest Updates

ABOUT THE AUTHOR

...view details